ಯಾಜಕಕಾಂಡ 26:26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಜನರು ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿಸುಟ್ಟು, ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಊಟಮಾಡಿದಾಗ ತೃಪ್ತಿಹೊಂದುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ನಿಮ್ಮ ನಿಮ್ಮ ಜೀವನಾಧಾರವನ್ನು ನಾನು ತೆಗೆದುಬಿಟ್ಟಾಗ ಹತ್ತು ಮಂದಿ ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿ ಸುಟ್ಟು, ಅದನ್ನು ಪಡಿ ಪ್ರಕಾರ ಹಂಚಿಕೊಡುವರು. ನೀವು ಅದನ್ನು ತಿಂದರೂ ತೃಪ್ತಿಯಾಗದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ನಾನು ನಿಮ್ಮ ಜೀವನಾಧಾರವನ್ನು ತೆಗೆದುಬಿಟ್ಟಾಗ ಹತ್ತು ಮಂದಿ ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿ ಸುಟ್ಟು ಅದನ್ನು ತೂಕದ ಪ್ರಕಾರ ಹಂಚಿಕೊಡುವರು; ನೀವು ಅದನ್ನು ಉಂಡಾಗ ತೃಪ್ತಿಹೊಂದುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ನಿಮಗೆ ರೊಟ್ಟಿ ದಯಪಾಲಿಸುವುದನ್ನು ನಾನು ನಿಲ್ಲಿಸಿದಾಗ, ಹತ್ತು ಮಂದಿ ಸ್ತ್ರೀಯರು ತಮ್ಮಲ್ಲಿರುವ ಎಲ್ಲಾ ರೊಟ್ಟಿಗಳನ್ನು ಒಂದೇ ಒಲೆಯಲ್ಲಿ ಸುಡುವರು. ಅವರು ಪ್ರತಿ ರೊಟ್ಟಿಯ ತುಂಡನ್ನು ತೂಕ ಮಾಡಿ ಹಂಚಿಕೊಳ್ಳುವರು. ನೀವು ತಿಂದರೂ ಹಸಿದವರಾಗಿಯೇ ಇರುವಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿದಾಗ, ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು, ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ, ನಿಮಗೆ ತೃಪ್ತಿಯಾಗುವುದಿಲ್ಲ. ಅಧ್ಯಾಯವನ್ನು ನೋಡಿ |