ಯೆಶಾಯ 16:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಇದಲ್ಲದೆ ಸಿಂಹಾಸನವು ಒಡಂಬಡಿಕೆಯ ನಂಬಿಗಸ್ತಿಕೆಯಲ್ಲಿ ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ನೀತಿನ್ಯಾಯದಿಂದ ಕುಳಿತುಕೊಳ್ಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಸ್ಥಾಪಿತವಾಗುವುದಾಗ ಅಚಲ ಒಲವಿನ ಸಿಂಹಾಸನವು, ಅದನಲಂಕರಿಸುವನು ಪ್ರಾಮಾಣಿಕ ದಾವೀದ ವಂಶಜನು. ದೊರಕಿಸುವನಾತ ನ್ಯಾಯನೀತಿಯನು, ಶೀಘ್ರದಲೆ ನೆರವೇರಿಸುವನು ಸರಿಕಂಡದುದನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಇದಲ್ಲದೆ ಸಿಂಹಾಸನವು ಕೃಪಾಧಾರದ ಮೇಲೆ ಸ್ಥಾಪಿತವಾಗಿದೆ; ರಾಜ್ಯಭಾರಪ್ರವೀಣನೂ ಧರ್ಮಾಸಕ್ತನೂ ನ್ಯಾಯನಿಪುಣನೂ ಆದವನು ದಾವೀದನ ಗುಡಾರದಲ್ಲಿನ ಆ ಸಿಂಹಾಸನದ ಮೇಲೆ ಸತ್ಯಪರನಾಗಿ ಕುಳಿತಿದ್ದಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಆಗ ಹೊಸ ಅರಸನು ಬರುವನು. ಆತನು ನ್ಯಾಯವಾದವುಗಳನ್ನು ಮತ್ತು ಒಳ್ಳೆಯವುಗಳನ್ನು ಮಾಡುವನು. ಆತನು ದಾವೀದನ ವಂಶದವನಾಗಿದ್ದಾನೆ. ಆತನು ಪ್ರಾಮಾಣಿಕನೂ ಪ್ರೀತಿದಯೆಗಳಿಂದ ತುಂಬಿದವನೂ ಆಗಿರುವನು. ಆತನ ನ್ಯಾಯತೀರ್ಪು ನ್ಯಾಯಕ್ಕನುಸಾರವಾಗಿರುವದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು. ಅಧ್ಯಾಯವನ್ನು ನೋಡಿ |