ಯೆಶಾಯ 29:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅಯ್ಯೋ, ನೀವು ಎಂಥಾ ಮೂರ್ಖರು! ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು. ಕೆಲಸ ಮಾಡಿದವನಿಗೆ ಮಾಡಲ್ಪಟ್ಟದ್ದು, “ಆತನು ಕೆಲಸ ಮಾಡಲಿಲ್ಲ” ಎಂದು ಹೇಳುವುದೋ? ಇಲ್ಲವೇ, ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸಲ್ಪಟ್ಟದ್ದು, “ಆತನಿಗೆ ವಿವೇಕವಿಲ್ಲ” ಎಂದು ಹೇಳುವುದೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಇವರು ಎಲ್ಲವನ್ನೂ ತಲೆಕೆಳಗಾಗಿಸುತ್ತಾರೆ. ಜೇಡಿಮಣ್ಣು ಕುಂಬಾರನಿಗೆ ಸಾಟಿಯೇ? ಕೃತಿಯು ತನ್ನ ಕರ್ತನನ್ನೇ ಕುರಿತು : “ನಿನಗೆ ಬುದ್ಧಿಯಿಲ್ಲ,” ಎಂದೀತೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಅಯ್ಯೋ, ನೀವು ಎಂಥಾ ಮೂರ್ಖರು! ಕುಂಬಾರನು ಮಣ್ಣೆನಿಸಿಕೊಂಡಾನೇ? ಕಾರ್ಯವು ಕರ್ತೃವನ್ನು ಕುರಿತು ಅವನು ನನ್ನನ್ನು ಮಾಡಲಿಲ್ಲ ಎಂದುಕೊಂಡೀತೇ? ನಿರ್ಮಿತವಾದದ್ದು ನಿರ್ಮಿಸಿದವನ ವಿಷಯವಾಗಿ ಅವನಿಗೆ ವಿವೇಕವಿಲ್ಲ ಎಂದೀತೇ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ನೀವು ಗಲಿಬಿಲಿಗೊಂಡಿದ್ದೀರಿ. ಜೇಡಿಮಣ್ಣು ಕುಂಬಾರನಿಗೆ ಸಮಾನವಾಗಿದೆ ಎಂದು ಯೋಚಿಸುತ್ತೀರಿ. ಒಂದು ವಸ್ತು ಅದರ ನಿರ್ಮಾಣಿಕನಿಗೆ, “ನೀನು ನನ್ನನ್ನು ನಿರ್ಮಿಸಲಿಲ್ಲ” ಎಂದು ಕೇಳಬಹುದು ಎಂದು ನೆನಸುತ್ತೀರಿ. ಒಂದು ಮಡಿಕೆಯು ಅದನ್ನು ಮಾಡಿದವನಿಗೆ, “ನಿನಗೆ ಏನೂ ಗೊತ್ತಿಲ್ಲ” ಎಂದು ಹೇಳಿದ ಹಾಗಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು, ಕುಂಬಾರನು ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು! ಉಂಟುಮಾಡಿದವನಿಗೆ ಉಂಟುಮಾಡಿದ್ದು, “ನೀನು ನನ್ನನ್ನು ಉಂಟುಮಾಡಲಿಲ್ಲ,” ಎಂತಲೂ, ಮಡಕೆ ಕುಂಬಾರನಿಗೆ, “ನಿನಗೆ ಏನೂ ಗೊತ್ತಿಲ್ಲ,” ಎಂತಲೂ ಹೇಳಬಹುದೇ? ಅಧ್ಯಾಯವನ್ನು ನೋಡಿ |