ಯೆರೆಮೀಯ 23:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಸ್ಥಳಗಳಿಗೆ ಸಮಾನವಾಗುವುದು. ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರ್ಷದ ಕೇಡನ್ನು ಬರಮಾಡುವೆನು ಎಂದು ಯೆಹೋವನು ನುಡಿಯುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ಕತ್ತಲೊಳು ಜಾರಿಬೀಳುವ ಇಳುಮೇಡು ಅವರ ಮಾರ್ಗ ತಳ್ಳಲ್ಪಡುವರು, ಅಂಧಕಾರದೊಳು ಬಿದ್ದುಹೋಗುವರು ಕೇಡನ್ನು ಅವರ ಮೇಲೆ ಬರಮಾಡುವೆನು ವಿಚಾರಣೆ ವರುಷದ ಕೇಡನ್ನು ಬರಮಾಡುವೆನು ಸರ್ವೇಶ್ವರನ ನುಡಿ ಇದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆದಕಾರಣ ಅವರ ಮಾರ್ಗವು ಕತ್ತಲಲ್ಲಿ ಜಾರಿಬೀಳುವ ಇಳುಮೇಡುಗಳಿಗೆ ಸಮಾನವಾಗುವದು; ಅವರು ಅಟ್ಟಲ್ಪಟ್ಟು ಅಂಧಕಾರದಲ್ಲಿ ಬಿದ್ದುಹೋಗುವರು; ನಾನು ಅವರ ಮೇಲೆ ಕೇಡನ್ನು, ದಂಡನೆಯ ವರುಷದ ಕೇಡನ್ನು ಬರಮಾಡುವೆನು. ಇದು ಯೆಹೋವನ ನುಡಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಆದ್ದರಿಂದ ನಾನು ಅವರಿಗೆ ನನ್ನ ಸಂದೇಶಗಳನ್ನು ಇನ್ನು ಮೇಲೆ ಕೊಡುವುದಿಲ್ಲ. ಆಗ ಅವರು ಕತ್ತಲಲ್ಲಿ ನಡೆಯಬೇಕಾಗುವುದು. ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ. ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು. ನಾನು ಅವರಿಗೆ ಕೇಡನ್ನು ಬರಮಾಡಿ ಅವರನ್ನು ದಂಡಿಸುವೆನು.” ಇದು ಯೆಹೋವನಿಂದ ಬಂದ ಸಂದೇಶ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 “ಆದ್ದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗಿರುವುದು. ಅವರು ಮುಗ್ಗರಿಸಿಬೀಳುವರು. ನಾನು ಕೇಡನ್ನು ದಂಡನೆಯ ವರ್ಷವನ್ನಾಗಿ ಅವರ ಮೇಲೆ ಬರಮಾಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |