Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 36:25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಎಲ್ನಾಥಾನನೂ, ದೆಲಾಯನೂ ಮತ್ತು ಗೆಮರ್ಯನೂ, “ದಯಮಾಡಿ ಸುರುಳಿಯನ್ನು ಸುಡಬಾರದು” ಎಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಎಲ್ನಾಥಾನನು, ದೆಲಾಯನು ಹಾಗೂ ಗೆಮರ್ಯನು ಅರಸನಿಗೆ ಸುರುಳಿಯನ್ನು ಸುಡಬಾರದೆಂದು ವಿನಯದಿಂದ ವಿಜ್ಞಾಪನೆಮಾಡಿದರೂ ಅವನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಎಲ್ನಾಥಾನನೂ ದೆಲಾಯನೂ ಗೆಮರ್ಯನೂ - ದಯಮಾಡಿ ಸುರಳಿಯನ್ನು ಸುಡಬಾರದೆಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಎಲ್ನಾಥಾನನೂ ದೆಲಾಯನೂ ಗೆಮರ್ಯನೂ ಅದನ್ನು ಸುಡಬೇಡವೆಂದು ರಾಜನಿಗೆ ಹೇಳುವ ಪ್ರಯತ್ನ ಮಾಡಿದರು. ಆದರೆ ರಾಜನು ಅವರ ಮಾತನ್ನು ಕೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಹೀಗಾದರೂ ಎಲ್ನಾಥಾನನೂ, ದೆಲಾಯನೂ, ಗೆಮರೀಯನೂ ಆ ಸುರುಳಿಯನ್ನು ಸುಡಬಾರದೆಂದು ಅರಸನಿಗೆ ಬಿನ್ನಹ ಮಾಡಿದರು; ಆದರೆ ಅವನು ಅವರಿಗೆ ಕಿವಿಗೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 36:25
11 ತಿಳಿವುಗಳ ಹೋಲಿಕೆ  

ಅಲ್ಲಿ ಲೇಖಕನಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಅಂತು ಪ್ರಧಾನರೆಲ್ಲರೂ ಕುಳಿತುಕೊಂಡಿದ್ದರು.


ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರುಗಿ ಒಪ್ಪಿಸಬೇಕೆಂದು ನೆನಸಿ ಅವರಿಗೆ, “ಇವನ ರಕ್ತ ಸುರಿಸಬೇಡಿರಿ, ಅವನನ್ನು ಈ ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಿರಿ, ಅವನ ಮೇಲೆ ಕೈಹಾಕಬೇಡಿರಿ” ಎಂದು ಹೇಳಿದನು.


“ನಿರಪರಾಧಿಯನ್ನು ಮರಣಕ್ಕೆ ಒಪ್ಪಿಸಿಕೊಟ್ಟು ನಾನು ಪಾಪ ಮಾಡಿದ್ದೇನೆ” ಅಂದನು. ಅದಕ್ಕವರು, “ಅದು ನಮಗೇನು? ನೀನೇ ನೋಡಿಕೋ” ಅಂದರು.


ಆಗ ಅರಸನಾದ ಯೆಹೋಯಾಕೀಮನು ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನು ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.


ದುಷ್ಟನ ಮುಖದಲ್ಲಿ ಲಜ್ಜೆಯಿಲ್ಲ, ಸತ್ಯವಂತನು ತನ್ನ ನಡತೆಯನ್ನು ಸರಿಪಡಿಸಿಕೊಳ್ಳುತ್ತಿರುವನು.


ಇದನ್ನು ಕೇಳಿ ಸರದಾರರೂ ಸಕಲ ಜನರೂ ಯಾಜಕ ಪ್ರವಾದಿಗಳಿಗೆ, “ಇವನು ಮರಣ ದಂಡನೆಗೆ ತಕ್ಕವನಲ್ಲ; ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಇದನ್ನು ನಮಗೆ ನುಡಿದಿದ್ದಾನಷ್ಟೆ” ಎಂದು ಹೇಳಿದರು.


ಆಗ ಬಾರೂಕನು ಯೆಹೋವನ ಆಲಯದೊಳಗೆ ಮೇಲಣ ಪ್ರಾಕಾರದಲ್ಲಿ ಹೊಸ ಬಾಗಿಲ ಹತ್ತಿರ ಲೇಖಕನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ ಸುರುಳಿಯಲ್ಲಿನ ಯೆರೆಮೀಯನ ಮಾತುಗಳನ್ನು ಎಲ್ಲಾ ಜನರಿಗೂ ಕೇಳಿಸುವಂತೆ ಓದಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು