Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 51:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಧನುರ್ಧಾರಿಗಳಿಗೂ, ಕವಚಸನ್ನದ್ಧರಿಗೂ ಬಿಲ್ಲುಗಾರರು ಬಾಣವನ್ನೆಸೆಯಲಿ. ಬಾಬೆಲಿನ ಯುವಕರನ್ನು ಉಳಿಸದಿರಿ; ಅದರ ಸೈನ್ಯವನ್ನೆಲ್ಲಾ ನಿಶ್ಶೇಷಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅದರ ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಬಾಣಗಳನ್ನೆಸೆಯಲು ಅವಕಾಶವಿಲ್ಲದಿರಲಿ. ಬಾಬಿಲೋನಿಯದ ಯುವಕರನ್ನು ಉಳಿಸದಿರಿ. ಅದರ ಸೈನಿಕರನ್ನೆಲ್ಲ ನಿಶ್ಶೇಷಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಧನುರ್ಧಾರಿಗಳಿಗೂ ಕವಚ ಸನ್ನದ್ಧರಿಗೂ ಬಿಲ್ಲುಗಾರರು ಬಾಣವನ್ನೆಸೆಯಲಿ. ಬಾಬೆಲಿನ ಯುವಕರನ್ನು ಉಳಿಸದಿರಿ; ಅವರ ಸೈನ್ಯವನ್ನೆಲ್ಲಾ ನಿಶ್ಶೇಷಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಬಾಬಿಲೋನಿನ ಸೈನಿಕರು ತಮ್ಮ ಬಿಲ್ಲುಬಾಣಗಳನ್ನು ಉಪಯೋಗಿಸಲಾರರು. ಅವರು ತಮ್ಮ ಕವಚಗಳನ್ನು ಧರಿಸಲಾರರು. ಬಾಬಿಲೋನಿನ ಯೋಧರಿಗೆ ಮರುಕ ತೋರಿಸಬೇಡಿ. ಅದರ ಸೈನ್ಯವನ್ನು ಸಂಪೂರ್ಣವಾಗಿ ನಾಶಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಬಿಲ್ಲು ಬಗ್ಗಿಸುವವನಿಗೆ ವಿರೋಧವಾಗಿಯೂ, ಕವಚದಲ್ಲಿ ತನ್ನನ್ನು ಹೆಚ್ಚಿಸಿಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 51:3
12 ತಿಳಿವುಗಳ ಹೋಲಿಕೆ  

ಬಿಲ್ಲುಗಾರರೇ, ನೀವೆಲ್ಲರೂ ವ್ಯೂಹಕಟ್ಟಿ ಬಾಬಿಲೋನಿಗೆ ಮುತ್ತಿಗೆ ಹಾಕಿರಿ, ಬಾಣಗಳನ್ನು ಉಳಿಸದೆ ಎಸೆಯಿರಿ; ಅದು ಯೆಹೋವನಿಗೆ ಪಾಪ ಮಾಡಿತಲ್ಲಾ.


ರಥಾಶ್ವಗಳನ್ನು ಕಟ್ಟಿರಿ, ವಾಹನಾಶ್ವಗಳನ್ನು ಹತ್ತಿರಿ, ಶಿರಸ್ತ್ರಾಣಗಳನ್ನು ಹಾಕಿಕೊಂಡು ಯುದ್ಧಕ್ಕೆ ನಿಲ್ಲಿರಿ, ಭರ್ಜಿಗಳನ್ನು ಬೆಳಗಿರಿ, ಕವಚಗಳನ್ನು ಧರಿಸಿಕೊಳ್ಳಿರಿ.


ಯೆಹೋವನು ಇಂತೆನ್ನುತ್ತಾನೆ, “ಮೆರಾಥಯಿಮ್ ದೇಶಕ್ಕೂ ಮತ್ತು ಪೆಕೋದಿನ ನಿವಾಸಿಗಳಿಗೂ ವಿರುದ್ಧವಾಗಿ ದಂಡೆತ್ತಿ ಹೋಗಿ, ಅವರನ್ನು ಸಂಹರಿಸಿ, ಅನಂತರ ದೇಶವನ್ನು ತೀರಾ ಹಾಳುಮಾಡಿ, ನಾನು ನಿನಗೆ ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸು.


ಏಕೆಂದರೆ ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ. ಕರುಣೆಯು ನ್ಯಾಯತೀರ್ಪಿನ ಮೇಲೆ ಜಯ ಹೊಂದುತ್ತದೆ.


ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ, ಅವು ವಧ್ಯಸ್ಥಾನಕ್ಕೆ ಹೋಗಲಿ; ಅವುಗಳ ಗತಿಯನ್ನು ಏನೆಂದು ಹೇಳಲಿ! ಅವುಗಳಿಗೆ ವಿಪತ್ಕಾಲವು ಒದಗಿದೆ, ದಂಡನೆಯ ದಿನವು ಸಂಭವಿಸಿದೆ.


ಏಕೆಂದರೆ ಬೀದಿಗಳಲ್ಲಿ ಮಕ್ಕಳೂ, ಚೌಕಗಳಲ್ಲಿ ಯುವಕರೂ ಇಲ್ಲದ ಹಾಗೆ ಮೃತ್ಯುವು ನಮ್ಮ ಕಿಟಕಿಗಳ ಮೇಲೆ ಹತ್ತಿ ನಮ್ಮ ಅರಮನೆಗಳೊಳಗೆ ನುಗ್ಗಿದೆ.


ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಭಾಗ್ಯಹೊಂದಲಿ.


ಮನೆಯ ಹೊರಗೆ ಕತ್ತಿಯೂ, ಒಳಗೆ ಭಯವೂ ಇರುವುದು. ಯೌವನಸ್ಥರು, ಕನ್ಯೆಯರು, ಮೊಲೆಕೂಸುಗಳು, ನರೇತಲೆಯವರು ಇವರೆಲ್ಲರೂ ಕತ್ತಿಯಿಂದ ಕೊಲ್ಲಲ್ಪಡುವರು.


ಬಾಬೆಲ್ ಆಕಾಶದ ತನಕ ಬೆಳೆದು ಎತ್ತರವಾಗಿಯೂ ಮತ್ತು ಬಲವಾಗಿಯೂ ಇರುವ ತನ್ನ ಕೋಟೆಕೊತ್ತಲಗಳನ್ನು ಭದ್ರಪಡಿಸಿದರೂ, ಹಾಳುಮಾಡುವವರು ನನ್ನ ಅಪ್ಪಣೆಯಿಂದ ಅದರ ಮೇಲೆ ಬೀಳುವರು.’ ಇದು ಯೆಹೋವನ ನುಡಿ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು