Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 18:6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವೆಲ್ಲವು ಬೆಟ್ಟದ ಪಕ್ಷಿಗಳಿಗೂ, ಭೂಮಿಯ ಕಾಡುಮೃಗಗಳಿಗೂ ಆಹಾರವಾಗಿ ಬಿದ್ದಿರುವವು. ಬೇಸಿಗೆಯಲ್ಲಿ ಪಕ್ಷಿಗಳಿಗೂ, ಹಿಮಕಾಲದಲ್ಲಿ ಕಾಡುಮೃಗಗಳಿಗೂ ಆಹಾರವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಹೀಗೆ ಕಡಿಯಲ್ಪಟ್ಟವರ ಶವಗಳೆಲ್ಲ ರಣಹದ್ದುಗಳ ಮತ್ತು ಕಾಡುಮೃಗಗಳ ಪಾಲಾಗುವುವು; ಪಕ್ಷಿಗಳಿಗೆ ಬೇಸಿಗೆಯ ಆಹಾರವಾಗುವುವು, ಪ್ರಾಣಿಗಳಿಗೆ ಚಳಿಗಾಲದ ಉಣಿಸಾಗುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಕಡಿಯಲ್ಪಟ್ಟವರ ಶವಗಳೆಲ್ಲಾ ಬೆಟ್ಟದ ಹದ್ದುಗಳಿಗೂ ಕಾಡುಮೃಗಗಳಿಗೂ ಪಾಲಾಗಿ ಬಿದ್ದಿರುವವು, ಬೇಸಿಗೆಯಲ್ಲಿ ಹದ್ದುಗಳಿಗೂ ಹಿಮಗಾಲದಲ್ಲಿ ಕಾಡುಮೃಗಗಳಿಗೂ ಜೀವನವಾಗುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅವುಗಳನ್ನು ಅಡವಿಯ ಪ್ರಾಣಿಗಳಿಗೂ ಬೆಟ್ಟದಹಕ್ಕಿಗಳಿಗೂ ತಿನ್ನಲು ಬಿಡುವರು. ಪಕ್ಷಿಗಳು ಬೇಸಿಗೆಕಾಲದಲ್ಲಿ ದ್ರಾಕ್ಷಾಲತೆಗಳ ಮೇಲೆ ವಾಸಿಸುತ್ತವೆ; ಚಳಿಗಾಲದಲ್ಲಿ ಕಾಡುಪ್ರಾಣಿಗಳು ದ್ರಾಕ್ಷಾಲತೆಗಳನ್ನು ತಿನ್ನುತ್ತವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವುಗಳೆಲ್ಲ ಬೆಟ್ಟದ ಹದ್ದುಗಳಿಗೂ, ಭೂಮಿಯ ಮೃಗಗಳಿಗೂ ಆಹಾರವಾಗುವುವು. ಅದು ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿಯೂ, ಕಾಡುಮೃಗಗಳಿಗೆ ಚಳಿಗಾಲದಲ್ಲಿಯೂ ಆಹಾರವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 18:6
12 ತಿಳಿವುಗಳ ಹೋಲಿಕೆ  

ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಹಾಗು ಭೂಜಂತುಗಳಿಗೂ ಆಹಾರವಾಗುವವು; ಅವುಗಳನ್ನು ಬೆದರಿಸುವವರು ಯಾರೂ ಇರುವುದಿಲ್ಲ.


“ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.


ಅರಣ್ಯದ ಸಕಲ ಮೃಗಗಳೇ, ಕಾಡಿನ ಎಲ್ಲಾ ಜಂತುಗಳೇ, ನುಂಗಿಬಿಡುವುದಕ್ಕೆ ಬನ್ನಿರಿ!


ಆದರೆ ನೀನಾದರೋ ನಿನ್ನ ಸಮಾಧಿಗೆ ದೂರವಾಗಿ ಕೆಟ್ಟ ಕೊಂಬೆಯಂತೆ ಬಿಸಾಡಲ್ಪಟ್ಟಿದ್ದೀ; ಕತ್ತಿಯಿಂದ ತಿವಿದು ಗುಂಡಿಯ ಕಲ್ಲುಗಳ ಪಾಲಾಗಿ ಹತರಾದವರ ಹೊದಿಕೆಯಂತೆಯೂ,


ಇಗೋ, ಕಸ್ದೀಯರ ದೇಶವು! ಈ ಜನಾಂಗವು ನಿರ್ನಾಮವಾಯಿತು. ಅಶ್ಶೂರ್ಯರು ಈ ದೇಶವನ್ನು ಕಾಡುಮೃಗಗಳಿಗೆ ಈಡುಮಾಡಿದರು. ಗೋಪುರಗಳನ್ನು ಕಟ್ಟಿಕೊಂಡು ಅದರ ಕೋಟೆಗಳನ್ನು ಕೆಡವಿ ಅದನ್ನು ನಾಶಪಡಿಸಿದರು.


ಮೂಡಲಿಂದ ಒಂದು ಪಕ್ಷಿಯನ್ನು ಬರಮಾಡು, ದೂರದೇಶದಿಂದ ನನ್ನ ಸಂಕಲ್ಪವನ್ನು ನೆರವೇರಿಸುವ ಮನುಷ್ಯನು ಬರಲಿ ಎಂದು ಕರೆದಿದ್ದೇನೆ. ಎಂದು ನಾನೇ ನುಡಿದಿದ್ದೇನೆ, ನಾನು ಅದನ್ನು ಈಡೇರಿಸುವೆನು. ಆಲೋಚಿಸಿದ್ದೇನೆ, ನಾನು ಅದನ್ನು ಸಾಧಿಸುವೆನು.


ಅವರು ಘೋರವಾದ ಮರಣಕ್ಕೆ ಗುರಿಯಾಗುವರು, ಅವರಿಗಾಗಿ ಯಾರೂ ಗೋಳಾಡುವುದಿಲ್ಲ, ಅವರನ್ನು ಯಾರೂ ಹೂಣಿಡುವುದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು. ಖಡ್ಗವೂ, ಕ್ಷಾಮವೂ ಅವರನ್ನು ನಿರ್ಮೂಲ ಮಾಡುವವು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವಾಗುವವು” ಎಂಬುದೇ.


ಅದರ ಬುಡದ ಮೇಲೆ ಎಲ್ಲಾ ಆಕಾಶದ ಪಕ್ಷಿಗಳು ಕುಳಿತುಕೊಳ್ಳುವವು; ಅದರ ಕೊಂಬೆಗಳಲ್ಲಿ ಸಮಸ್ತ ಭೂಜಂತುಗಳು ಇರುವವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು