Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 22:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಕುಂದುಕೊರತೆ ಇರುವಂಥದ್ದನ್ನು ತರಬಾರದು; ಅಂಥದು ಸಮರ್ಪಣೆ ಆಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಕುಂದುಕೊರತೆ ಇರುವಂಥದನ್ನು ಒಪ್ಪಿಸಬಾರದು; ಅದು ಸ್ವೀಕೃತವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಕುಂದುಕೊರತೆ ಇರುವಂಥದನ್ನು ತರಬಾರದು; ಅಂಥದು ಸಮರ್ಪಕವಾಗುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಆದರೆ ದೋಷವಿರುವ ಯಾವುದನ್ನೂ ಸಮರ್ಪಿಸಬಾರದು. ಏಕೆಂದರೆ ಅದು ನಿಮಗೋಸ್ಕರ ಅಂಗೀಕಾರವಾಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 22:20
14 ತಿಳಿವುಗಳ ಹೋಲಿಕೆ  

ಯಾವುದೇ ಕುಂದುಕೊರತೆ ಅಥವಾ ಊನ ಇರುವ ಎತ್ತು ಮತ್ತು ಕುರಿಗಳನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು. ಅಂಥವುಗಳನ್ನು ಸಮರ್ಪಿಸುವುದು ಆತನಿಗೆ ಅಸಹ್ಯವಾಗಿದೆ.


ಕುರುಡಾದ ಪಶುವನ್ನು ಯಜ್ಞಕ್ಕೆ ಒಪ್ಪಿಸುವುದು ದೋಷವಲ್ಲವೆಂದು ನೆನಸುತ್ತೀರೋ? ಕುಂಟಾದದ್ದನ್ನೂ, ರೋಗದ ಪಶುವನ್ನೂ ಅರ್ಪಿಸುವುದು ದೋಷವಲ್ಲವೆಂದು ನಂಬುತ್ತೀರೋ? ಇಂಥದ್ದನ್ನು ನಿನ್ನ ದೇಶಾಧಿಪತಿಗೆ ಒಪ್ಪಿಸು; ನಿನಗೆ ಮೆಚ್ಚುಗೆ ವ್ಯಕ್ತಪಡಿಸುವನೋ? ನಿಮ್ಮ ಕೋರಿಕೆಯನ್ನು ನೆರವೇರಿಸುವನೋ? ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ,


ಅದು ಕುಂಟಾಗಿ, ಕುರುಡಾಗಿ ಇಲ್ಲವೆ ಬೇರೆ ವಿಧದಿಂದ ವಿರೂಪವಾಗಿದ್ದರೆ ಅದನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು.


ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.


ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ?


ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’” ಅಂದನು.


“‘ಅವನು ದನವನ್ನು ಸರ್ವಾಂಗಹೋಮವಾಗಿ ಸಮರ್ಪಿಸುವುದಾದರೆ ಪೂರ್ಣಾಂಗವಾದ ಗಂಡನ್ನು ತರಬೇಕು. ತನ್ನನ್ನು ಯೆಹೋವನು ಮೆಚ್ಚುವಂತೆ ದೇವದರ್ಶನದ ಗುಡಾರದ ಬಾಗಿಲಿಗೆ ಅದನ್ನು ತರಬೇಕು.


“‘ಯಾವನಾದರೂ ಸಮಾಧಾನಯಜ್ಞವನ್ನು ಮಾಡಬೇಕಾದರೆ ಅವನು ಸಮರ್ಪಿಸುವ ಪಶುವು ದನವಾಗಿದ್ದ ಪಕ್ಷಕ್ಕೆ ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಯೆಹೋವನ ದೃಷ್ಟಿಯಲ್ಲಿ ಪೂರ್ಣಾಂಗವಾಗಿಯೇ ಇರಬೇಕು.


“‘ಸಮಾಧಾನಯಜ್ಞಕ್ಕಾಗಿ ಯೆಹೋವನಿಗೆ ಸಮರ್ಪಿಸುವಂಥದು ಕುರಿ ಅಥವಾ ಆಡು ಆಗಿರುವ ಪಕ್ಷದಲ್ಲಿ, ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಪೂರ್ಣಾಂಗವಾಗಿರಬೇಕು.


“ಯೆಹೋವನಾದ ನಾನು ಒಂದು ನಿಯಮವನ್ನು ನೇಮಿಸಿದ್ದೇನೆ, ಅದೇನೆಂದರೆ: ಎಂದೂ ನೊಗವನ್ನು ಹೊರದ ಮತ್ತು ಯಾವ ದೋಷವಿಲ್ಲದ ಪೂರ್ಣಾಂಗವಾದ ಕೆಂದಾಕಳನ್ನು ನಿಮಗೆ ತಂದುಕೊಡಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು.


ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನು ಸಮರ್ಪಿಸಬೇಕು.


ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ನೀವು ಪೂರ್ಣಾಂಗವಾದ ಹೋರಿಯನ್ನು ಆರಿಸಿಕೊಂಡು ಪವಿತ್ರಾಲಯವನ್ನು ಶುದ್ಧೀಕರಿಸಬೇಕು.


ಬೀಜಹೊಡೆದ, ಕುಟ್ಟಿದ, ಒಡೆದ ಮತ್ತು ಕೊಯ್ದ ಪಶುವನ್ನು ಯೆಹೋವನಿಗೆ ಸಮರ್ಪಿಸಬಾರದು, ಮತ್ತು ನಿಮ್ಮ ದೇಶದಲ್ಲಿ ಪಶುಗಳಿಗೆ ಹಾಗೆ ಮಾಡಲೇ ಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು