ಯೆರೆಮೀಯ 29:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ತಪ್ಪದೆ ಕಳುಹಿಸಿ ಎಚ್ಚರಿಸುತ್ತಾ ಬಂದರೂ ಅವರು ಕೇಳಲೊಲ್ಲದೆ ಹೋದರು ಇದು ಯೆಹೋವನ ನುಡಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ಏಕೆಂದರೆ ಅವರು ನನ್ನ ಮಾತುಗಳನ್ನು ಕೇಳದೆಹೋದರು. ನನ್ನ ದಾಸರಾದ ಪ್ರವಾದಿಗಳನ್ನು ಪದೇಪದೇ ಅವರ ಬಳಿಗೆ ಕಳಿಸಿದರೂ ಕೇಳಲೊಲ್ಲದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ಸಾವಕಾಶಮಾಡದೆ ಕಳುಹಿಸಿ ಹೇಳಿಸುತ್ತಾ ಬಂದರೂ ಅವರು ಕೇಳಲೊಲ್ಲದೆ ಹೋದರು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಜೆರುಸಲೇಮಿನವರು ನನ್ನ ಸಂದೇಶಕ್ಕೆ ಕಿವಿಗೊಟ್ಟಿಲ್ಲವಾದ ಕಾರಣ ನಾನು ಹಾಗೆಲ್ಲ ನಡೆಯುವಂತೆ ಮಾಡುವೆನು” ಇದು ಯೆಹೋವನ ನುಡಿ. “ನಾನು ಮತ್ತೆಮತ್ತೆ ನನ್ನ ಸಂದೇಶವನ್ನು ಅವರಿಗೆ ಕೊಟ್ಟೆ. ಆ ಜನರಿಗೆ ಸಂದೇಶಗಳನ್ನು ಕೊಡುವದಕ್ಕಾಗಿ ನನ್ನ ಸೇವಕರಾದ ಪ್ರವಾದಿಗಳನ್ನು ಉಪಯೋಗಿಸಿಕೊಂಡೆ. ಆದರೆ ಆ ಜನರು ಕೇಳಲಿಲ್ಲ.” ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಏಕೆಂದರೆ ಅವರು ನನ್ನ ವಾಕ್ಯಗಳನ್ನು ಕೇಳಲಿಲ್ಲ. ನಾನು ಅವರಿಗೆ ನನ್ನ ಸೇವಕರಾದ ಪ್ರವಾದಿಗಳನ್ನು ಬೆಳಿಗ್ಗೆ ಪುನಃ ಕಳುಹಿಸಿದೆನು. ಆದರೆ ಅವರು ಕೇಳಲಿಲ್ಲ,” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |