Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 1:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅಬ್ರಹಾಮನಿಂದ ದಾವೀದನ ವರೆಗೂ ಒಟ್ಟು ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿನ ದಾಸತ್ವಕ್ಕೆ ಹೋಗುವವರೆಗೂ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿನ ದಾಸತ್ವದ ದಿನದಿಂದ ಕ್ರಿಸ್ತನವರೆಗೆ ಹದಿನಾಲ್ಕು ತಲೆಮಾರುಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹೀಗೆ ಒಟ್ಟು, ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು, ದಾವೀದನಿಂದ ಬಾಬಿಲೋನಿನ ದಾಸ್ಯದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹೀಗೆ ಅಬ್ರಹಾಮನಿಂದ ದಾವೀದನವರೆಗೂ ಒಟ್ಟು ಹದಿನಾಲ್ಕು ತಲೆಗಳು. ದಾವೀದ ಮೊದಲುಗೊಂಡು ಬಾಬೆಲಿಗೆ ಸೆರೆಹೋಗುವವರೆಗೂ ಹದಿನಾಲ್ಕು ತಲೆಗಳು. ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನವರೆಗೂ ಹದಿನಾಲ್ಕು ತಲೆಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಆಸೆ ಅಬ್ರಾಹಾಮಾಕ್ನಾ ದಾವಿದಾ ಪತರ್ ಚೆವ್ದಾ ಟಕ್ಲಿ, ದಾವಿದಾಕ್ನಾ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾ ಕಾಲಾ ಪತರ್ ಚೆವ್ದಾ ಟಕ್ಲಿ, ಅನಿ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾಕ್ನಾ ಕ್ರಿಸ್ತಾ ಪತರ್ ಚೆವ್ದಾ ಟಕ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 1:17
5 ತಿಳಿವುಗಳ ಹೋಲಿಕೆ  

ಯೆರೂಸಲೇಮಿನಲ್ಲಿದ್ದ ಎಲ್ಲಾ ಪ್ರಭುಗಳನ್ನೂ, ಭಟರನ್ನೂ, ಕಮ್ಮಾರರನ್ನೂ, ಪರಾಕ್ರಮಶಾಲಿಗಳನ್ನು ಒಟ್ಟಾಗಿ ಹತ್ತು ಸಾವಿರ ಜನರನ್ನು ಸೆರೆಹಿಡಿದು ತನ್ನ ದೇಶಕ್ಕೆ ಕರೆದುಕೊಂಡು ಹೋದನು. ದೇಶದಲ್ಲಿ ಕೇವಲ ಸಾಮಾನ್ಯ ಜನರಾಗಿದ್ದ ಬಡವರು ಹೊರತಾಗಿ ಯಾರನ್ನೂ ಬಿಡಲಿಲ್ಲ.


ಆ ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಪೀಠಗಳು, ಈ ಪಟ್ಟಣದಲ್ಲಿ ನಿಂತಿರುವ ಉಪಕರಣಗಳು, ಇವುಗಳ ವಿಷಯವಾಗಿ, ಅಂದರೆ ಯೆಹೋವನ ಆಲಯದಲ್ಲಿಯೂ ಯೆಹೂದದ ಅರಸನ ಮನೆಯಲ್ಲಿಯೂ,


ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡು ಅವನಿಗೆ “ನಾವು ಮೆಸ್ಸೀಯನನ್ನು ಕಂಡುಕೊಂಡೆವು” (ಮೆಸ್ಸೀಯನು ಎಂದರೆ ಕ್ರಿಸ್ತನು) ಎಂದು ಹೇಳಿ,


ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿದ್ದ ಯೋಹಾನನು ಕೇಳಿದಾಗ, ಆತನ ಬಳಿಗೆ ತನ್ನ ಶಿಷ್ಯರನ್ನು ಕಳುಹಿಸಿ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು