Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 10:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ದಂಡನೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ದಂಡನೆಯ ದಿನದಂದು ಏನು ಮಾಡುವಿರಿ? ದೂರದಿಂದ ಬರುವ ವಿನಾಶದಿಂದ ಹೇಗೆ ಪಾರಾಗುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಆಸ್ತಿಪಾಸ್ತಿಯನ್ನು ಎಲ್ಲಿ ಅವಿತಿಡುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ದಂಡನೆಯ ದಿನದಲ್ಲಿಯೂ ದೂರದಿಂದ ಬರುವ ನಾಶನದಲ್ಲಿಯೂ ಏನು ಮಾಡುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಯಾರ ವಶಮಾಡುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನ್ಯಾಯಶಾಸ್ತ್ರಿಗಳೇ, ನಿಮ್ಮ ಕಾರ್ಯಗಳಿಗೆ ನೀವೇ ಉತ್ತರ ಕೊಡಬೇಕು. ಆಗ ನೀವು ಏನು ಮಾಡುವಿರಿ? ದೂರದೇಶದಿಂದ ನಿಮ್ಮ ನಾಶನವು ಬರುತ್ತಲಿದೆ. ಸಹಾಯಕ್ಕಾಗಿ ಎಲ್ಲಿಗೆ ಓಡುವಿರಿ? ನಿಮ್ಮ ಐಶ್ವರ್ಯವೂ ನಿಮ್ಮ ಧನರಾಶಿಯೂ ನಿಮ್ಮನ್ನು ರಕ್ಷಿಸಲಾರವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ವಿಚಾರಣೆಯ ದಿನದಲ್ಲಿಯೂ, ದೂರದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡುವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ಐಶ್ವರ್ಯವನ್ನು ಎಲ್ಲಿ ಬಿಡುವಿರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 10:3
40 ತಿಳಿವುಗಳ ಹೋಲಿಕೆ  

ದಂಡನೆಯ ದಿನಗಳು ಹತ್ತಿರವಾಗಿದೆ, ಮುಯ್ಯಿತೀರಿಸುವ ದಿನಗಳು ಸಮೀಪಿಸಿವೆ. ಅದು ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು; ಇಸ್ರಾಯೇಲೇ, ನಿನ್ನ ಅಧರ್ಮವು ಬಹಳವಾಗಿರುವುದರಿಂದಲೂ, ವಿರೋಧವು ಹೆಚ್ಚಾಗಿರುವುದರಿಂದಲೂ, “ಪ್ರವಾದಿಯು ಮೂರ್ಖನು ಮತ್ತು ದೇವರಾತ್ಮ ಪ್ರೇರಿತನು ಹುಚ್ಚನು” ಅಂದುಕೊಳ್ಳುತ್ತೀ.


ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡೆನು? ಆತನು ವಿಚಾರಿಸುವಾಗ ಯಾವ ಉತ್ತರಕೊಟ್ಟೇನು?


ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.


ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿ, ಬಂಗಾರಗಳೂ ಕೂಡಾ ಅವರನ್ನು ರಕ್ಷಿಸಲಾರವು; ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವುದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು!


ಇಗೋ, ಯೆಹೋವನು ಭೂನಿವಾಸಿಗಳಿಗೆ ಅವರ ಪಾಪ ಫಲವನ್ನು ತಿನ್ನಿಸಬೇಕೆಂದು ತನ್ನ ಸ್ಥಳದಿಂದ ಹೊರಡುತ್ತಾನೆ; ಭೂಮಿಯು ತನ್ನಲ್ಲಿ ಇಂಗಿದ್ದ ರಕ್ತವನ್ನು ಪ್ರಕಟಮಾಡುವುದು, ತನ್ನ ನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಡುವುದಿಲ್ಲ.”


