ಯೆರೆಮೀಯ 14:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಮತ್ತು ಇವರ ಪ್ರವಾದನೆಯನ್ನು ಕೇಳುವ ಜನರು ಕ್ಷಾಮ ಮತ್ತು ಖಡ್ಗಗಳ ದೆಸೆಯಿಂದ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಅವರ ಹೆಂಡತಿ ಮತ್ತು ಮಕ್ಕಳನ್ನೂ ಹೂಣಿಡುವುದಕ್ಕೆ ಯಾರೂ ಇರುವುದಿಲ್ಲ; ನಾನು ಅವರ ದುಷ್ಟತನವನ್ನೇ ಅವರ ಮೇಲೆ ಹೊಯ್ದುಬಿಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅವರ ಪ್ರವಾದನೆಗೆ ಕಿವಿಗೊಡುವ ಜನರು ಕೂಡ ಕ್ಷಾಮಖಡ್ಗಗಳಿಗೆ ತುತ್ತಾಗುವರು. ಜೆರುಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು. ಅವರನ್ನೂ ಅವರ ಮಡದಿ ಮಕ್ಕಳನ್ನೂ ಹೂಣಲು ಸಹ ಯಾರೂ ಇರುವುದಿಲ್ಲ. ಅವರ ದುಷ್ಟತನವನ್ನು ಅವರ ಮೇಲೆಯೆ ಸುರಿದುಬಿಡುವೆನು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಮತ್ತು ಇವರ ಪ್ರವಾದನೆಯನ್ನು ಕೇಳುವ ಜನರು ಕ್ಷಾಮಖಡ್ಗಗಳ ದೆಸೆಯಿಂದ ಯೆರೂಸಲೇವಿುನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಅವರ ಹೆಂಡರುಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ; ನಾನು ಅವರ ದುಷ್ಟತನವನ್ನೇ ಅವರ ಮೇಲೆ ಹೊಯ್ದುಬಿಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಯಾರಿಗೆ ಪ್ರವಾದಿಗಳು ಬೋಧನೆ ಮಾಡಿದ್ದರೋ ಅವರನ್ನು ಬೀದಿಗಳಲ್ಲಿ ಎಸೆಯಲಾಗುವದು. ಆ ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಆ ಜನರನ್ನೂ ಅವರ ಹೆಂಡತಿಯರನ್ನೂ ಮಕ್ಕಳನ್ನೂ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಅವರು ಪ್ರವಾದಿಸುವ ಜನರು ಕ್ಷಾಮದ ಮತ್ತು ಖಡ್ಗದ ನಿಮಿತ್ತ ಯೆರೂಸಲೇಮಿನ ಬೀದಿಪಾಲಾಗುವರು. ಅವರನ್ನೂ, ಅವರ ಹೆಂಡತಿಯರನ್ನೂ, ಅವರ ಪುತ್ರಪುತ್ರಿಯರನ್ನೂ ಹೂಳಿಡುವುದಕ್ಕೆ ಯಾರೂ ಇರುವುದಿಲ್ಲ. ಏಕೆಂದರೆ ಅವರಿಗೆ ಅರ್ಹವಾದ ಆಪತ್ತನ್ನು ನಾನು ಅವರ ಮೇಲೆ ಸುರಿಯುತ್ತೇನೆ. ಅಧ್ಯಾಯವನ್ನು ನೋಡಿ |