ಯೆರೆಮೀಯ 32:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ನೀನು ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ ಈ ದಿನದವರೆಗೆ ಇಸ್ರಾಯೇಲರಲ್ಲಿಯೂ ಮತ್ತು ಇತರ ಜನರಲ್ಲಿಯೂ ಅವುಗಳನ್ನು ಮಾಡುತ್ತಾ ಬಂದು ಹೆಸರನ್ನು ಪಡೆದುಕೊಂಡಿದ್ದಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಈಜಿಪ್ಟ್ ದೇಶದಲ್ಲಿ ಮಾಡಿದ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಇಸ್ರಯೇಲರಲ್ಲೂ ಇತರ ಜನಾಂಗಗಳಲ್ಲೂ ಈ ದಿನದವರೆಗೂ ಮಾಡಿ ಹೆಸರುವಾಸಿಯಾದವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ನೀನು ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನೂ ಉತ್ಪಾತಗಳನ್ನೂ ನಡಿಸಿ ಈ ದಿನದವರೆಗೆ ಇಸ್ರಾಯೇಲ್ಯರಲ್ಲಿಯೂ ಇತರ ಜನರಲ್ಲಿಯೂ ಅವುಗಳನ್ನು ಮಾಡುತ್ತಾ ಬಂದು ಹೆಸರನ್ನು ಪಡೆದುಕೊಂಡಿ; ಅದು ಈಗಲೂ ಸ್ಥಿರವಾಗಿದೆ; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಯೆಹೋವನೇ, ನೀನು ಈಜಿಪ್ಟ್ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದೆ. ಇಂದಿನವರೆಗೂ ನೀನು ಅದ್ಭುತಕಾರ್ಯಗಳನ್ನು ಮಾಡಿದೆ. ಇಸ್ರೇಲಿನಲ್ಲಿಯೂ ನೀನು ಅವುಗಳನ್ನು ಮಾಡಿದೆ. ಜನರು ಇರುವಲ್ಲೆಲ್ಲ ನೀನು ಅವುಗಳನ್ನು ಮಾಡಿದೆ. ಇವುಗಳಿಂದ ನೀನು ಸುಪ್ರಸಿದ್ಧನಾಗಿರುವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ನೀವು ಈ ದಿನದವರೆಗೂ ಈಜಿಪ್ಟ್ ದೇಶದಲ್ಲಿಯೂ ಇಸ್ರಾಯೇಲಿನಲ್ಲಿಯೂ ಜನಾಂಗಗಳೊಳಗೂ ಗುರುತುಗಳನ್ನೂ, ಲಕ್ಷಣಗಳನ್ನೂ ಇಟ್ಟಿದ್ದೀರಿ. ಇಂದಿನವರೆಗೂ ನಿಮಗೆ ಹೆಸರನ್ನು ಸ್ಥಿರಪಡಿಸಿಕೊಂಡಿದ್ದೀರಿ. ಅಧ್ಯಾಯವನ್ನು ನೋಡಿ |
ಇಸ್ರಾಯೇಲರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡೆಸಿರುವ ಈ ಮಹತ್ಕಾರ್ಯಗಳನ್ನು ವಿವರಿಸಿ ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟಬಂದ ಹಾಗೆ ಶಿಕ್ಷಿಸಿದನು ಎಂಬುದಾಗಿ ತಿಳಿಸಬೇಕು. ಹೀಗೆ ನಾನು ಫರೋಹನ ಹೃದಯವನ್ನು, ಅವನ ಪರಿವಾರದವರ ಹೃದಯಗಳನ್ನೂ ಕಠಿಣಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದನು.