ಯೆರೆಮೀಯ 10:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಮಾತನಾಡಲಾರವು; ಹೊತ್ತುಕೊಂಡು ಹೋಗಬೇಕು, ನಡೆಯಲಾರವು. ಅವುಗಳಿಗೆ ಹೆದರಬೇಡಿರಿ, ಕೇಡುಮಾಡಲಾರವು; ಒಳ್ಳೆಯದನ್ನು ಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ” ಎಂದು ಹೇಳುತ್ತಾನೆ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಸೌತೆ ತೋಟದ ಬೆದರುಗಂಬದಂತಿರುವ ಈ ಬೊಂಬೆಗಳು ಮಾತನಾಡಲಾರವು. ಅವನ್ನು ಹೊತ್ತುಕೊಂಡು ಹೋಗಬೇಕು, ಅವು ನಡೆಯಲಾರವು. ಅವುಗಳಿಗೆ ನೀವು ಅಂಜಬೇಕಾಗಿಲ್ಲ, ಅವು ಕೇಡುಮಾಡಲಾರವು; ಮೇಲುಮಾಡಲಿಕ್ಕೂ ಸಾಮರ್ಥ್ಯವಿಲ್ಲದಿರುವುವು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಇಂಥಾ ಬೊಂಬೆಗಳು ಸೌತೆಯ ತೋಟದ ಬೆದರುಗಂಬದಂತಿವೆ, ಮಾತಾಡಲಾರವು; ಹೊತ್ತುಕೊಂಡುಹೋಗಬೇಕು, ನಡೆಯಲಾರವು. ಅವುಗಳಿಗೆ ಅಂಜಬೇಡಿರಿ, ಕೇಡುಮಾಡಲಾರವು, ಮೇಲುಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಬೇರೆ ಜನಾಂಗದವರ ವಿಗ್ರಹಗಳು ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಬೆದರುಕಂಬಗಳಂತಿವೆ. ಅವರ ವಿಗ್ರಹಗಳು ಮಾತಾಡಲಾರವು; ಅವು ನಡೆಯಲಾರವು. ಜನರು ಆ ವಿಗ್ರಹಗಳನ್ನು ಹೊತ್ತುಕೊಂಡು ಹೋಗಬೇಕು. ಆದ್ದರಿಂದ ಆ ವಿಗ್ರಹಗಳಿಗೆ ಹೆದರಬೇಡಿರಿ. ಅವು ನಿಮಗೆ ಕೇಡನ್ನೂ ಮಾಡಲಾರವು; ಸಹಾಯವನ್ನೂ ಮಾಡಲಾರವು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಅವರ ವಿಗ್ರಹಗಳು ಮಾತನಾಡುವುದಿಲ್ಲ. ಅವುಗಳನ್ನು ಹೊತ್ತುಕೊಳ್ಳತಕ್ಕದ್ದು, ಏಕೆಂದರೆ ಅವು ನಡೆಯಲಾರವು. ಅವುಗಳಿಗೆ ಭಯಪಡಬೇಡಿರಿ. ಏಕೆಂದರೆ, ಅವು ಕೆಟ್ಟದ್ದನ್ನು ಮಾಡಲಾರವು. ಒಳ್ಳೆಯದನ್ನು ಮಾಡುವುದೂ ಸಹ ಅವುಗಳಲ್ಲಿ ಇಲ್ಲ. ಅಧ್ಯಾಯವನ್ನು ನೋಡಿ |