ಪ್ರಸಂಗಿ 2:10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ನನ್ನ ಕಣ್ಣು ಬಯಸಿದ್ದೆಲ್ಲವನ್ನು, ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ. ಯಾವ ಸಂತೋಷವನ್ನು ಅನುಭವಿಸುವುದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ. ಏಕೆಂದರೆ ನನ್ನ ಹೃದಯವು ನಾನು ನಡಿಸುವ ಕಾರ್ಯಗಳಲ್ಲಿ ಹರ್ಷಿಸುತ್ತಿತ್ತು. ನನ್ನ ಪ್ರಯಾಸದಿಂದ ನನಗೆ ದೊರೆತ ಫಲವು ಇದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ಒಪ್ಪಿಸಿದೆ. ಹೃದಯ ಕೋರಿದ ಸಂತೋಷವನ್ನು ಅದಕ್ಕೆ ನಿರಾಕರಿಸಲಿಲ್ಲ. ನನ್ನ ಮನ ಎಲ್ಲಾ ಕಾರ್ಯಕಲಾಪಗಳಲ್ಲೂ ಉಲ್ಲಾಸಗೊಳ್ಳುತ್ತಿತ್ತು. ಇವೆಲ್ಲ ನನ್ನ ಪ್ರಯಾಸಕ್ಕೆ ದೊರೆತ ಫಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನನ್ನ ಕಣ್ಣು ಬಯಸಿದ್ದೆಲ್ಲವನ್ನೂ ಅದಕ್ಕೆ ನಾನು ಒಪ್ಪಿಸದೆ ಬಿಡಲಿಲ್ಲ; ಯಾವ ಸಂತೋಷವನ್ನನುಭವಿಸುವದಕ್ಕೂ ನನ್ನ ಹೃದಯವನ್ನು ತಡೆಯಲಿಲ್ಲ; ಏಕಂದರೆ ನನ್ನ ಹೃದಯವು ನನ್ನ ಕಾರ್ಯಗಳಲ್ಲೆಲ್ಲಾ ಹರ್ಷಿಸುತ್ತಿತ್ತು; ನನ್ನ ಪ್ರಯಾಸದಿಂದೆಲ್ಲಾ ನನಗಾದ ಲಾಭವು ಇದೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನನ್ನ ಕಣ್ಣುಗಳು ಬಯಸಿದ್ದನ್ನೆಲ್ಲ ನನಗೋಸ್ಕರ ಪಡೆದುಕೊಂಡೆನು. ಯಾವುದೇ ಸುಖದಿಂದಾಗಲಿ ನನ್ನ ಹೃದಯವನ್ನು ನಾನು ತಡೆಹಿಡಿಯಲಿಲ್ಲ; ಯಾಕೆಂದರೆ ನನ್ನ ಕಾರ್ಯಗಳಲ್ಲಿ ನನ್ನ ಹೃದಯವು ಸಂತೋಷಗೊಂಡಿತ್ತು. ನನ್ನ ಪ್ರಯಾಸದ ಫಲವು ಅದೊಂದೇ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ನನ್ನ ಕಣ್ಣು ಬಯಸಿದ್ದೆಲ್ಲವನ್ನು ಅದರಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ. ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು. ಇದು ನನ್ನ ಎಲ್ಲಾ ಪ್ರಯಾಸದಿಂದ ನನಗೆ ಬಂದ ಬಹುಮಾನ. ಅಧ್ಯಾಯವನ್ನು ನೋಡಿ |