Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 2:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯಾಕೋಬೇ ನಿನ್ನವರೆಲ್ಲರನ್ನು ಒಂದುಗೂಡಿಸುವೆನು. ಇಸ್ರಾಯೇಲಿನ ಉಳಿದ ಜನರನ್ನು ಒಟ್ಟಿಗೆ ಸೇರಿಸುವೆನು. ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗೆ ಇಡುವೆನು. ಹುಲ್ಲುಗಾವಲಿನ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಕೂಡಿಸುವೆನು. ಜನರು ದೊಡ್ಡ ಶಬ್ದಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 “ಯಕೋಬ ವಂಶಜರೇ, ನಾನು ನಿಮ್ಮನ್ನೆಲ್ಲಾ ಖಂಡಿತವಾಗಿ ಒಟ್ಟುಗೂಡಿಸುವೆನು. ಇಸ್ರಯೇಲಿನ ಅಳಿದುಳಿದ ಜನರನ್ನು ಸೇರಿಸಿಯೇ ಸೇರಿಸುವೆನು. ಹಟ್ಟಿಯಲ್ಲಿರುವ ಕುರಿಗಳಂತೆ ಅವರನ್ನು ಒಟ್ಟಿಗೆ ಸೇರಿಸುವೆನು. ಹುಲ್ಲುಗಾವಲಿನಲ್ಲಿರುವ ಕುರಿಮಂದೆಯಂತೆ ಒಂದುಗೂಡಿಸುವೆನು,” ಎನ್ನುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಯಾಕೋಬೇ, ನಿನ್ನವರನ್ನೆಲ್ಲಾ ಕೂಡಿಸೇ ಕೂಡಿಸುವೆನು; ಇಸ್ರಾಯೇಲಿನ ಜನಶೇಷವನ್ನು ಸೇರಿಸೇ ಸೇರಿಸುವೆನು. ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು, ಕಾವಲ ಮಧ್ಯದಲ್ಲಿನ ಮಂದೆಯ ಹಾಗೆ ಗುಂಪು ಹಾಕುವೆನು; ಜನರು ಗಿಜಿಗುಟ್ಟುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯಾಕೋಬಿನ ಜನರೇ, ನಾನು ನಿಮ್ಮೆಲ್ಲರನ್ನು ಒಟ್ಟಾಗಿ ಸೇರಿಸುತ್ತೇನೆ. ಇಸ್ರೇಲಿನಲ್ಲಿ ಉಳಿದವರನ್ನೆಲ್ಲಾ ಒಟ್ಟುಗೂಡಿಸುತ್ತೇನೆ. ಹಟ್ಟಿಯೊಳಗೆ ಕುರಿಗಳನ್ನು ಸೇರಿಸುವಂತೆ, ಹುಲ್ಲುಗಾವಲಿನಲ್ಲಿ ಕುರಿಮಂದೆ ಸೇರಿಸಲ್ಪಡುವಂತೆ ನಾನು ಅವರನ್ನು ಒಟ್ಟುಗೂಡಿಸುವೆನು. ಆಗ ಆ ಸ್ಥಳವು ಜನಸಮೂಹದ ಗದ್ದಲದಿಂದ ತುಂಬಿಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 “ಯಾಕೋಬೇ, ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು. ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು. ಬೊಚ್ರದ ಕುರಿಗಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆಯಂತೆಯೂ ಅವರನ್ನು ಒಟ್ಟಾಗಿ ಕೂಡಿಸುವೆನು. ಹುಲ್ಲುಗಾವಲಿನ ಕುರಿಮಂದೆಯಂತೆ, ಸ್ಥಳವು ಜನರಿಂದ ತುಂಬಿ ತುಳುಕುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 2:12
28 ತಿಳಿವುಗಳ ಹೋಲಿಕೆ  

ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಇನ್ನೊಂದು ವಿಷಯದಲ್ಲಿ ಇಸ್ರಾಯೇಲ್ ವಂಶದವರ ವಿಜ್ಞಾಪನೆಯನ್ನು ಲಾಲಿಸಿ ನೆರವೇರಿಸುವೆನು; ಅಂದರೆ ಅವರ ಜನಸಂಖ್ಯೆಯನ್ನು ಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು.


ನಿನಗೆ ಯಾವ ದೇವರು ಸಮಾನ? ನೀನು ನಿನ್ನ ಸ್ವತ್ತಿನವರಲ್ಲಿ ಉಳಿದಿರುವ ಅಪರಾಧವನ್ನು ಕ್ಷಮಿಸುವವನೂ, ಅವರ ದ್ರೋಹವನ್ನು ಲಕ್ಷಿಸದವನೂ ಆಗಿದ್ದೀ. ಹೌದು ನಮ್ಮ ದೇವರು ನಿತ್ಯವೂ ಕೋಪಿಸುವವನಲ್ಲ. ಕರುಣೆಯೇ ಆತನಿಗೆ ಇಷ್ಟ.


ಫಲವತ್ತಾದ ಭೂಮಿಯ ಮಧ್ಯದಲ್ಲಿನ ಕಾಡಿನೊಳಗೆ ಪ್ರತ್ಯೇಕವಾಗಿ ತಂಗುವ ನಿನ್ನ ಜನರನ್ನು, ನಿನ್ನ ಸ್ವತ್ತಾದ ಹಿಂಡನ್ನು ನಿನ್ನ ದಿವ್ಯಹಸ್ತದಿಂದ ಮೇಯಿಸು. ಪೂರ್ವಕಾಲದಂತೆ ಬಾಷಾನಿನಲ್ಲಿಯೂ, ಗಿಲ್ಯಾದಿನಲ್ಲಿಯೂ ಮೇಯಲಿ.


ಯೆಹೋವನ ವರವಾದ ಇಬ್ಬನಿಯೂ ಮತ್ತು ಹುಲ್ಲನ್ನು ಬೆಳೆಯಿಸುವ ಹದಮಳೆಗಳೂ ಮಾನವರ ಪ್ರಯತ್ನವಿಲ್ಲದೆ ಹೇಗೆ ಸಮೃದ್ಧಿಯಾಗಿ ಬೆಳೆಯುವವು, ಮಾನವರ ನೆರವನ್ನು ನಿರೀಕ್ಷಿಸದೆ ಹೇಗೆ ಹಿತಕರವಾಗಿರುವವೋ, ಹಾಗೆಯೇ ಯಾಕೋಬಿನ ಜನಶೇಷವು ಬಹು ಜನಾಂಗಗಳ ಮಧ್ಯದಲ್ಲಿ ಹಿತಕರವಾಗಿರುವುದು.


ನಾನು ತೇಮಾನಿನ ಮೇಲೆ ಬೆಂಕಿಯನ್ನು ಸುರಿಸುವೆನು, ಮತ್ತು ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವುದು.”


ಯೆಹೂದ್ಯರು ಮತ್ತು ಇಸ್ರಾಯೇಲರೂ ಒಟ್ಟುಗೂಡಿ ಒಬ್ಬನನ್ನೇ ಶಿರಸ್ಸನ್ನಾಗಿ ಮಾಡಿಕೊಂಡು ದೇಶದೊಳಗಿಂದ ಹೊರಡುವರು; ಇಜ್ರೇಲಿನ ಸುದಿನವು ಅತಿವಿಶೇಷವಾದದ್ದು.


ಇದನ್ನೂ ಅವರಿಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಗೋ, ಇಸ್ರಾಯೇಲರು ವಶವಾಗಿರುವ ಜನಾಂಗಗಳೊಳಗಿಂದ ನಾನು ಅವರನ್ನು ಉದ್ಧರಿಸಿ, ಎಲ್ಲಾ ಕಡೆಯಿಂದಲೂ ಒಟ್ಟಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು.


“ನೀವು ನನ್ನ ಕುರಿಗಳು, ನನ್ನ ಮೇವಿನ ಮಂದೆಯ ಕುರಿಗಳು; ನರಪ್ರಾಣಿಗಳಾದ ನಿಮಗೆ ನಾನು ದೇವರು ಎಂದು ಕರ್ತನಾದ ಯೆಹೋವನು ಅನ್ನುತ್ತಾನೆ.”


ಆದಕಾರಣ ನನ್ನ ಹಿಂಡು ಇನ್ನೆಂದಿಗೂ ಕೊಳ್ಳೆಯಾಗದಂತೆ ನಾನು ಅದನ್ನು ರಕ್ಷಿಸಿ, ಟಗರುಹೋತಗಳಿಗೂ, ಕುರಿಮೇಕೆಗಳಿಗೂ ನ್ಯಾಯತೀರಿಸುವೆನು.”


“‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.


ನಾನು ನನ್ನ ಮಂದೆಯನ್ನು ಯಾವ ದೇಶಗಳಿಗೆ ಅಟ್ಟಿಬಿಟ್ಟೆನೋ, ಆ ಸಕಲ ದೇಶಗಳಿಂದ ಉಳಿದ ಕುರಿಗಳನ್ನು ಕೂಡಿಸಿ, ತಮ್ಮ ತಮ್ಮ ಹಟ್ಟಿಗಳಿಗೆ ತಿರುಗಿ ಬರಮಾಡುವೆನು; ಅವು ದೊಡ್ಡ ಸಂತಾನವಾಗಿ ಹೆಚ್ಚುವವು.


ಯೆಹೋವನ ಖಡ್ಗವು ರಕ್ತದಿಂದ ತುಂಬಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಲೇಪಿತವಾಗಿದೆ. ಏಕೆಂದರೆ ಯೆಹೋವನು ಬೊಚ್ರದಲ್ಲಿ ಬಲಿಯನ್ನೂ, ಎದೋಮ್ ಸೀಮೆಯಲ್ಲಿ ದೊಡ್ಡ ಹತ್ಯೆಯನ್ನೂ ಮಾಡಬೇಕೆಂದಿದ್ದಾನೆ.


ಇಸ್ರಾಯೇಲರೇ, ತುಂಬಿತುಳುಕುವ ಯೂಫ್ರೆಟಿಸ್ ನದಿಯಿಂದ ಐಗುಪ್ತ ದೇಶದ ನದಿಯವರೆಗೆ ಯೆಹೋವನು ತೆನೆಗಳನ್ನು ಒಕ್ಕುವ ದಿನವು ಬರುತ್ತದೆ; ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಆರಿಸುವನು.


ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೆಯ ಸಾರಿ ಕೈಹಾಕಿ, ಅಶ್ಶೂರ, ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಸಮುದ್ರದ ಕರಾವಳಿ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು.


ಆ ಕಾಲದಲ್ಲಿ ಯೆಹೂದ ವಂಶವು ಇಸ್ರಾಯೇಲ್ ವಂಶದೊಡನೆ ಜೊತೆಯಾಗಿ ನಡೆಯುವುದು. ಎರಡೂ ಸೇರಿ ನಾನು ನಿಮ್ಮ ಪೂರ್ವಿಕರಿಗೆ ಬಾಧ್ಯವಾಗಿ ದಯಪಾಲಿಸಿದ ದೇಶಕ್ಕೆ ಉತ್ತರ ಸೀಮೆಯನ್ನು ಬಿಟ್ಟು ಬರುವವು.


ಬೆಲಗನು ಸತ್ತ ನಂತರ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಅಧಿಪತ್ಯಕ್ಕೆ ಬಂದನು.


ಪಟ್ಟಣ ಪ್ರದೇಶಗಳು ಹಾಳಾಗಿ ಪಶುಪಾಲಕರಿಗೆ ಹುಲ್ಲುಗಾವಲುಗಳಾಗುವವು. ಕುರಿಮರಿಗಳು ಅಲ್ಲಿ ಮೇಯುವವು.


ಹೊಡೆದು ಹೋಗುವವನು ಅವರ ಮುಂದೆ ಹೊರಟಿದ್ದಾನೆ. ಅವರೂ ಬಾಗಿಲನ್ನು ಒಡೆದು ನುಗ್ಗಿ ಹೊರಟಿದ್ದಾರೆ. ಅವರ ಅರಸನು ಅವರ ಮುಂದೆ ತೆರಳಿದ್ದಾನೆ. ಯೆಹೋವನು ಅವರ ಮುಂಭಾಗದಲ್ಲಿ ನಡೆಯುತ್ತಿದ್ದಾನೆ.


ಕುರಿಮಂದೆಗೆ ರಕ್ಷಣೆ ಕೊಡುವ ಗೋಪುರವೇ, ಚೀಯೋನ್ ಯುವತಿಯ ಸುಭದ್ರ ಕೋಟೆಯೇ, ನಿನ್ನ ಹಿಂದಿನ ಆಡಳಿತವು ನಿನಗೆ ದೊರೆಯುವುದು. ಯೆರೂಸಲೇಮ್ ಪುರಿಯ ರಾಜ್ಯಾಧಿಕಾರವು ನಿನಗೆ ಲಭಿಸುವುದು.


ಇದಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು, ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳ, ಬಹು ಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವರು.


ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.


“‘“ಜನಾಂಗಗಳ ವಶದಿಂದ ಅವುಗಳನ್ನು ತಪ್ಪಿಸಿ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ, ಇಸ್ರಾಯೇಲಿನ ಪರ್ವತಗಳ ಮೇಲೆಯೂ, ಹಳ್ಳಗಳ ಬಳಿಯಲ್ಲಿಯೂ, ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಮೇಯಿಸುವೆನು.


ಆ ಕಾಲದಲ್ಲಿ ನಿಮ್ಮನ್ನು ಕರೆದು ತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು. ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೇ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿ ಸ್ತೋತ್ರಗಳಿಗೆ ಗುರಿಮಾಡುವೆನು” ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು