ಯೆರೆಮೀಯ 4:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಇಗೋ, ಜನಾಂಗಗಳಿಗೆ ಅರುಹಿರಿ, “ಮುತ್ತುವವರು ದೂರದೇಶದಿಂದ ಯೆರೂಸಲೇಮಿಗೆ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರುದ್ಧವಾಗಿ ದನಿ ಎತ್ತುತ್ತಾರೆ” ಎಂದು ಪ್ರಚುರಪಡಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಇಗೋ ಅವರು ರಾಷ್ಟ್ರಗಳಿಗೆ ಅರುಹಿಸುವ ಸಮಾಚಾರ : ಮುತ್ತಿಗೆ ಹಾಕುವವರು ದೂರದೇಶದಿಂದ ಜೆರುಸಲೇಮಿಗೆ ಬರುವರು. ಜುದೇಯದ ಪಟ್ಟಣಗಳಿಗೆ ವಿರುದ್ಧ ಘೋಷಣೆಗಳನ್ನು ಪ್ರಕಟಿಸುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಇಗೋ, ಜನಾಂಗಗಳಿಗೆ ಅರುಹಿರಿ, ಮುತ್ತುವವರು ದೂರದೇಶದಿಂದ ಯೆರೂಸಲೇವಿುಗೆ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರುದ್ಧವಾಗಿ ದನಿಗೈಯುತ್ತಾರೆ, ಎಂದು ಪ್ರಚುರಪಡಿಸಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 “ಇದನ್ನು ಈ ಜನಾಂಗಕ್ಕೆ ತಿಳಿಸಿರಿ. ಜೆರುಸಲೇಮಿನ ಜನರಲ್ಲಿ ಈ ಸಮಾಚಾರವನ್ನು ಹರಡಿರಿ. ಬಹುದೂರದೇಶದಿಂದ ಶತ್ರುಗಳು ಬರುತ್ತಿದ್ದಾರೆ. ಆ ಶತ್ರುಗಳು ಯೆಹೂದದ ನಗರಗಳ ವಿರುದ್ಧ ಯುದ್ಧದ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯಪಡಿಸಿರಿ. ಏನೆಂದರೆ, ‘ಮುತ್ತಿಗೆ ಹಾಕುವ ಸೈನ್ಯದವರು ದೂರದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ಯುದ್ಧದ ಕೂಗನ್ನು ಎಬ್ಬಿಸುತ್ತಾರೆ. ಅಧ್ಯಾಯವನ್ನು ನೋಡಿ |