Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 5:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢ ಜನರೇ, ಯೆಹೋವನ ಈ ಮಾತನ್ನು ಕೇಳಿರಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಕಣ್ಣಿದ್ದರೂ ಕಾಣದ, ಕಿವಿ ಇದ್ದರೂ ಕೇಳದ, ಬುದ್ಧಿಯಿಲ್ಲದ ಮೂಢಜನರೇ, ಯೆಹೋವನ ಈ ಮಾತನ್ನು ಕೇಳಿರಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಬುದ್ಧಿ ಇಲ್ಲದ ಮೂರ್ಖಜನರೇ, ಈ ಸಂದೇಶವನ್ನು ಕೇಳಿರಿ. ನಿಮಗೆ ಕಣ್ಣುಗಳಿವೆ ಆದರೆ ನೀವು ನೋಡುವದಿಲ್ಲ, ನಿಮಗೆ ಕಿವಿಗಳಿವೆ ಆದರೆ ನೀವು ಕೇಳುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಏನೆಂದರೆ, ಓ ಮೂಢ ಬುದ್ಧಿಹೀನ ಜನರೇ, ಕಣ್ಣುಗಳಿದ್ದು ಕಾಣದವರೇ, ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 5:21
26 ತಿಳಿವುಗಳ ಹೋಲಿಕೆ  

“ನರಪುತ್ರನೇ, ನೀನು ದ್ರೋಹಿ ವಂಶದ ಮಧ್ಯದಲ್ಲಿ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.


ನಿಮ್ಮ ಪೂರ್ವಿಕರಿಗೆ ವಿವರವಾಗಿ ಹೇಳಿದ್ದೇನೆಂದರೆ; “‘ನೀನು ಈ ಜನರ ಬಳಿಗೆ ಹೋಗಿ ಅವರಿಗೆ; ನೀವು ಕಿವಿಯಿದ್ದು ಕೇಳಿಕೊಂಡರೂ ತಿಳಿದುಕೊಳ್ಳುವುದೇ ಇಲ್ಲ; ಕಣ್ಣಿದ್ದು ನೋಡಿದರೂ ಕಾಣುವುದೇ ಇಲ್ಲ, ಎಂಬುದಾಗಿ ಹೇಳು.


“ದೇವರು ಅವರಿಗೆ ಮಂದಬುದ್ಧಿಯ ಆತ್ಮನನ್ನು, ಅಂದರೆ ಕಾಣದ ಕಣ್ಣುಗಳನ್ನೂ, ಕೇಳದ ಕಿವಿಗಳನ್ನೂ ಕೊಟ್ಟನು. ಈ ಭಾವವು ಈ ಹೊತ್ತಿನವರೆಗೂ ಹಾಗೆಯೇ ಇದೆ” ಎಂದು ಬರೆದ ಪ್ರಕಾರ ಅವರಿಗೆ ಆಯಿತು.


“ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಹೇಗೂ ಸ್ವಸ್ಥತೆಯನ್ನು ಹೊಂದದೆ ಇರುವಂತೆ, ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣಮಾಡಿದನು” ಎಂಬುದೇ.


ನನ್ನ ಜನರು ಮೂರ್ಖರು, ನನ್ನನ್ನು ತಿಳಿಯರು; ಮೂಢಸಂತತಿಯವರು, ಅವಿವೇಕಿಗಳು; ದುಷ್ಕಾರ್ಯದಲ್ಲಿ ನಿಪುಣರು, ಸತ್ಕಾರ್ಯವನ್ನು ಮಾಡಲು ಅರಿಯರು.


ಕಣ್ಣಿದ್ದು ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ?


ಆಕಾಶದಲ್ಲಿ ಹಾರುವ ಬಕವೂ ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿಯೂ, ಬಾನಕ್ಕಿಯೂ, ಕೊಕ್ಕರೆಯೂ ತಮ್ಮ ಗಮನಾಗಮನ ಸಮಯಗಳನ್ನು ಗಮನಿಸುತ್ತವೆ. ಆದರೆ ನನ್ನ ಜನರಾದರೋ ಯೆಹೋವನ ನಿಯಮವನ್ನು ತಿಳಿಯರು.


ಹೀಗಿರುವಲ್ಲಿ ನಾನು, “ಇವರು ಬಡವರು, ಮೂರ್ಖರು, ಯೆಹೋವನ ಮಾರ್ಗವನ್ನೂ ಮತ್ತು ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿಯದವರು;


ಇಂಥವರು ಏನೂ ತಿಳಿಯದವರು, ಏನೂ ಗ್ರಹಿಸಲಾರದವರು ಏಕೆಂದರೆ ಅವರ ಕಣ್ಣು ಕಾಣದಂತೆಯೂ, ಹೃದಯ ಗ್ರಹಿಸದಂತೆಯೂ ಯೆಹೋವನು ಮುಚ್ಚಿಬಿಟ್ಟಿದ್ದಾನೆ.


ಪಶುಪ್ರಾಯರಾದ ಪ್ರಜೆಗಳಿರಾ, ಲಕ್ಷಿಸಿರಿ; ಮೂರ್ಖರೇ, ನಿಮಗೆ ಬುದ್ಧಿಬರುವುದು ಯಾವಾಗ?


ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿದುಹೋಗುವವು, ಹೆಂಗಸರು ಬಂದು ಅವುಗಳಿಗೆ ಬೆಂಕಿ ಹಚ್ಚಿ ಉರಿಸುವರು. ಏಕೆಂದರೆ ಆ ಪ್ರಜೆಯು ಬುದ್ಧಿಹೀನವಾದವರೇ. ಆದಕಾರಣ ಸೃಷ್ಟಿಸಿದಾತನು ಅವರಿಗೆ ಕರುಣೆ ತೋರಿಸುವುದಿಲ್ಲ, ನಿರ್ಮಿಸಿದಾತನು ಅವರಿಗೆ ದಯೆತೋರಿಸುವುದಿಲ್ಲ.


ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ.


ದುರಾಚಾರಿಗಳಿರಾ, ಅವಿವೇಕಿಗಳಿರಾ, ಯೆಹೋವನ ವಿಷಯದಲ್ಲಿ ಈ ರೀತಿಯಾಗಿ ವರ್ತಿಸಬಹುದೇ? ಆತನು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೇ; ನಿಮ್ಮನ್ನು ಜನಾಂಗವನ್ನಾಗಿ ಮಾಡಿ ಸ್ಥಾಪಿಸಿದನಲ್ಲವೇ.


ಆದರೂ ಗ್ರಹಿಸುವ ಬುದ್ಧಿ, ನೋಡುವ ಕಣ್ಣು ಮತ್ತು ಕೇಳುವ ಕಿವಿ ಇವುಗಳನ್ನು ಯೆಹೋವನು ಇಂದಿನವರೆಗೂ ನಿಮಗೆ ಅನುಗ್ರಹಿಸಲಿಲ್ಲ.


ಎಫ್ರಾಯೀಮು ಬುದ್ಧಿ ವಿವೇಕಗಳಿಲ್ಲದ ಪಾರಿವಾಳದಂತಿದೆ; ಅದರ ಜನರು ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ.


ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.


“ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ, ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ, ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.”


ಹೇಗೆಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯ ಶಕ್ತಿಯೂ, ದೈವತ್ವವೂ, ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತದೆ. ಹೀಗಿರುವುದರಿಂದ ಅವರು ನೆಪವನ್ನು ಹೇಳಲು ಆಗುವುದಿಲ್ಲ.


ಕಣ್ಣಿದ್ದರೂ ಕುರುಡಾದ, ಕಿವಿಯಿದ್ದರೂ ಕಿವುಡಾದ ಜನರನ್ನು ಕರೆ.


ಯಾಕೋಬನ ಮನೆತನದೊಳಗೆ ಇದನ್ನು ಸಾರಿರಿ, ಯೆಹೂದದಲ್ಲಿ ಹೀಗೆ ಪ್ರಕಟಿಸಿರಿ,


ನಾನು, ಯಾರ ಸಂಗಡ ಮಾತನಾಡಿ ಅವರು ಗಮನಿಸುವಂತೆ ಸಾಕ್ಷಿಕೊಡಲಿ? ಇಗೋ, ಅವರ ಕಿವಿ ಮುಚ್ಚಲ್ಪಟ್ಟಿವೆ. ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ, ಅದರಲ್ಲಿ ಅವರಿಗೆ ಆನಂದವೇ ಇಲ್ಲ.


“ನಿಮ್ಮ ಪೂರ್ವಿಕರಾದರೋ ಗಮನಿಸದೆ ಹೆಗಲುಕೊಡದೇ ಹೋದರು, ಕೇಳಬಾರದೆಂದು ಕಿವಿಮಂದಮಾಡಿಕೊಂಡರು.


ಸಮಸ್ತ ಪ್ರಜೆಗಳಿಗೂ ಮಾಡಿದವುಗಳನ್ನು ನೋಡಿದ್ದೀರಿ. ಮಹಾಪರಿಶೋಧನೆ, ಉತ್ಪಾತ ಮತ್ತು ಮಹತ್ಕಾರ್ಯಗಳನ್ನು ನೀವು ನೋಡೇ ನೋಡಿದ್ದೀರಿ.


ನಾನು ಸಾವಕಾಶ ಮಾಡದೆ ನಿಮಗೆ ನುಡಿದ ಮಾತುಗಳನ್ನು ನೀವು ಕೇಳದೆ, ನಿಮ್ಮನ್ನು ಕರೆದ ನನಗೆ ಉತ್ತರ ಕೊಡದೆ ಈ ಕೃತ್ಯಗಳನ್ನೆಲ್ಲಾ ನಡೆಸಿದಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು