31 ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನ ಕಡೆ ಓಡುತ್ತಾನೆ. ಒಬ್ಬ ದೂತ ಇನ್ನೊಬ್ಬ ದೂತನ ಕಡೆಗೆ ಓಡಿಹೋಗಿ, ಬಾಬಿಲೋನಿನ ಅರಸನಿಗೆ ಈ ಸಮಾಚಾರವನ್ನು ತಿಳಿಸುತ್ತಾನೆ, ನಿನ್ನ ರಾಜಧಾನಿಯನ್ನು ಎಲ್ಲಾ ಕಡೆಯಿಂದ ಆಕ್ರಮಿಸಿದ್ದಾರೆ,
ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.
ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.