ಯೆರೆಮೀಯನು ಇನ್ನೂ ಹಿಂದಿರುಗದಿರುವಲ್ಲಿ ನೆಬೂಜರದಾನನು ಅವನಿಗೆ, “ಬಾಬೆಲಿನ ಅರಸನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನಲ್ಲಾ; ಅವನ ಕಡೆಗೆ ನೀನು ಹಿಂದಿರುಗಿ ಅವನ ಹತ್ತಿರ ಜನರ ಮಧ್ಯೆ ವಾಸಿಸು; ಇಲ್ಲವೆ ಎಲ್ಲಿ ಬೇಕಾದರೂ ಹೋಗು” ಎಂದು ಹೇಳಿ ಬುತ್ತಿಯನ್ನೂ ಮತ್ತು ಬಹುಮಾನವನ್ನೂ ಕೊಡಿಸಿ ಅವನನ್ನು ಕಳುಹಿಸಿಬಿಟ್ಟನು.
ನೀನು ಯಾರಿಗೆ ಹೆದರಿ ನನ್ನನ್ನು ಮರೆತು ನನಗೆ ಮೋಸಮಾಡಿದಿ? ಈ ದ್ರೋಹಕ್ಕೂ ಹಿಂದೆಗೆಯಲಿಲ್ಲವಲ್ಲಾ! ನೀನು ನನಗೆ ಅಂಜದೆ ಇರುವುದಕ್ಕೆ ನಾನು ಬಹುಕಾಲದಿಂದ ಸುಮ್ಮನೆ ಇದ್ದದ್ದೇ ಕಾರಣವಲ್ಲವೇ?.
ಆದರೆ ಏಳನೆಯ ತಿಂಗಳಿನಲ್ಲಿ ರಾಜವಂಶದವನೂ, ಎಲೀಷಾಮನ ಮೊಮ್ಮಗನೂ, ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಮಂದಿ ಆಳುಗಳೊಡನೆ ಬಂದು ಗೆದಲ್ಯನನ್ನೂ, ಅವನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರನ್ನೂ, ಕಸ್ದೀಯರನ್ನೂ ಸಂಹರಿಸಿದನು.