ಯೆಶಾಯ 18:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಕೊಯ್ಲಿನ ಕಾಲಕ್ಕೆ ಮೊದಲು ಮೊಗ್ಗು ಬಿಟ್ಟಾದ ಮೇಲೆ, ಹೂವಿನಿಂದ ಹೀಚು ದ್ರಾಕ್ಷಿ ದೋರೆ ಕಾಯಿಯಾಗುವಾಗ, ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಗಿಡದಲ್ಲಿ ಮೊಗ್ಗು ಕಚ್ಚಿ, ಹೂ ಅರಳಿ, ಹೀಚು ದೋರೆಗಾಯಿಯಾಗುತ್ತಿರುವಾಗ, ಕೊಯಿಲು ಕಾಲಕ್ಕೆ ಮುಂಚೆಯೇ ಅದರ ಕೊಂಬೆಗಳನ್ನೂ ಕವಲುಗಳನ್ನೂ ಶತ್ರುಗಳು ಕತ್ತರಿಸಿಹಾಕುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಕೊಯ್ಲಿನ ಕಾಲಕ್ಕೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಿಂದಾದ ಹೀಚು ದೋರೆಗಾಯಿಯಾಗುತ್ತಿರುವಾಗ ಆತನು ಕುಡುಗೋಲುಗಳಿಂದ ಕುಡಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆಗ ಭಯಂಕರವಾದ ಒಂದು ಘಟನೆಯು ನಡೆಯುವದು. ಅದು ಪುಷ್ಪಗಳು ಅರಳುವ ಕಾಲದ ನಂತರ ನಡೆಯುವದು. ಹೊಸ ದ್ರಾಕ್ಷಾಲತೆಗಳು ಚಿಗುರುತ್ತಾ ಬೆಳೆಯುವವು. ಆದರೆ ಅವು ಫಲಕೊಡುವದಕ್ಕಿಂತ ಮೊದಲೇ ಶತ್ರುಗಳು ಬಂದು ಬಳ್ಳಿಗಳನ್ನು ಕೊಯ್ದುಹಾಕುವರು. ಬಳ್ಳಿಗಳನ್ನು ನಾಶಮಾಡಿ ವೈರಿಗಳು ಅವುಗಳನ್ನು ದೂರ ಬಿಸಾಡಿಬಿಡುವರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಏಕೆಂದರೆ ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷಿ ಕಾಯಿಯಾಗುವಾಗ ಅವರು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ, ಚಿಗುರುಗಳನ್ನು ಕಡಿದುಹಾಕುವರು. ಅಧ್ಯಾಯವನ್ನು ನೋಡಿ |