ಯಾಜಕಕಾಂಡ 8:28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಆ ಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಯಜ್ಞವೇದಿಯಲ್ಲಿ ಅದನ್ನು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಪರಿಮಳಯುಕ್ತ ಪಟ್ಟಾಭಿಷೇಕ ಯಜ್ಞವಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಆಮೇಲೆ ಮೋಶೆ ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು ಬಲಿಪೀಠದಲ್ಲಿ ದಹನಬಲಿ ದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧಕರ ದಹನಬಲಿ, ಯಾಜಕಾಭಿಷೇಕ ಬಲಿಯಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಆಮೇಲೆ ಮೋಶೆ ಅವುಗಳನ್ನು ಅವರ ಕೈಯಿಂದ ತೆಗೆದುಕೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮದ್ರವ್ಯದ ಮೇಲಿಟ್ಟು ಹೋಮಮಾಡಿದನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಸುಗಂಧಕರವಾದ ಪಟ್ಟಾಭಿಷೇಕಯಜ್ಞವಾಗಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ಬಳಿಕ ಮೋಶೆಯು ಆರೋನನ ಮತ್ತು ಅವನ ಪುತ್ರರ ಕೈಗಳಲ್ಲಿರುವ ಈ ವಸ್ತುಗಳನ್ನು ತೆಗೆದುಕೊಂಡನು. ಮೋಶೆ ಅವುಗಳನ್ನು ವೇದಿಕೆಯಲ್ಲಿ ಸರ್ವಾಂಗಹೋಮದ ಮೇಲಿಟ್ಟು ಅವುಗಳನ್ನು ಹೋಮಮಾಡಿದನು. ಅದು ಆರೋನನನ್ನೂ ಅವನ ಪುತ್ರರನ್ನೂ ಯಾಜಕರನ್ನಾಗಿ ನೇಮಿಸುವ ಸಮರ್ಪಣೆಯಾಗಿತ್ತು. ಹೋಮವಾಗಿ ಅರ್ಪಿಸಲ್ಪಟ್ಟ ಈ ಯಜ್ಞವು ಯೆಹೋವನಿಗೆ ಸುಗಂಧಕರವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆಮೇಲೆ ಮೋಶೆಯು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಅವುಗಳನ್ನು ಸುಟ್ಟನು. ಅವು ಯೆಹೋವ ದೇವರಿಗೆ ಬೆಂಕಿಯಿಂದ ಸಮರ್ಪಿಸಿದ ಸುಗಂಧಕರ ಪ್ರತಿಷ್ಠೆಯ ಬಲಿಯಾಗಿದ್ದವು. ಅಧ್ಯಾಯವನ್ನು ನೋಡಿ |