ಯಾಜಕಕಾಂಡ 27:25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ದೇವರ ಸೇವೆಯಲ್ಲಿ ನೇಮಕವಾದ ಎಲ್ಲಾ ತೂಕವು ದೇವಾಲಯದ ಶೆಕೆಲ್ ಮೇರೆಗೆ ಇರಬೇಕು. ಇಪ್ಪತ್ತು ಗೇರಾ ತೂಕವು ಒಂದು ಶೆಕೆಲಿಗೆ ಸಮವಾಗಿರಬೇಕೆಂದು ಯಾವಾಗಲೂ ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ದೇವರ ಸೇವೆಯಲ್ಲಿ ಬಳಕೆಯಲ್ಲಿರುವ ‘ಶೆಕೆಲ್’ ಒಂದಕ್ಕೆ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಬೆಲೆಯನ್ನು ನಿಗದಿಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ದೇವರ ಸೇವೆಯಲ್ಲಿ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ನೀವು ಬೆಲೆಯನ್ನು ಯಾವಾಗಲೂ ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 “ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಆ ಬೆಲೆಗಳನ್ನು ಕೊಡಬೇಕು. ಒಂದು ಶೆಕೆಲ್‌ನ ಬೆಲೆಯನ್ನು ಇಪ್ಪತ್ತು ಗೇರಾ ತೂಕದ ಪ್ರಕಾರ ನೀವು ಯಾವಾಗಲೂ ನಿರ್ಣಯಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಇಪ್ಪತ್ತು ಗೇರಾ ತೂಕದ ಶೆಕೆಲ್ ಮೇರೆಗೆ ನೀವು ಕ್ರಯವನ್ನು ನಿಗದಿಮಾಡಬೇಕು. ಅಧ್ಯಾಯವನ್ನು ನೋಡಿ |
“ಯಾವನಾದರೂ ಯೆಹೋವನಿಗೆ ಸಲ್ಲಿಸಬೇಕಾದ ದೇವರ ವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ ಅವನು ಆ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ಪೂರ್ಣಾಂಗವಾದ ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಯೆಹೋವನಿಗೆ ಸಮರ್ಪಿಸಬೇಕು ಅಥವಾ ದೇವರ ಸೇವೆಗೆ ನೇಮಕವಾದ ಎರಡು ಬೆಳ್ಳಿ ನಾಣ್ಯ ಅಥವಾ ಹೆಚ್ಚು ಬೆಲೆ ಬಾಳುವ ಟಗರನ್ನು ಹಿಂಡಿನಿಂದ ತಂದು ಅರ್ಪಿಸಬೇಕು.