ಯೆರೆಮೀಯ 33:13 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಹಿಂಡುಗಳು ಎಣಿಸುವವನ ಕೈಗೆ ಲೆಕ್ಕವಾಗುವಂತೆ ಮತ್ತೆ ಹಾದುಹೋಗುವವು. ಇದು ಯೆಹೋವನ ನುಡಿ” ಎಂಬುದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಮಲೆನಾಡಿನ, ಕೆಳನಾಡಿನ ಹಾಗೂ ದಕ್ಷಿಣ ಪ್ರಾಂತ್ಯದ ಊರುಗಳು, ಬೆನ್ಯಾಮಿನ್ ನಾಡು, ಜೆರುಸಲೇಮಿನ ಸುತ್ತಮುತ್ತಲ ಪ್ರದೇಶಗಳು, ಜುದೇಯದ ಊರುಗಳು, ಈಎಲ್ಲ ಸ್ಥಳಗಳಲ್ಲಿ ಮಂದೆಗಳು ಲೆಕ್ಕಿಸುವವನ ಕಣ್ಮುಂದೆ ಮತ್ತೆ ಹಾದುಹೋಗುವುವು. ಇದು ಸರ್ವೇಶ್ವರನಾದ ನನ್ನ ನುಡಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣ ಪ್ರಾಂತದ ಊರುಗಳು, ಬೆನ್ಯಾಮೀನ್ ಸೀಮೆ, ಯೆರೂಸಲೇವಿುನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಹಿಂಡುಗಳು ಎಣಿಸುವವನ ಕೈಗೆ ಲೆಕ್ಕವಾಗುವಂತೆ ಮತ್ತೆ ಹಾದುಹೋಗುವವು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಕುರಿಗಳು ತಮ್ಮ ಮುಂದೆ ನಡೆದುಕೊಂಡು ಹೋಗುವಾಗ ಕುರುಬರು ಅವುಗಳನ್ನು ಎಣಿಸುವರು. ಇಡೀ ದೇಶದಲ್ಲೆಲ್ಲ ಅಂದರೆ ಬೆಟ್ಟಪ್ರದೇಶದಲ್ಲಿಯೂ ಪಶ್ಚಿಮದ ಇಳಿಜಾರು ಪ್ರದೇಶಗಳಲ್ಲಿಯೂ ನೆಗೆವ್ ಪ್ರದೇಶದಲ್ಲಿಯೂ ಯೆಹೂದದ ಎಲ್ಲಾ ಊರುಗಳಲ್ಲಿಯೂ ತಮ್ಮ ಕುರಿಗಳನ್ನು ಎಣಿಸುತ್ತಿರುವರು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ, ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಮಂದೆಗಳು ಎಣಿಸುವವನ ಕೈಕೆಳಗೆ ಹಾದುಹೋಗುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |
ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣಪ್ರಾಂತ್ಯದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಜನರು ಹೊಲ ಗದ್ದೆಗಳಿಗೆ ಕ್ರಯಕೊಟ್ಟು, ಪತ್ರಕ್ಕೆ ಸಹಿಹಾಕಿ ಮುಚ್ಚಿ, ಸಾಕ್ಷಿಗಳನ್ನು ಹಾಕಿಸಿ ಕೊಂಡುಕೊಳ್ಳುವರು; ನಾನು ನನ್ನ ಜನರ ಗುಲಾಮಗಿರಿಯ ದುರವಸ್ಥೆಯನ್ನು ತಪ್ಪಿಸಿ ಬರಮಾಡುವೆನು.” ಇದು ಯೆಹೋವನ ನುಡಿ.