Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೆಹೋವನು ತನ್ನ ಸಂಕಲ್ಪವನ್ನು ಸಿದ್ಧಿಗೆ ತಂದು ತಾನು ಪುರಾತನಕಾಲದಲ್ಲಿ ನುಡಿದ ಮಾತನ್ನು ಈಡೇರಿಸಿದ್ದಾನೆ; ಆತನು ಕರುಣಿಸದೆ ನಿನ್ನನ್ನು ಕೆಡವಿ, ನಿನ್ನ ವೈರಿಗಳಿಗೆ ಆನಂದವಾಗುವಂತೆ ಮಾಡಿ ನಿನ್ನ ವಿರೋಧಿಗಳ ಕೊಂಬನ್ನು ಎತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸರ್ವೇಶ್ವರ ಸಿದ್ಧಿಗೆ ತಂದಿದ್ದಾನೆ ತನ್ನ ಸಂಕಲ್ಪವನ್ನು ಈಡೇರಿಸಿದ್ದಾನೆ ಪುರಾತನ ಕಾಲದಲ್ಲಿ ತಾನು ನುಡಿದುದನ್ನು. ನಿನ್ನನ್ನು ಧ್ವಂಸಮಾಡಿದ್ದಾನೆ ದಯೆದಾಕ್ಷಿಣ್ಯವಿಲ್ಲದೆ. ಆನಂದ ತಂದಿದ್ದಾನೆ ವೈರಿಗಳಿಗೆ ಕೋಡುಮೂಡಿಸಿದ್ದಾನೆ ವಿರೋಧಿಗಳಿಗೆ !

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೆಹೋವನು ತನ್ನ ಸಂಕಲ್ಪವನ್ನು ಸಿದ್ಧಿಗೆ ತಂದು ತಾನು ಪುರಾತನಕಾಲದಲ್ಲಿ ನುಡಿದ ಮಾತನ್ನು ಈಡೇರಿಸಿದ್ದಾನೆ; ಆತನು ಕರುಣಿಸದೆ [ನಿನ್ನನ್ನು] ಕೆಡವಿ ನಿನ್ನ ವೈರಿಗಳಿಗೆ ಆನಂದವಾಗುವಂತೆ ಮಾಡಿ ನಿನ್ನ ವಿರೋಧಿಗಳ ಕೊಂಬನ್ನು ಎತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೆಹೋವನು ತಾನು ನಿಯೋಜಿಸಿದಂತೆ ಮಾಡಿದನು. ತಾನು ಮಾಡುತ್ತೇನೆಂದು ಹೇಳಿದ್ದನ್ನು ಆತನು ಮಾಡಿದ್ದಾನೆ. ಪುರಾತನ ಕಾಲದಿಂದ ತಾನು ವಿಧಿಸಿದ್ದನ್ನು ಆತನು ಮಾಡಿದ್ದಾನೆ. ಆತನು ನಿಷ್ಕರುಣೆಯಿಂದ ನಾಶಮಾಡಿದ್ದಾನೆ. ನಿನಗೆ ಸಂಭವಿಸಿದವುಗಳ ಮೂಲಕವಾಗಿ ಆತನು ನಿನ್ನ ವೈರಿಗಳನ್ನು ಸಂತೋಷಪಡಿಸಿದ್ದಾನೆ. ಆತನು ನಿನ್ನ ವೈರಿಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. ಅವರು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. ಅವರು ಕೆಡವಿ ಕನಿಕರಿಸಲಿಲ್ಲ. ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:17
28 ತಿಳಿವುಗಳ ಹೋಲಿಕೆ  

ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನೀನು ನಿನ್ನ ಹೇರಳವಾದ ಹೇಯ ವಿಗ್ರಹಗಳಿಂದಲೂ, ಅಸಹ್ಯ ವಸ್ತುಗಳಿಂದಲೂ ನನ್ನ ಪವಿತ್ರಾಲಯವನ್ನು ಹೊಲಸು ಮಾಡಿದ್ದರಿಂದ ಖಂಡಿತವಾಗಿ ನಾನು ನಿನ್ನನ್ನು ಕುಂದಿಸುವೆನು, ನಾನು ನಿನಗೆ ಕರುಣೆ ತೋರಿಸೆನು, ಕಟಾಕ್ಷಿಸೆನು.


ಅವನ ವಿರೋಧಿಗಳ ಹಸ್ತವನ್ನು ಉನ್ನತಪಡಿಸಿದ್ದೀ; ಅವನ ವೈರಿಗಳಿಗೆಲ್ಲಾ ಆನಂದವಾಗುವಂತೆ ಮಾಡಿದ್ದೀ.


ಆದಕಾರಣ ನಾನು ಕೋಪೋದ್ರೇಕದಿಂದ ವರ್ತಿಸುವೆನು, ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ; ಅವರು ಕೂಗಿಕೊಳ್ಳುವ ಮಹಾ ಶಬ್ದವು ನನ್ನ ಕಿವಿಗೆ ಬಿದ್ದರೂ ಆಲಿಸುವುದಿಲ್ಲ.”


ಅದರ ಲೆಕ್ಕವಿಲ್ಲದ ದ್ರೋಹಗಳಿಗಾಗಿ ಯೆಹೋವನು ಅದನ್ನು ವ್ಯಥೆಗೊಳಿಸಿದ್ದಾನೆ; ಅದರ ವಿರೋಧಿಗಳು ಅದಕ್ಕೆ ಅಧಿಪತಿಗಳಾಗಿದ್ದಾರೆ, ಅದರ ಶತ್ರುಗಳು ನೆಮ್ಮದಿಯಲ್ಲಿದ್ದಾರೆ; ಅದರ ಎಳೆಕೂಸುಗಳು ವಿರೋಧಿಗಳ ವಶದಲ್ಲಿ ಸೆರೆಹೋಗಿವೆ.


ಆದಕಾರಣ ಯೆಹೋವನು ಇಂತೆನ್ನುತ್ತಾನೆ, “ಇಗೋ ಈ ವಂಶಕ್ಕೆ ನಾನೇ ಕೇಡನ್ನು ಕಲ್ಪಿಸುತ್ತೇನೆ, ಅದರ ಭಾರದಿಂದ ನಿಮ್ಮ ಕುತ್ತಿಗೆಗಳನ್ನು ತಪ್ಪಿಸಿಕೊಳ್ಳಲಾರಿರಿ, ನೀವು ತಲೆಯೆತ್ತಿ ನಡೆಯುವುದಕ್ಕಾಗದು. ಅದು ಕೆಟ್ಟ ಕಾಲವೇ ಸರಿ.


ನಾನಂತು, ಅವರನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಎಂದು ಹೇಳಿದನು.


ಯೆಹೋವನು ಚೀಯೋನ್ ನಗರಿಯ ಕೋಟೆಯನ್ನು ನಾಶಪಡಿಸಬೇಕೆಂದು ನೂಲನ್ನು ಎಳೆದಿದ್ದಾನೆ; ಹಾಳು ಮಾಡುತ್ತಿರುವ ತನ್ನ ಕೈಯನ್ನು ಹಿಂದೆಗೆಯದೆ ಪೌಳಿಗೋಡೆಯೂ ಮತ್ತು ಕೋಟೆಯೂ ಮೊರೆಯುವಂತೆ ಮಾಡಿದ್ದಾನೆ; ಅವೆರಡೂ ಕುಸಿದುಹೋಗಿವೆ.


ಈಗ ನೀನು ಯೆಹೂದ್ಯರಿಗೂ ಯೆರೂಸಲೇಮಿನವರಿಗೂ ಯೆಹೋವನು ಹೀಗೆನ್ನುತ್ತಾನೆ, ‘ಆಹಾ, ನಾನು ನಿಮ್ಮ ವಿರುದ್ಧವಾಗಿ ಯೋಚಿಸಿ, ಕೇಡನ್ನು ಕಲ್ಪಿಸುತ್ತಿದ್ದೇನೆ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ದುರ್ಮಾರ್ಗದಿಂದ ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ’ ಎಂಬ ಮಾತನ್ನು ಹೇಳು.


“ನನ್ನ ವಿಷಯದಲ್ಲಿ ಶತ್ರುಗಳಿಗೆ ಸಂತೋಷವಾಗಬಾರದು; ನಾನು ಜಾರಿಬಿದ್ದರೆ ಹಿಗ್ಗಬಾರದು” ಅಂದುಕೊಂಡೆನು.


ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು; ನನ್ನ ವಿಷಯದಲ್ಲಿ ಹಿಗ್ಗುವುದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.


ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ; ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು, ಅವಮಾನವನ್ನೂ, ಅಪಕೀರ್ತಿಯನ್ನೂ ಹೊಂದಲಿ.


ಎಲೈ, ಎಲ್ಲಾ ಫಿಲಿಷ್ಟಿಯರೇ, ನಿಮ್ಮನ್ನು ಹೊಡೆದ ಕೋಲು ಮುರಿದುಹೋಯಿತೆಂದು ಉಲ್ಲಾಸಗೊಳ್ಳದಿರಿ; ಏಕೆಂದರೆ ನಾಗರ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. ಅದರ ಸಂತತಿಯು ಹಾರುವ ಸರ್ಪವೇ.


ಇದಕ್ಕಾಗಿ ಭೂಲೋಕವು ಪ್ರಲಾಪಿಸುವುದು, ಮೇಲೆ ಆಕಾಶವು ಕಪ್ಪಾಗುವುದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಇದರಿಂದ, ಹಿಂದೆಗೆಯನು” ಎಂದು ನುಡಿಯುತ್ತಾನೆ.


ನೀನು ರೋಷವನ್ನು ಹೊದ್ದುಕೊಂಡು ನಮ್ಮನ್ನು ಹಿಂದಟ್ಟಿದ್ದೀ; ಕನಿಕರಿಸದೆ ಕೊಂದು ಹಾಕಿದ್ದೀ.


ಯೆಹೋವನು ತನ್ನ ರೋಷಾಗ್ನಿಯನ್ನು ಸುರಿಸಿ ತನ್ನ ಸಿಟ್ಟನ್ನು ತೀರಿಸಿದ್ದಾನೆ; ಚೀಯೋನಿನ ಅಸ್ತಿವಾರಗಳನ್ನು ನುಂಗಿಬಿಟ್ಟ ಬೆಂಕಿಯನ್ನು ಅಲ್ಲಿ ಹೊತ್ತಿಸಿದ್ದಾನೆ.


ಆಹಾ, ನಮ್ಮ ದೇವರು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿ ನಮ್ಮನ್ನೂ, ನಮ್ಮನ್ನಾಳುವ ಅಧಿಪತಿಗಳನ್ನೂ ಕುರಿತು ಗದರಿಸಿ ಹೇಳಿದ ಮಾತುಗಳನ್ನು ನೆರವೇರಿಸಿದ್ದಾನೆ; ಯೆರೂಸಲೇಮಿಗೆ ಆದಂತಹ ಕೇಡು ಭೂಮಂಡಲದಲ್ಲಿ ಎಲ್ಲಿಯೂ ಎಂದೂ ಆಗಲಿಲ್ಲವಲ್ಲಾ.


ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪೂರ್ವಿಕರನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ. ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ ‘ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ’” ಅಂದುಕೊಂಡರು.


ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.


ಇದಲ್ಲದೆ ಅವನ ಕತ್ತಿಯನ್ನು ತಿರುಗಿಸಿಬಿಟ್ಟಿದ್ದೀ; ಅವನನ್ನು ಯುದ್ಧದಲ್ಲಿ ನಿಲ್ಲದಂತೆ ಮಾಡಿದ್ದೀ.


ಆತನು ಅದನ್ನೇ ಬರಮಾಡಿ ತನ್ನ ಮಾತನ್ನು ನೆರವೇರಿಸಿದ್ದಾನೆ; ನೀವು ಯೆಹೋವನ ಧ್ವನಿಗೆ ಕಿವಿಗೊಡದೆ ಆತನಿಗೆ ಪಾಪಮಾಡಿದ್ದರಿಂದಲೇ ಇದು ನಿಮಗೆ ಸಂಭವಿಸಿದೆ.


ಯೆಹೋವನು ಇಂತೆನ್ನುತ್ತಾನೆ, “ನಾನು ಭೂಮಂಡಲದಿಂದ ಸಮಸ್ತವನ್ನು ಅಳಿಸಿಬಿಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು