ಯೆರೆಮೀಯ 46:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಆದರೆ ಆ ಯುದ್ಧ ದಿನವು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ದಿನವಾಗಿದೆ; ಅದು ದಂಡನೆಯ ದಿನ; ಆಗ ಖಡ್ಗವು ನುಂಗಿ ತಣಿಯುವುದು, ಅವರ ರಕ್ತವನ್ನು ತುಂಬಾ ಹೀರುವುದು. ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಉತ್ತರ ದಿಕ್ಕಿನಲ್ಲಿ ಯೂಫ್ರೆಟಿಸ್ ನದಿಯ ಹತ್ತಿರ ಬಲಿಮಾಡಬೇಕೆಂದಿದ್ದಾನಲ್ಲಾ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆದರೆ ಈ ದಿನ, ಯುದ್ಧದ ದಿನ ಸೇನಾಧೀಶ್ವರನೆಂಬ ಸರ್ವೇಶ್ವರ ಸ್ವಾಮಿ ಶತ್ರುಗಳಿಗೆ ಮುಯ್ಯಿ ತೀರಿಸುವ ದಿನ ಇದು ದಂಡನೆಯ ದಿನ. ಇಂದು ಖಡ್ಗವು ಕಬಳಿಸುವುದು ತೃಪ್ತಿಯಾಗಿ ರಕ್ತವನ್ನು ಹೀರುವುದು ಸಂತೃಪ್ತಿಯಾಗಿ ಉತ್ತರದ ಯೂಪ್ರೆಟಿಸ್ ನದಿಯ ಹತ್ತಿರ ಬಲಿಮಾಡಬೇಕೆಂದಿರುವನು ಸರ್ವಶಕ್ತನೆಂಬ ಸರ್ವೇಶ್ವರ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಆದರೆ ಆ ಯುದ್ಧದಿನವು ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ತನ್ನ ಶತ್ರುಗಳಿಗೆ ಮುಯ್ಯಿತೀರಿಸುವ ದಿನವಾಗಿದೆ; ಅದು ದಂಡನೆಯ ದಿವಸ; ಆಗ ಖಡ್ಗವು ನುಂಗಿ ನುಂಗಿ ತಣಿಯುವದು, ಅವರ ರಕ್ತವನ್ನು ತುಂಬಾ ಹೀರುವದು; ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಬಡಗಲಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಮಾಡಬೇಕೆಂದಿದ್ದಾನಲ್ಲಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 “ಆದರೆ ಆ ದಿನ ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಗೆಲ್ಲುವನು. ಆಗ ಆ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುವನು. ಯೆಹೋವನ ವೈರಿಗಳು ತಕ್ಕ ಶಿಕ್ಷೆಯನ್ನು ಅನುಭವಿಸುವರು. ಖಡ್ಗವು ಸರ್ವರನ್ನು ಕೊಲೆ ಮಾಡುವುದು. ಖಡ್ಗವು ತನ್ನ ರಕ್ತದ ದಾಹ ತೀರುವವರೆಗೂ ಕೊಲೆ ಮಾಡುವುದು. ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಗೆ ಬಲಿ ನಡೆಯಬೇಕಾಗಿರುವುದರಿಂದ ಹೀಗೆಲ್ಲ ಆಗುವುದು. ಈಜಿಪ್ಟಿನ ಸೈನ್ಯವನ್ನು ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಯಾಗಿ ಕೊಡಲಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಏಕೆಂದರೆ ಇದು ಸೇನಾಧೀಶ್ವರ ಯೆಹೋವನಾದ ದೇವರ ದಿವಸವೇ. ಆತನು ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು, ಖಡ್ಗವು ಸಂಹರಿಸಿ ಅವರ ರಕ್ತದಿಂದ ತೃಪ್ತಿಯಾಗಿ ಮತ್ತವಾಗುವುದು. ಏಕೆಂದರೆ ಉತ್ತರ ದೇಶದಲ್ಲಿ ಯೂಫ್ರೇಟೀಸ್ ನದಿಯ ಬಳಿಯಲ್ಲಿ ಸೇನಾಧೀಶ್ವರ ಯೆಹೋವರಾದ ದೇವರಿಗೆ ಬಲಿ ಆಗುತ್ತದೆ. ಅಧ್ಯಾಯವನ್ನು ನೋಡಿ |