ಯೆರೆಮೀಯ 41:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಗಡ್ಡಬೋಳಿಸಿ, ಬಟ್ಟೆಹರಿದು ಗಾಯ ಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದು ಕೈಯಲ್ಲಿ ಧೂಪ ಮತ್ತು ನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಇಂತಿರಲು ಗಡ್ಡ ಬೋಳಿಸಿ, ಬಟ್ಟೆ ಹರಿದು, ಗಾಯಮಾಡಿಕೊಂಡಿದ್ದ ಎಂಬತ್ತು ಜನರು ಶೆಕೆಮ್, ಶಿಲೋ, ಸಮಾರಿಯ ಎಂಬ ಊರುಗಳಿಂದ ಬಂದು, ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋಗುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಗಡ್ಡ ಬೋಳಿಸಿ ಬಟ್ಟೆಹರಿದು ಗಾಯಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಒಂದು ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಶೆಕೆಮಿನಿಂದಲೂ ಶೀಲೋವಿನಿಂದಲೂ ಸಮಾರ್ಯದಿಂದಲೂ ಎಂಬತ್ತು ಜನರು ಗಡ್ಡವನ್ನೂ ಕ್ಷೌರ ಮಾಡಿದವರಾಗಿಯೂ ವಸ್ತ್ರಗಳನ್ನು ಹರಿದುಕೊಂಡವರಾಗಿಯೂ ತಮ್ಮನ್ನು ಕೊಯ್ದುಕೊಂಡವರಾಗಿಯೂ ಯೆಹೋವ ದೇವರ ಆಲಯಕ್ಕೆ ತರುವುದಕ್ಕೋಸ್ಕರ ಕಾಣಿಕೆಯನ್ನೂ, ಧೂಪವನ್ನೂ ಕೈಯಲ್ಲಿ ತೆಗೆದುಕೊಂಡು ಬಂದರು. ಅಧ್ಯಾಯವನ್ನು ನೋಡಿ |