ಪರಮಗೀತೆ 4:2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪಿನಂತಿವೆ ನಿನ್ನ ಹಲ್ಲುಗಳು, ಯಾವುದೂ ಒಂಟಿಯಾಗಿರದೆ ಎಲ್ಲವೂ ಒಟ್ಟಾಗಿ ಜೋಡಿಯಾಗಿವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ನಿನ್ನ ಹಲ್ಲುಗಳ ಹೊಳಪು ಉಣ್ಣೆಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಯ ಬಿಳುಪು. ಮೇಲೇರುತ್ತಿವೆ ಅವು ಜೋಡಿ ಜೋಡಿಯಾಗಿ ಒಂಟಿಯಾದುದೊಂದು ಇಲ್ಲ ಅವುಗಳಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ನಿನ್ನ ಹಲ್ಲುಗಳೋ ತೊಳೆಯಲ್ಪಟ್ಟು ಉಣ್ಣೆ ಕತ್ತರಿಸಿಕೊಂಡ ಕೂಡಲೇ ಯಾವದೂ ತನ್ನ ಜೊತೆಯನ್ನು ಕಳೆದುಕೊಳ್ಳದೆ ಜೋಡಿಯಾಗಿ ಮೇಲಕ್ಕೆ ಬರುವ ಕುರಿಯ ಮಂದೆಯ ಹಾಗಿವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ನಿನ್ನ ಹಲ್ಲುಗಳು ಉಣ್ಣೆ ಕತ್ತರಿಸಿದ ನಂತರ ಸ್ನಾನ ಮಾಡಿಕೊಂಡು ತಮ್ಮ ಜೋಡಿಗಳನ್ನು ಕಳೆದುಕೊಳ್ಳದೆ ಜೊತೆಜೊತೆಯಾಗಿ ಬರುವ ಕುರಿಮಂದೆಯಂತಿವೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ನಿನ್ನ ಹಲ್ಲುಗಳ ಹೊಳಪು ಉಣ್ಣೆ ಕತ್ತರಿಸಿ ಸ್ನಾನಮಾಡಿಸಿದ ಕುರಿಮಂದೆಗೆ ಸಮಾನ. ಅವು ಜೊತೆಯಾಗಿಯೇ ಇರುತ್ತವೆ. ಅವುಗಳಲ್ಲಿ ಒಂದೂ ಒಂಟಿಯಾಗಿರದು. ಅಧ್ಯಾಯವನ್ನು ನೋಡಿ |