ಆ ದಿನದಲ್ಲಿ ಈ ತೀರದಲ್ಲಿ ವಾಸಿಸುವವರು ಹೇಳುವುದೇನೆಂದರೆ, “ಇಗೋ, ಅಶ್ಶೂರದ ಅರಸರಿಂದ ಬಿಡುಗಡೆಯಾಗಬೇಕೆಂದು ನಾವು ಯಾರನ್ನು ಶರಣಾಗತರಾಗಿ ಆಶ್ರಯಿಸಿ ನಿರೀಕ್ಷಿಸಿದ್ದೆವೋ ಅವರಿಗೆ ಈ ಗತಿ ಬಂತಲ್ಲಾ ಮತ್ತು ನಾವು ತಪ್ಪಿಸಿಕೊಳ್ಳುವುದು ಹೇಗೆ?” ಎಂದು ಅಂದುಕೊಳ್ಳುವರು.


ಆತನು ದೂರದ ಜನಾಂಗದವರಿಗೆ ಗುರುತಾಗಿ ಧ್ವಜವೆತ್ತಿ, ಅವರನ್ನು ಭೂಲೋಕದ ಅಂಚಿನಿಂದ ಸಿಳ್ಳು ಹಾಕಿ ಕರೆಯುವನು. ಇಗೋ ಅವರೆಲ್ಲ ತ್ವರೆಪಟ್ಟು ವೇಗವಾಗಿ ಬರುತ್ತಾರೆ.


ಧನವು ಕೋಪದ ದಿನದಲ್ಲಿ ವ್ಯರ್ಥ, ಧರ್ಮವು ಮರಣವಿಮೋಚಕ.


ರಣಹದ್ದು ಹೇಗೆ ದೂರದಿಂದ ಹಾರಿಬರುವುದೋ ಹಾಗೆಯೇ ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವು ನಿಮ್ಮ ಮೇಲೆ ಬರುವಂತೆ ಯೆಹೋವನು ಮಾಡುವನು.


ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ. ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?


ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹುದೂರ ದೇಶದಿಂದ ಬಾಬೆಲಿನಿಂದ ನನ್ನ ಬಳಿಗೆ ಬಂದವರು” ಎಂದು ಉತ್ತರಕೊಟ್ಟನು.


“ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಆ ಭ್ರಷ್ಟರು ನಡುಕಕ್ಕೆ ಒಳಗಾಗಿ, ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗುವರು” ಎಂದುಕೊಳ್ಳುತ್ತಾರೆ.


ನೀವು, ‘ಬೇಡವೇ ಬೇಡ, ಕುದುರೆಗಳ ಮೇಲೆ ಓಡುವೆವು’ ಎಂದುಕೊಂಡಿದ್ದರಿಂದ ನೀವು ಓಡಿಯೇ ಹೋಗುವಿರಿ, ನೀವು, ‘ವೇಗವಾಗಿ ಸವಾರಿ ಮಾಡುವೆವು’ ಎಂದುಕೊಂಡಿದ್ದರಿಂದ ವೇಗಿಗಳೇ ನಿಮ್ಮನ್ನು ಅಟ್ಟಿಬಿಡುವರು.


ಹೀಗಿರುವುದರಿಂದ ಪಾತಾಳವು ಹೆಚ್ಚು ಆತುರದಿಂದ ಅಗಾಧವಾಗಿ ಬಾಯಿ ತೆರೆಯಲು, ಅವರ ಮಹಿಮೆ, ಕೋಲಾಹಲ, ಗದ್ದಲ, ಉಲ್ಲಾಸ ಇವೆಲ್ಲವುಗಳು ಅದರೊಳಗೆ ಬಿದ್ದುಹೋಗುವವು.


ಅವರು ಯೊರ್ದನ್ ನದಿಯವರೆಗೂ ಹೋಗಿ, ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನು ಸಾಮಾನುಗಳನ್ನು ಬಿಸಾಡಿದ್ದನ್ನೂ ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು.


“ನಮ್ಮ ತಂದೆಯ ಆಸ್ತಿಯೆಲ್ಲಾ ಯಾಕೋಬನ ಪಾಲಾಯಿತು, ನಮ್ಮ ತಂದೆಯ ಆಸ್ತಿಯಿಂದಲೇ ಅವನಿಗೆ ಇಷ್ಟೊಂದು ಐಶ್ವರ್ಯವುಂಟಾಯಿತು” ಎಂಬುದಾಗಿ ಲಾಬಾನನ ಮಕ್ಕಳು ಹೇಳಿಕೊಳ್ಳುವ ಮಾತುಗಳು ಯಾಕೋಬನ ಕಿವಿಗೆ ಬಿದ್ದವು.


ಹೀಗಿರಲು ಎಫ್ರಾಯೀಮು ತಾನು ರೋಗಿಯೆಂದು ತಿಳುಕೊಂಡಿತು, ಯೆಹೂದವು ತನ್ನ ವ್ರಣವನ್ನು ನೋಡಿಕೊಂಡಿತು; ಆಗ ಎಫ್ರಾಯೀಮು ಅಶ್ಶೂರದ ಕಡೆಗೆ ತಿರುಗಿಕೊಂಡು ಜಗಳಗಂಟ ಮಹಾರಾಜನ ಬಳಿಗೆ ದೂತರನ್ನು ಕಳುಹಿಸಿತು; ಆದರೆ ಅವನು ನಿಮ್ಮನ್ನು ಸ್ವಸ್ಥಮಾಡಲಾರನು, ನಿಮ್ಮ ಗಾಯವನ್ನು ಗುಣಪಡಿಸಲಾರನು.


ಗೋಳಾಡಿರಿ! ಏಕೆಂದರೆ ಯೆಹೋವನ ದಿನವು ಸಮೀಪಿಸಿತು. ಅದು ಸರ್ವಶಕ್ತನಿಂದ ನಾಶವಾಗುವಂತೆ ಬರುವುದು.


“ಆ ದಿನದಲ್ಲಿ, ಯಾಕೋಬಿನ ಮಾಂಸದ ಕೊಬ್ಬು ಕರಗಿ, ಅದರ ಮಹಿಮೆಯೂ ಕ್ಷೀಣವಾಗುವುದು.


ನೀನು ಆ ಒಡೆಯರ ಮೇಲೆ ಕೈಮಾಡಿ, ಅವರನ್ನು ನಿರ್ಮೂಲಮಾಡಿ ಅವರ ಜ್ಞಾಪಕವನ್ನು ಅಳಿಸಿಬಿಟ್ಟಿದ್ದಿ. ಸತ್ತವರು ಪುನಃ ಬದುಕುವುದಿಲ್ಲ, ಪ್ರೇತಗಳು ಎದ್ದು ಬರುವುದಿಲ್ಲ.


ಸೇನಾಧೀಶ್ವರನಾದ ಯೆಹೋವನು ಗುಡುಗು, ಭೂಕಂಪ, ಮಹಾಶಬ್ದ, ಬಿರುಗಾಳಿ, ಚಂಡಮಾರುತ, ದಹಿಸುವ ಅಗ್ನಿಯ ಜ್ವಾಲೆ ಇವುಗಳ ಮೂಲಕ ನಿನ್ನನ್ನು ಶಿಕ್ಷಿಸುವನು.


ತಮಗೆ ಸಹಾಯವನ್ನೂ, ಪ್ರಯೋಜನವನ್ನೂ ಮಾಡಲಾರದೆ ನಾಚಿಕೆಯನ್ನೂ, ಅವಮಾನವನ್ನೂ ಉಂಟುಮಾಡುವ ವ್ಯರ್ಥವಾದ ಈ ಜನಾಂಗದ ವಿಷಯವಾಗಿ ಎಲ್ಲರೂ ಲಜ್ಜೆಪಡುವರು.”


ಐಗುಪ್ತದ ಸಹಾಯವು ವ್ಯರ್ಥ ನಿರರ್ಥಕ; ಆದುದರಿಂದ ನಾನು ಅದಕ್ಕೆ ಸುಮ್ಮನೆ ಬಿದ್ದಿರುವ ಜಂಬದ ಮೃಗವೆಂದು ಹೆಸರಿಟ್ಟಿದ್ದೇನೆ.


ಎಲೈ, ನಗರವೇ, ನೀನು ಸೂರೆಯಾಗುವಾಗ ಏನು ಮಾಡುವಿ? ನೀನು ರಕ್ತಾಂಬರವನ್ನು ಹೊದ್ದು ಸುವರ್ಣಾಭರಣಗಳಿಂದ ನಿನ್ನನ್ನು ಅಲಂಕರಿಸಿಕೊಂಡು, ನೀಲಾಂಜನ ಕಾಡಿಗೆಯಿಂದ ಕಣ್ಣುಗಳನ್ನು ಅಗಲಿಸಿಕೊಂಡು ಶೃಂಗರಿಸಿಕೊಂಡರೇನು, ನಿನ್ನನ್ನು ಶೃಂಗಾರಿಸಿಕೊಳ್ಳುವುದು ವ್ಯರ್ಥ. ನಿನ್ನೊಂದಿಗೆ ವ್ಯಭಿಚಾರ ಮಾಡಿದವರೇ ನಿನ್ನನ್ನು ಧಿಕ್ಕರಿಸಿ ನಿನ್ನ ಪ್ರಾಣವನ್ನೇ ಹುಡುಕುತ್ತಾರೆ.


ನಾನು ಅವರನ್ನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ?” ಎಂದು ನುಡಿಯುತ್ತಾನೆ.


ಆಯುಧ ಸನ್ನದ್ಧರಾದ ಸಂಹಾರಕರನ್ನು ನಿನ್ನ ವಿರುದ್ಧವಾಗಿ ಸಿದ್ಧಪಡಿಸುವೆನು; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.


ನೀವು ಹಬ್ಬದ ದಿನದಲ್ಲಿ, ಯೆಹೋವನ ಮಹೋತ್ಸವ ದಿನದಲ್ಲಿ ಏನು ಮಾಡುವಿರಿ?


ಅವರಲ್ಲಿ ಉತ್ತಮನೂ ಮುಳ್ಳಿನ ಪೊದೆಗೆ ಸಮಾನ, ಸತ್ಯವಂತನೂ ಕೂಡ ಮುಳ್ಳುಬೇಲಿಗಿಂತ ಕಡೆ. ನಿನ್ನ ಕಾವಲುಗಾರರು ಮುಂತಿಳಿಸಿದ ನಿನ್ನ ದಂಡನೆಯ ದಿನ ಬಂದಿದೆ. ಈಗ ನಿನ್ನ ಜನರಿಗೆ ಭ್ರಾಂತಿ ಹಿಡಿಯುವುದು.


ಒಬ್ಬನು ಕಾಲುಚಾಚಿಕೊಂಡು ಮಲಗುವನೆಂದರೆ ಹಾಸಿಗೆಯ ಉದ್ದವೂ ಸಾಲುವುದಿಲ್ಲ; ಮುದುರಿಕೊಂಡು ಮಲಗುವನೆಂದರೆ ಹೊದಿಕೆಯ ಅಗಲವೂ ಸಾಲುವುದಿಲ್ಲ.”


ಸಿಂಹದ ಕಡೆಯಿಂದ ಓಡಿದವನಿಗೆ, ಕರಡಿಯು ಎದುರುಬಿದ್ದಂತಾಗುವುದು, ಅವನು ಮನೆಗೆ ಓಡಿಬಂದು, ಕೈಯನ್ನು ಗೋಡೆಯ ಮೇಲೆ ಇಡಲು, ಹಾವು ಕಚ್ಚಿದ ಹಾಗಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು