ಯಾಜಕಕಾಂಡ 27:8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ, ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಯಾವನಾದರು ಬಡವನಾಗಿದ್ದು ನೇಮಕವಾದ ನಾಣ್ಯವನ್ನು ಕೊಡಲಾಗದೆ ಹೋದರೆ ಅವನು ಹರಕೆ ಮಾಡಿ ಪ್ರತಿಷ್ಠಿಸಿದ ವ್ಯಕ್ತಿಯನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆ ಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ತೆರಬೇಕಾದ ನಾಣ್ಯ ಇಷ್ಟೆಂದು ನಿಗದಿ ಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಯಾವನಾದರೂ ಬಡವನಾಗಿ ನೇಮಕವಾದ ಹಣವನ್ನು ಕೊಡಲಾರದೆ ಹೋದರೆ ಅವನು ಹರಕೆಮಾಡಿ ಪ್ರತಿಷ್ಠಿಸಿದ ಮನುಷ್ಯನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ಕೊಡಬೇಕಾದ ಹಣ ಇಷ್ಟೆಂದು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 “ಒಬ್ಬನು ಬೆಲೆಯನ್ನು ಕೊಡಲಾಗದಷ್ಟು ಬಡವನಾಗಿದ್ದರೆ, ಅವನನ್ನು ಯಾಜಕನ ಬಳಿಗೆ ತನ್ನಿರಿ. ಅವನು ಎಷ್ಟು ಹಣ ಕೊಡಲು ಶಕ್ತನಾಗಿದ್ದಾನೆಂದು ಯಾಜಕನು ತೀರ್ಮಾನಿಸುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದರೆ ನೀನು ನೇಮಿಸಿದ ಕ್ರಯವನ್ನು ಕೊಡದಷ್ಟು ಅವನು ಬಡವನಾಗಿದ್ದರೆ, ಅವನನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಅವನಿಗೆ ಕ್ರಯವನ್ನು ನೇಮಿಸಬೇಕು. ಪ್ರಮಾಣ ಮಾಡಿದವನ ಸಂಪತ್ತಿಗೆ ತಕ್ಕಂತೆ ಯಾಜಕನು ಅವನಿಗೆ ಕ್ರಯವನ್ನು ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿ |