ಯೆರೆಮೀಯ 38:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಕೂಡಲೇ ಕೂಷ್ಯನಾದ ಎಬೆದ್ಮೆಲೆಕನು ಅವರನ್ನು ಕರೆದುಕೊಂಡು ಹೋಗಿ ಅರಮನೆಯನ್ನು ಹೊಕ್ಕು ಖಜಾನೆಯ ಕೆಳಗಿನ ಕೋಣೆಯಿಂದ ಜೀರ್ಣವಾದ ಹರಕು ಚಿಂದಿಬಟ್ಟೆಗಳನ್ನು ತೆಗೆದುಕೊಂಡು ಹಗ್ಗಗಳಂತೆ ಬಾವಿಯೊಳಗೆ ಯೆರೆಮೀಯನಿಗೆ ಮುಟ್ಟಿಸಿ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಕೂಡಲೇ ಸುಡಾನಿನ ಎಬೆದ್ಮೆಲೆಕನು ಆಳುಗಳನ್ನು ಕರೆದುಕೊಂಡು ಹೋಗಿ, ಅರಮನೆಯನ್ನು ಹೊಕ್ಕು, ಖಜಾನೆಯ ಕೆಳಗಣ ಕೋಣೆಯಿಂದ ಹಳೆಯ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು, ಹಗ್ಗಕ್ಕೆ ಕಟ್ಟಿ ಬಾವಿಯೊಳಗಿದ್ದ ಯೆರೆಮೀಯನಿಗೆ ಮುಟ್ಟಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಕೂಡಲೇ ಕೂಷ್ಯನಾದ ಎಬೆದ್ಮೆಲೆಕನು ಅವರನ್ನು ಕರೆದುಕೊಂಡುಹೋಗಿ ಅರಮನೆಯನ್ನು ಹೊಕ್ಕು ಖಜಾನೆಯ ಕೆಳಗಣ ಕೋಣೆಯಿಂದ ಜೀರ್ಣವಾದ ಹರಕು ಚಿಂದಿಪಂದಿಗಳನ್ನು ತೆಗೆದುಕೊಂಡು ಬಾವಿಯೊಳಗೆ ಹಗ್ಗಗಳಿಂದ ಯೆರೆಮೀಯನಿಗೆ ಮುಟ್ಟಿಸಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರೆದುಕೊಂಡು, ಖಜಾನೆ ಕೆಳಗಿರುವ ಅರಮನೆಗೆ ಹೋಗಿ, ಅಲ್ಲಿಂದ ಹರಿದುಹೋದ ಹಳೆಯ ಬಟ್ಟೆಗಳನ್ನೂ, ಸವೆದು ಹೋದ ಹಳೆಯ ವಸ್ತ್ರಗಳನ್ನೂ ತೆಗೆದುಕೊಂಡು, ಅವುಗಳನ್ನು ಹಗ್ಗಗಳಂತೆ ಯೆರೆಮೀಯನ ಬಳಿಗೆ ಬಾವಿಯೊಳಗೆ ಇಳಿಸಿದನು. ಅಧ್ಯಾಯವನ್ನು ನೋಡಿ |