Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 31:36 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 “ಈ ಕಟ್ಟಳೆಗಳು ನನ್ನ ಪರಾಂಬರಿಕೆಗೆ ಬಾರದೆ ತೊಲಗಿ ಹೋದರೆ, ಆಗ ಇಸ್ರಾಯೇಲ್ ಸಂತಾನವು ನನ್ನ ಪರಾಂಬರಿಕೆಗೆ ಒಳಗಾಗದೆ ಎಂದಿಗೂ ಜನಾಂಗವಾಗದೆ ಹೋಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಆತನ ಮಾತು ಇವು - ಈ ಪ್ರಕೃತಿ ನಿಯಮ ನನ್ನ ಪರಾಂಬರಿಕೆಯಲ್ಲಿ ಇರುವತನಕ ಒಂದು ರಾಷ್ಟ್ರವಾಗಿ ಉಳಿವುದು ಇಸ್ರಯೇಲ್ ಸಂತಾನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಈ ಕಟ್ಟಳೆಗಳು ನನ್ನ ಪರಾಂಬರಿಕೆಗೆ ಬಾರದೆ ತೊಲಗಿಹೋದರೆ ಆಗ ಇಸ್ರಾಯೇಲ್ ಸಂತಾನವು ನನ್ನ ಪರಾಂಬರಿಕೆಗೆ ಬಾರದೆ ಎಂದಿಗೂ ಜನಾಂಗವಾಗದೆ ಹೋಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಯೆಹೋವನು ಹೀಗೆನ್ನುತ್ತಾನೆ: “ಸೂರ್ಯ, ಚಂದ್ರ, ನಕ್ಷತ್ರ ಮತ್ತು ಸಮುದ್ರಗಳ ಮೇಲಿನ ಹತೋಟಿಯನ್ನು ನಾನು ಕಳೆದುಕೊಂಡಾಗ ಮಾತ್ರ ಇಸ್ರೇಲಿನ ಪೀಳಿಗೆಯು ಒಂದು ಜನಾಂಗವಾಗಿ ನಿಂತುಹೋಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 “ಈ ನಿಯಮಗಳು ನನ್ನ ಸನ್ನಿಧಿಯಿಂದ ಯಾವಾಗ ಇಲ್ಲದೆ ಹೋಗುವುವೋ, ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತುಹೋಗುವುದು,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 31:36
13 ತಿಳಿವುಗಳ ಹೋಲಿಕೆ  

ಆತನು ಅವುಗಳನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ, ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ.


ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಅಟ್ಟಿದ್ದೆನೋ ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು; ನಿನ್ನನ್ನೋ ನಿರ್ಮೂಲಮಾಡೆನು. ಮಿತಿಮೀರಿ ಶಿಕ್ಷಿಸೆನು, ಆದರೆ ಶಿಕ್ಷಿಸದೆ ಬಿಡುವುದಿಲ್ಲ. ಇದು ಯೆಹೋವನ ನುಡಿ.”


ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟಿದೆ.


ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು” ಎಂದು ಮೊರೆಯಿಡುತ್ತೇನೆ.


ಅವನ ನಾಮವು ಸ್ಥಿರವಾಗಿರಲಿ; ಅವನ ಹೆಸರು ಸೂರ್ಯನಿರುವವರೆಗೆ ಇರಲಿ. ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ, ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ.


ಸೂರ್ಯನು, ಚಂದ್ರನು ಇರುವವರೆಗೂ, ತಲತಲಾಂತರಗಳವರೆಗೂ ಅವರು ನಿನಗೆ ಭಯಪಡಲಿ.


ಅವರನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೆನು, ಅವರು ಮನುಷ್ಯರ ಜ್ಞಾಪಕದಲ್ಲೂ ಇಲ್ಲದಂತೆ ಮಾಡುತ್ತಿದ್ದೆನು.


ಖಗೋಳದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ? ಅದರ ಆಳ್ವಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ?


ಯಾಕೋಬಿನಿಂದ ಸಂತಾನವನ್ನು ಹುಟ್ಟಿಸುವೆನು, ಯೆಹೂದ ವಂಶದಿಂದ ನನ್ನ ಪರ್ವತಗಳ ಸ್ವತ್ತಿನ ಸಂತತಿಯನ್ನು ಬರಮಾಡುವೆನು, ನನ್ನ ಆಪ್ತರು ಆ ಸ್ವತ್ತನ್ನು ಅನುಭವಿಸುವರು, ನನ್ನ ಸೇವಕರು ಅಲ್ಲಿ ವಾಸಿಸುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು