ಯಾಜಕಕಾಂಡ 3:5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆರೋನನ ವಂಶದವರಾದ ಯಾಜಕರು ಅದನ್ನು ಯಜ್ಞವೇದಿಯಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮ ದ್ರವ್ಯದೊಡನೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮ ಆಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಆರೋನನ ವಂಶಜರಾದ ಯಾಜಕರು ಅದನ್ನು ಬಲಿಪೀಠದಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ದಹನಬಲಿಪದಾರ್ಥಗಳೊಡನೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧ ಬಲಿಯಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆರೋನನ ವಂಶದವರಾದ ಯಾಜಕರು ಅದನ್ನು ಯಜ್ಞವೇದಿಯಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ್ರವ್ಯದ ಮೇಲೆಯೇ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮವಾಗಿರುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಬಳಿಕ ಆರೋನನ ಪುತ್ರರು ಕೊಬ್ಬನ್ನು ವೇದಿಕೆಗೆ ತಂದು ಅದನ್ನು ಬೆಂಕಿಯಲ್ಲಿ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ ಮೇಲಿಡಬೇಕು. ಅದು ಅಗ್ನಿಯ ಮೂಲಕ ಅರ್ಪಿಸುವ ಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಆರೋನನ ಪುತ್ರರು ಅದನ್ನು ಬಲಿಪೀಠದಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನಬಲಿಯಾಗಿ ಸುಡಬೇಕು. ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು, ಯೆಹೋವ ದೇವರಿಗೆ ಸುವಾಸನೆಯಾಗಿರುವುದು. ಅಧ್ಯಾಯವನ್ನು ನೋಡಿ |