ಯೆರೆಮೀಯ 43:3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಕಸ್ದೀಯರು ನಮ್ಮನ್ನು ಕೊಲ್ಲುವುದಕ್ಕೋ, ಬಾಬಿಲೋನಿಗೆ ಸೆರೆ ಒಯ್ಯುವುದಕ್ಕೋ ನಮ್ಮನ್ನು ಅವರ ಕೈಗೆ ಸಿಕ್ಕಿಸಬೇಕೆಂದು ನೇರೀಯನ ಮಗನಾದ ಬಾರೂಕನೇ ನಿನ್ನನ್ನು ನಮ್ಮ ಮೇಲೆ ನೂಕಿದ್ದಾನೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 ಬದಲಿಗೆ ಬಾಬಿಲೋನಿಯರು ನಮ್ಮನ್ನು ಕೊಲ್ಲಲಿ ಅಥವಾ ಸೆರೆಗೊಯ್ಯಲಿ ಎಂದು ನಮ್ಮನ್ನು ಅವರ ಕೈಗೆ ಸಿಕ್ಕಿಸುವುದಕ್ಕಾಗಿ ನೇರೀಯನ ಮಗ ಬಾರೂಕನೇ ನಿನ್ನನ್ನು ನಮ್ಮ ಮೇಲೆ ದೊಬ್ಬಿದ್ದಾನೆ,” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಕಸ್ದೀಯರು ನಮ್ಮನ್ನು ಕೊಲ್ಲುವದಕ್ಕೋ ಬಾಬೆಲಿಗೆ ಸೆರೆ ಒಯ್ಯುವದಕ್ಕೋ ನಮ್ಮನ್ನು ಅವರ ಕೈಗೆ ಸಿಕ್ಕಿಸಬೇಕೆಂದು ನೇರೀಯನ ಮಗನಾದ ಬಾರೂಕನೇ ನಿನ್ನನ್ನು ನಮ್ಮ ಮೇಲೆ ನೂಕಿದ್ದಾನೆ ಎಂದು ಹೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಬಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಬುದು ನಮ್ಮ ಆಲೋಚನೆ. ಅವನು ನಮ್ಮನ್ನು ಬಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಬಯಸುತ್ತಾನೆ ಅಥವಾ ಅವರು ನಮ್ಮನ್ನು ಸೆರೆಹಿಡಿದು ಬಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಬಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಆದರೆ ಅವರು ನಮ್ಮನ್ನು ಕೊಂದುಹಾಕುವ ಹಾಗೆಯೂ, ನಮ್ಮನ್ನು ಬಾಬಿಲೋನಿಗೆ ಸೆರೆ ಒಯ್ಯುವ ಹಾಗೆಯೂ, ನಮ್ಮನ್ನು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರೇಪಿಸಿದ್ದಾನೆ,” ಎಂದರು. ಅಧ್ಯಾಯವನ್ನು ನೋಡಿ |