Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 25:28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ, ಕುಡಿಯಲಿಕ್ಕೂ ಕೇಳದಿದ್ದರೆ ನೀನು ಅವರಿಗೆ ಹೀಗೆ ಹೇಳು, “ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನೀವು ಕುಡಿಯಲೇ ಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಒಂದು ವೇಳೆ ಅವರು ಆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ ಕುಡಿಯಲಿಕ್ಕೂ ಒಪ್ಪದಿದ್ದರೆ ಅವರಿಗೆ ಹೀಗೆಂದು ಹೇಳು - ‘ಸರ್ವಶಕ್ತ ಸರ್ವೇಶ್ವರನ ನುಡಿ ಇವು: ನೀವು ಕುಡಿಯಲೇಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಅವರು ಒಂದು ವೇಳೆ ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಳ್ಳಲಿಕ್ಕೂ ಕುಡಿಯಲಿಕ್ಕೂ ಒಲ್ಲದಿದ್ದರೆ ನೀನು ಅವರಿಗೆ ಹೀಗೆ ಹೇಳು - ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ - ನೀವು ಕುಡಿಯಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 “ಅವರು ನಿನ್ನ ಕೈಯಿಂದ ಪಾನಪಾತ್ರೆಯನ್ನು ತೆಗೆದುಕೊಳ್ಳಲು ಒಪ್ಪುವದಿಲ್ಲ. ಅವರು ಅದನ್ನು ಕುಡಿಯಲು ಒಪ್ಪುವದಿಲ್ಲ. ಆದರೆ ನೀನು ಅವರಿಗೆ ಹೀಗೆ ಹೇಳು: ‘ನೀವು ಈ ಪಾತ್ರೆಯಿಂದ ಕುಡಿಯಲೇಬೇಕಾಗುವುದೆಂದು ಸರ್ವಶಕ್ತನಾದ ದೇವರು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಅವರು ಪಾತ್ರೆಯನ್ನು ನಿನ್ನ ಕೈಯಿಂದ ತೆಗೆದುಕೊಂಡು ಕುಡಿಯಲು ತಿರಸ್ಕರಿಸಿದರೆ, ನೀನು ಅವರಿಗೆ ಹೇಳಬೇಕಾದದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, ನೀವು ನಿಶ್ಚಯವಾಗಿ ಕುಡಿಯಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 25:28
12 ತಿಳಿವುಗಳ ಹೋಲಿಕೆ  

ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.


ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು.


ನಿನ್ನ ಕೈಯೂ ನಿನ್ನ ಸಂಕಲ್ಪವೂ ಮೊದಲು ನೇಮಿಸಿದ್ದನ್ನೇ ನಡಿಸಿದರು.


ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಶೂನ್ಯರಾಗಿ ಪರಲೋಕ ಸೈನ್ಯದವರಲ್ಲಿಯೂ, ಭೂಲೋಕದವರಲ್ಲಿಯೂ ತನ್ನ ಚಿತ್ತದ ಪ್ರಕಾರ ಮಾಡುತ್ತಾನೆ; ಆತನ ಶಕ್ತಿಯುತ ಕೈಯನ್ನು ತಡೆಹಿಡಿಯಲು ಸಾಧ್ಯವಿಲ್ಲ ‘ನೀನು ಏನು ಮಾಡುತ್ತೀ?’” ಎಂದು ಯಾರೂ ಕೇಳಲಾರರು.


ದೇಶವೆಲ್ಲಾ ನೊಂದು ನಡುಗುತ್ತದೆ; ಏಕೆಂದರೆ ಬಾಬೆಲ್ ದೇಶವು ಹಾಳುಬಿದ್ದು ನಿರ್ಜನವಾಗಲಿ ಎಂದು ಯೆಹೋವನು ಅದರ ವಿಷಯವಾಗಿ ಮಾಡಿಕೊಂಡಿರುವ ಸಂಕಲ್ಪಗಳು ಸ್ಥಿರವಾಗಿವೆ.


ಯೆಹೋವನು ಇಂತೆನ್ನುತ್ತಾನೆ, ಪಾತ್ರೆಯಲ್ಲಿ ಕುಡಿಯುವುದು ಯಾರ ಪಾಲಿಗೆ ಬರಲಿಲ್ಲವೋ, ಅವರೇ ಖಂಡಿತ ಕುಡಿಯಬೇಕಾಗಿರುವಲ್ಲಿ ನೀನು ಅದಕ್ಕೆ ತಪ್ಪಿಸಿಕೊಂಡೀಯಾ? ಆಗುವುದೇ ಇಲ್ಲ, ನೀನು ಕುಡಿದೇ ಕುಡಿಯುವಿ.


ಇದಕ್ಕಾಗಿ ಭೂಲೋಕವು ಪ್ರಲಾಪಿಸುವುದು, ಮೇಲೆ ಆಕಾಶವು ಕಪ್ಪಾಗುವುದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಇದರಿಂದ, ಹಿಂದೆಗೆಯನು” ಎಂದು ನುಡಿಯುತ್ತಾನೆ.


ಆಗ ನಾನು ಯೆಹೋವನ ಕೈಯಿಂದ ಆ ಪಾತ್ರೆಯನ್ನು ತೆಗೆದುಕೊಂಡು ಯೆಹೋವನು ಯಾವ ಜನಾಂಗಗಳ ಬಳಿಗೆ ನನ್ನನ್ನು ಕಳುಹಿಸಿದನೋ, ಆ ಸಕಲ ಜನಾಂಗಗಳು ಅದರಲ್ಲಿ ಕುಡಿಯುವಂತೆ ಮಾಡಿದೆನು.


ಯಾವ ಜನಾಂಗ, ಯಾವ ರಾಜ್ಯ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲಿಕ್ಕೂ, ಬಾಬೆಲಿನ ಅರಸನ ನೊಗಕ್ಕೆ ಹೆಗಲು ಕೊಡಲಿಕ್ಕೂ ಒಪ್ಪದೆ ಇರುವನೋ ಆ ಜನಾಂಗವನ್ನು ನಾನು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ದಂಡಿಸುತ್ತಾ ಬಂದು, ಕಡೆಯಲ್ಲಿ ಅವನ ಕೈಯಿಂದಲೇ ನಿರ್ಮೂಲ ಮಾಡಿಸುವೆನು’ ಇದು ಯೆಹೋವನ ನುಡಿ.


ನನ್ನ ಜನರೇ, ನೀವು ನನ್ನ ಪವಿತ್ರಪರ್ವತದಲ್ಲಿ ನನ್ನ ದಂಡನೆಯ ಕಹಿ ಪಾನಮಾಡಿದ್ದಿರಿ. ನಿಮ್ಮ ಸುತ್ತಲಿರುವ ಸಕಲ ಜನಾಂಗಗಳೂ ಹೀಗೆ ನಿತ್ಯವಾಗಿ ಪಾನಮಾಡುವವು. ಹೌದು ಆ ರಾಜ್ಯಗಳು ಹೀಗೆ ಕುಡಿದು ಕಬಳಿಸಿ ಅಸ್ತಿತ್ವದಲ್ಲಿ ಇಲ್ಲದಂತೆ ಆಗುವವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು