Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 18:21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 “‘ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕ ದೇವತೆಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ಸರ್ವೇಶ್ವರ ನಾನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನಿಮ್ಮ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ನಾನು ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ನೀವು ನಿಮ್ಮ ಯಾವ ಮಕ್ಕಳನ್ನೂ ಅಗ್ನಿಯ ಮೂಲಕ ಮೊಲೆಕನಿಗೆ ಕೊಡಬಾರದು. ಇಲ್ಲವಾದರೆ ನೀವು ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡುವಿರಿ. ನಾನೇ ಯೆಹೋವನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ ‘ನಿನ್ನ ಮಕ್ಕಳಲ್ಲಿ ಯಾರನ್ನೂ ಮೋಲೆಕ್ ದೇವತೆಗೆ ಸಮರ್ಪಿಸಿ, ನಿನ್ನ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು. ನಾನು ಯೆಹೋವ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 18:21
30 ತಿಳಿವುಗಳ ಹೋಲಿಕೆ  

ಯೆಹೋವನಿಗೆ ಅಸಹ್ಯವಾಗಿರುವ ಹಲವು ಕೆಟ್ಟಕೆಲಸಗಳನ್ನು ಅವರು ತಮ್ಮ ದೇವತೆಗಳಿಗೋಸ್ಕರ ನಡಿಸುತ್ತಾರಲ್ಲಾ. ತಮ್ಮ ಗಂಡು ಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೋಸ್ಕರ ಬೆಂಕಿಯಲ್ಲಿ ಸುಡುತ್ತಾರಲ್ಲಾ. ನೀವು ನಿಮ್ಮ ದೇವರಾದ ಯೆಹೋವನನ್ನು ಹಾಗೆ ಸೇವಿಸಲೇಬಾರದು.


“‘ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿಮ್ಮ ದೇವರ ನಾಮವನ್ನು ಅಪಕೀರ್ತಿಗೆ ಒಳಪಡಿಸಬಾರದು. ನಾನು ಯೆಹೋವನು.


ಮಕ್ಕಳನ್ನು ಬಲಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರ ಮಂತ್ರಗಳನ್ನು ಮಾಡುವವರು,


ನನ್ನ ಪರಿಶುದ್ಧ ನಾಮದ ಘನತೆಗೆ ಕುಂದು ತರಬಾರದು; ಇಸ್ರಾಯೇಲರಲ್ಲಿ ನಾನು ಪರಿಶುದ್ಧನೆಂದು ಎಣಿಸಲ್ಪಡಬೇಕು; ನಾನು ನಿಮ್ಮನ್ನು ನನ್ನ ಸೇವೆಗೆ ಪ್ರತಿಷ್ಠಿಸಿಕೊಂಡ ಯೆಹೋವನು.


ಅದಕ್ಕೆ ಬದಲಾಗಿ ನೀವು ಆರಾಧಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನೂ ರೆಫಾನ್ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋಗುತ್ತಿದ್ದಿರಲ್ಲಾ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಗಡಿಪಾರು ಮಾಡುವೆನು’ ಎಂಬುದೇ ಆಗಿದೆ.


ನೀವೋ, “ಯೆಹೋವನ ಮೇಜು ಅಶುದ್ಧ, ಅದರ ಮೇಲಣ ನೈವೇದ್ಯ ಅಸಹ್ಯ ಅಂದುಕೊಳ್ಳುವುದರಿಂದ ನನ್ನ ನಾಮವನ್ನು ಅಪಕೀರ್ತಿಗೆ ಗುರಿಮಾಡಿದ್ದೀರಿ.


ಅವರು ಅದನ್ನು ನಿರ್ದೋಷಿಗಳ ರಕ್ತದಿಂದ ತುಂಬಿಸಿ, ತಮ್ಮ ಮಕ್ಕಳನ್ನು ಬಾಳ್ ದೇವತೆಗೆ ಆಹುತಿ ಕೊಡುವುದಕ್ಕೆ ಬಾಳನ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡಿದ್ದಾರಲ್ಲಾ. ನಾನು ಇಂಥಾ ಆಚಾರವನ್ನು ವಿಧಿಸಲಿಲ್ಲ, ಅದರ ಮಾತನ್ನೇ ಆಡಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.


ಇದಲ್ಲದೆ ಆತನು ನಿನಗೆ, “ಸೊಲೊಮೋನನೂ ಅವರ ಮನೆಯವರೂ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ‘ಕೆಮೋಷ್’ ಮತ್ತು ಅಮ್ಮೋನಿಯರ ‘ಮಿಲ್ಕೋಮ್’ ಇವುಗಳನ್ನು ಆರಾಧಿಸಿದ್ದೂ ಮತ್ತು ಅವರ ತಂದೆಯಾದ ದಾವೀದನು ನನ್ನ ನೇಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆ ಹೋದದ್ದೇ ಇದಕ್ಕೆ ಕಾರಣ.


ಅವನು ಯೆರೂಸಲೇಮಿನ ಮೂಡಲಲ್ಲಿರುವ ಗುಡ್ಡದಲ್ಲಿ ಮೋವಾಬ್ಯರ ಕೆಮೋಷ್ ಎಂಬ ಅಸಹ್ಯ ವಿಗ್ರಹಕ್ಕೂ ಮತ್ತು ಅಮ್ಮೋನಿಯರ ಮೋಲೆಕ್ ಎಂಬ ಅಸಹ್ಯ ವಿಗ್ರಹಕ್ಕೂ ಪೂಜಾಸ್ಥಳಗಳನ್ನು ಕಟ್ಟಿಸಿದನು.


“ಆರೋನನೂ ಮತ್ತು ಅವನ ಮಕ್ಕಳೂ ತಾವು ಅಶುದ್ಧರಾಗಿರುವಾಗ ಇಸ್ರಾಯೇಲರಿಂದ ನನಗೆ ಸಮರ್ಪಿಸಲ್ಪಟ್ಟ ಪರಿಶುದ್ಧ ದ್ರವ್ಯಗಳನ್ನು ಮುಟ್ಟಬಾರದೆಂದು ಅವರಿಗೆ ಆಜ್ಞಾಪಿಸು. ಅವರು ನನ್ನ ಪರಿಶುದ್ಧ ನಾಮದ ಘನತೆಗೆ ಕುಂದನ್ನು ತರಬಾರದು; ನಾನು ಯೆಹೋವನು.


ಸಿಕ್ಕೊತ್ ಎಂಬ ನಿಮ್ಮ ಒಡೆಯನನ್ನು, ಕಿಯೂನ್ ಎಂಬ ನಿಮ್ಮ ನಕ್ಷತ್ರ ದೇವತೆಯನ್ನು, ನಿರ್ಮಿಸಿಕೊಂಡಿರುವ ನಿಮ್ಮ ಮೂರ್ತಿಗಳನ್ನು ನೀವು ಹೊತ್ತುಕೊಂಡು ಹೋಗಬೇಕಾಗುವುದು.


ಅವರು ವ್ಯಭಿಚಾರ ಮಾಡಿದ್ದಾರೆ, ಅವರ ಕೈ ರಕ್ತಮಯವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರಮಾಡಿದ್ದಾರೆ, ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬದಲಾಗಿ ಆಹುತಿಕೊಟ್ಟಿದ್ದಾರೆ.


ನೀವು ಬಲಿಯರ್ಪಿಸುತ್ತಾ ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧ ಮಾಡಿಕೊಳ್ಳುತ್ತಿದ್ದೀರೋ? ಇಸ್ರಾಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೋ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.


ಅವರು ಗಂಡು ಮತ್ತು ಹೆಣ್ಣು ಮಕ್ಕಳನ್ನು ಆಹುತಿಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ‘ತೋಫೆತ್’ ಎಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ನಾನು ಆ ಸಂಸ್ಕಾರವನ್ನು ವಿಧಿಸಲಿಲ್ಲ, ಅದು ನನ್ನ ಮನಸ್ಸಿನಲ್ಲಿ ಹುಟ್ಟಲೂ ಇಲ್ಲ.


ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೆನ್ ಹಿನ್ನೋಮ್ ತಗ್ಗಿನಲ್ಲಿದ್ದ “ತೋಫೆತ್” ಎಂಬ ಯಜ್ಞವೇದಿಯ ಸ್ಥಳವನ್ನು ಹೊಲೆಮಾಡಿದನು.


ಇದಲ್ಲದೆ ಅವನು ತನ್ನ ಸ್ವಂತ ಮಗನನ್ನೇ ಆಹುತಿಕೊಟ್ಟನು. ಕಣಿಕೇಳಿಸುವುದು, ಮಾಟಮಂತ್ರಗಳನ್ನು ಮಾಡಿಸುವುದು, ಜೋತಿಷ್ಯ, ಮುಹೂರ್ತಗಳನ್ನು ನೋಡುವುದು ಮತ್ತು ಭೂತಪ್ರೇತಗಳನ್ನೂ ವಿಚಾರಿಸುವುದು, ಇವೇ ಮೊದಲಾದ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನು ಎಬ್ಬಿಸಿದನು.


