ಪ್ರಸಂಗಿ 2:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಲೋಕ ವ್ಯವಹಾರವು ಕೆಟ್ಟದ್ದೆಂದು ನನಗೆ ಕಂಡುಬಂದದ್ದರಿಂದ ಜೀವವೇ ಅಸಹ್ಯವಾಗಿ ತೋರಿತು. ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಲೋಕದ ಆಗುಹೋಗುಗಳು ಕೇಡಿಗೆ ಈಡಾಗುವುವೆಂದು ನನಗೆ ಕಂಡುಬಂದಿತು. ಜೀವನವೇ ನೀರಸವೆಂದು ನನಗೆ ತೋಚಿತು; ಗಾಳಿಯನ್ನು ಹಿಡಿಯಲು ಬೆನ್ನಟ್ಟಿಹೋದಂತೆ ಸಮಸ್ತವೂ ವ್ಯರ್ಥವೇ ಸರಿ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಲೋಕವ್ಯವಹಾರವು ಕೆಟ್ಟದ್ದೆಂದು ನನಗೆ ಕಂಡುಬಂದದರಿಂದ ಜೀವವೇ ಅಸಹ್ಯವಾಗಿ ತೋರಿತು; ಗಾಳಿಯನ್ನು ಹಿಂದಟ್ಟಿದ ಹಾಗೆ ಸಮಸ್ತವೂ ವ್ಯರ್ಥ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಈ ಲೋಕದ ಕಾರ್ಯಗಳೆಲ್ಲಾ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ನನಗೆ ಕಂಡುಬಂದದ್ದರಿಂದ ಜೀವನವೇ ನನಗೆ ಅಸಹ್ಯವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಸೂರ್ಯನ ಕೆಳಗೆ ನಡೆಯುವ ಕಾರ್ಯವು ನನಗೆ ದುಃಖಕರವಾಗಿ ತೋರಿತು. ಆದಕಾರಣ ನಾನು ನನ್ನ ಜೀವನವನ್ನು ಹಗೆ ಮಾಡಿದೆನು. ಗಾಳಿಯನ್ನು ಬೆನ್ನಟ್ಟುವಂತೆ ಎಲ್ಲವೂ ವ್ಯರ್ಥವಾಗಿದೆ. ಅಧ್ಯಾಯವನ್ನು ನೋಡಿ |