ಯೆರೆಮೀಯ 44:28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಖಡ್ಗಕ್ಕೆ ತಪ್ಪಿಸಿಕೊಂಡವರು ಸ್ವಲ್ಪ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದದ ಉಳಿದ ಜನರೆಲ್ಲರೂ ನನ್ನ ಮಾತು ನಡೆಯುವುದೋ ಅಥವಾ ತಮ್ಮ ಮಾತು ನಡೆಯುವುದೋ ಎಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಖಡ್ಗಕ್ಕೆ ತಪ್ಪಿಸಿಕೊಂಡ ಕೊಂಚ ಜನರು ಮಾತ್ರ ಈಜಿಪ್ಟಿನಿಂದ ಜುದೇಯಕ್ಕೆ ಹಿಂದಿರುಗುವರು. ಈಜಿಪ್ಟಿಗೆ ಹೋಗಿ ಪ್ರವಾಸಿಸುತ್ತಿರುವ ಅಳಿದು ಉಳಿದ ಯೆಹೂದ್ಯರೆಲ್ಲರು, ನನ್ನ ಮಾತು ದಿಟವಾಯಿತೋ ಅಥವಾ ಅವರ ಮಾತು ದಿಟವಾಯಿತೋ ಎಂದು ಆಗ ತಿಳಿದುಕೊಳ್ಳುವರು.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಖಡ್ಗಕ್ಕೆ ತಪ್ಪಿಸಿಕೊಂಡವರು ಕೊಂಚ ಜನ ಮಾತ್ರವೇ ಆಗಿ ಐಗುಪ್ತದಿಂದ ಯೆಹೂದಕ್ಕೆ ಹಿಂದಿರುಗುವರು; ಆಗ ಐಗುಪ್ತಕ್ಕೆ ಹೋಗಿ ಪ್ರವಾಸಿಸುತ್ತಿರುವ ಯೆಹೂದ ಜನಶೇಷದವರೆಲ್ಲರೂ ನನ್ನ ಮಾತು ಸಾಗತಕ್ಕದ್ದೋ ತಮ್ಮ ಮಾತು ಸಾಗತಕ್ಕದ್ದೋ ಎಂದು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ಕೆಲವು ಯೆಹೂದಿಯರು ಖಡ್ಗದಿಂದ ತಪ್ಪಿಸಿಕೊಳ್ಳುವರು. ಅವರು ಈಜಿಪ್ಟಿನಿಂದ ಯೆಹೂದಕ್ಕೆ ಹಿಂದಿರುಗಿ ಬರುವರು. ಆದರೆ ಹಾಗೆ ತಪ್ಪಿಸಿಕೊಳ್ಳುವ ಯೆಹೂದಿಯರು ಬಹು ಕಡಿಮೆ. ಆಗ ಈಜಿಪ್ಟಿಗೆ ವಲಸೆ ಬಂದ ಆ ಅಳಿದುಳಿದ ಯೆಹೂದಿಯರಿಗೆ ಯಾರ ಮಾತು ನಿಜವೆಂಬುದು ತಿಳಿದು ಬರುತ್ತದೆ. ನನ್ನ ಮಾತು ನಿಜವಾಯಿತೋ ಅಥವಾ ಅವರ ಮಾತು ನಿಜವಾಯಿತೋ ಎಂಬುದು ಅವರಿಗೆ ಗೊತ್ತಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆದರೆ ಖಡ್ಗಕ್ಕೆ ತಪ್ಪಿಸಿಕೊಂಡ ಸ್ವಲ್ಪ ಜನರು ಈಜಿಪ್ಟ್ ದೇಶದೊಳಗಿಂದ ಯೆಹೂದ ದೇಶಕ್ಕೆ ಹಿಂದಿರುಗಿ ಹೋಗುವರು. ಆಗ ಈಜಿಪ್ಟ್ ದೇಶದಲ್ಲಿ ತಂಗುವುದಕ್ಕೆ ಬಂದಿರುವ ಯೆಹೂದದ ಉಳಿದವರೆಲ್ಲಾ ನನ್ನ ಮಾತು ನಿಲ್ಲುವುದೋ, ಅವರ ಮಾತು ನಿಲ್ಲುವುದೋ ಎಂಬುದನ್ನು ತಿಳಿದುಕೊಳ್ಳುವರು. ಅಧ್ಯಾಯವನ್ನು ನೋಡಿ |