ಇದಲ್ಲದೆ, ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದುದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯವಾದ ಪೂಜಾಕಾರ್ಯಗಳನ್ನು ಅನುಸರಿಸಿ ತನ್ನ ಮಗನನ್ನು ಅಗ್ನಿಗೆ ಬಲಿಕೊಟ್ಟನು.


ಅವರು ದೇವರಿಗೆ ಮೀಸಲಾಗಿರಬೇಕು; ತಾವು ಸೇವಿಸುವ ದೇವರ ಹೆಸರನ್ನು ಅಪಕೀರ್ತಿಗೆ ಗುರಿಪಡಿಸಬಾರದು. ತಮ್ಮ ದೇವರ ಆಹಾರವನ್ನು ಅಂದರೆ ಯೆಹೋವನ ಹೋಮದ್ರವ್ಯಗಳನ್ನು ಅವರು ಸಮರ್ಪಿಸುವವರು ಆಗಿರುವುದರಿಂದ ಪವಿತ್ರರಾಗಿರಬೇಕು.


“ನಿಮ್ಮ ದೆಸೆಯಿಂದ ಅನ್ಯಜನರ ಮಧ್ಯದಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತಿದೆಂದು” ಬರೆದಿದೆಯಲ್ಲಾ.


ಲಯವಿಲ್ಲದ ದೇವರ ಮಹಿಮೆಯನ್ನು ಅವರು ನಾಶವಾಗುವ ಮನುಷ್ಯ, ಪಶು, ಪಕ್ಷಿ, ಸರಿಸೃಪಗಳು ಇತ್ಯಾದಿಗಳ ರೂಪಗಳೊಂದಿಗೆ ಬದಲಿಸಿಕೊಂಡರು.


ಅವನು ಬೆನ್ ಹಿನ್ನೋಮ್ ಎಂಬ ತಗ್ಗಿನಲ್ಲಿ ಧೂಪ ಹಾಕಿಸಿದ್ದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯ ಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಅಗ್ನಿಪ್ರವೇಶ ಮಾಡಿಸಿದನು.


ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿ ಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ಬಾಳನ ಪೂಜಾಸ್ಥಳಗಳನ್ನು ಕಟ್ಟಿ, ಯೆಹೂದವನ್ನು ಪಾಪಕ್ಕೆ ಸಿಕ್ಕಿಸಿದ್ದಾರೆ; ನಾನು ಇಂಥ ಅಸಹ್ಯಕಾರ್ಯವನ್ನು ವಿಧಿಸಲಿಲ್ಲ, ಅದರ ಸಂಕಲ್ಪವೂ ನನ್ನ ಮನಸ್ಸಿನಲ್ಲಿ ಹುಟ್ಟಲಿಲ್ಲ” ಎಂಬುದೇ.


ಅವರು ತಮ್ಮ ಚೊಚ್ಚಲಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರಾವಸ್ಥೆಗೆ ತಂದೆನು.”


ಸಾವಿರಾರು ಟಗರುಗಳನ್ನೂ, ಲಕ್ಷೋಪಲಕ್ಷ ತೈಲ ಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚುತ್ತಾನೆಯೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲ ಮಗನನ್ನು ಅರ್ಪಿಸಲೋ? ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ?


ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು.


ಅವ್ವಿಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಮಾಡಿ ಪೂಜಿಸುತ್ತಿದ್ದರು. ಸೆಫರ್ವಯಿಮಿನವರು ಅದ್ರಮ್ಮೆಲೆಕ್, ಅನಮ್ಮೆಲೆಕ್ ಎಂಬ ತಮ್ಮ ಕುಲ ದೇವತೆಗಳನ್ನಾಗಿ ಪೂಜಿಸುತ್ತಾ ತಮ್ಮ ಮಕ್ಕಳನ್ನು ಬಲಿ ಅಗ್ನಿಪ್ರವೇಶ ಮಾಡಿಸುತ್ತಿದ್ದರು.


ಬಡವರ ತಲೆಗಳನ್ನು ನೆಲದ ಧೂಳಿನಂತೆ ತುಳಿದು ಬಿಡುತ್ತಾರೆ, ದೀನರ ದಾರಿಗೆ ಅಡ್ಡ ಹಾಕುತ್ತಾರೆ. ಮಗನೂ ಮತ್ತು ತಂದೆಯೂ ಒಬ್ಬಳಲ್ಲಿ ಹೋಗಿ ನನ್ನ ಪವಿತ್ರ ನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು