ಪ್ರಕಟನೆ 16:1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ” ಎಂದು ಹೇಳಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಅನಂತರ ದೇವಾಲಯದೊಳಗಿಂದ ಬಂದ ಮಹಾಶಬ್ದವನ್ನು ಕೇಳಿದೆ. ಅದು ಆ ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿ ತುಂಬಿರುವ ದೇವರ ರೋಷವನ್ನು ಭೂಮಿಯ ಮೇಲೆ ಸುರಿಯಿರಿ,” ಎಂದು ಆಜ್ಞಾಪಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆಗ ಪವಿತ್ರಸ್ಥಾನದಿಂದ ಬಂದ ಮಹಾ ಶಬ್ದವನ್ನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ - ನೀವು ಹೋಗಿ ಆ ಏಳು ಪಾತ್ರೆಗಳಲ್ಲಿರುವ ದೇವರ ರೌದ್ರವನ್ನು ಭೂವಿುಯ ಮೇಲೆ ಹೊಯ್ಯಿರಿ ಎಂದು ಹೇಳಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ನಂತರ ಆಲಯದಿಂದ ಒಂದು ಮಹಾಶಬ್ದವು ನನಗೆ ಕೇಳಿಸಿತು. ಆ ಶಬ್ದವು ಏಳು ದೇವದೂತರಿಗೆ, “ನೀವು ಹೋಗಿ ಏಳು ಪಾತ್ರೆಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿ” ಎಂದು ಹೇಳಿತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಆಗ ದೇವಾಲಯದಿಂದ ಬಂದ ಗಟ್ಟಿಯಾದ ಧ್ವನಿಯು, ಏಳು ದೇವದೂತರಿಗೂ, “ಹೋಗಿರಿ, ಏಳು ಬೋಗುಣಿಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿದುಬಿಡಿರಿ!” ಎಂದು ಹೇಳುವುದನ್ನು ನಾನು ಕೇಳಿದೆನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್1 ಮಾನಾ ದೆವಾಚ್ಯಾ ಗುಡಿಚ್ಯಾ ಸಾತ್ ದೆವ್‍ದುತಾನಿಕ್ಡೆ ಬೊಲ್ತಲೊ ಅವಾಜ್ ಮಿಯಾ ಆಯಿಕ್ಲೊ; “ಜಾವಾ ಅನಿ ತ್ಯಾ ಸಾತ್ ದೆವಾಚ್ಯಾ ರಾಗಾಚ್ಯಾ ಕಟೊರ್‍ಯಾನಿತ್ಲೆ ಜಗಾ ವರ್ತಿ ವೊತಾ!” ಅಧ್ಯಾಯವನ್ನು ನೋಡಿ |