ನ್ಯಾಯಸ್ಥಾಪಕರು 9:28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201928 ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರ ಸೇವೆಯನ್ನು ಮಾಡಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)28 ಎಬೇದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನಿಗೆ ಏಕೆ ಸೇವೆಮಾಡಬೇಕು? ಅವನು ಯೆರುಬ್ಬಾಳನ ಮಗನಲ್ಲವೇ? ಅವನ ಪುರಾಧಿಕಾರಿ ಜೆಬುನಲ್ಲವೇ? ನಾವು ಅವನಿಗೆ ಏಕೆ ಸೇವೆಮಾಡಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರಿಗೇ ಸೇವೆಮಾಡೋಣ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)28 ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು - ಅಬೀಮೆಲೆಕನು ಎಷ್ಟರವನು? ಶೆಕೆವಿುನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರನ್ನೇ ಸೇವಿಸುವಾ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್28 ಆಗ ಎಬೆದನ ಮಗನಾದ ಗಾಳನು, “ನಾವು ಶೆಕೆಮಿನ ಜನರು. ನಾವು ಅಬೀಮೆಲೆಕನ ಆಜ್ಞೆಗಳನ್ನು ಏಕೆ ಪಾಲಿಸಬೇಕು? ಅವನು ತನ್ನನ್ನು ಯಾರೆಂದು ತಿಳಿದುಕೊಂಡಿದ್ದಾನೆ? ಅಬೀಮೆಲೆಕನು ಯೆರುಬ್ಬಾಳನ ಮಕ್ಕಳಲ್ಲಿ ಒಬ್ಬನು. ಅದು ಸರಿಯಲ್ಲವೇ? ಅಬೀಮೆಲೆಕನು ಜೆಬುಲನನ್ನು ತನ್ನ ಪುರಾಧಿಕಾರಿಯನ್ನಾಗಿ ನೇಮಿಸಿರುವುದೂ ನಿಜವಲ್ಲವೇ? ನಾವು ಅಬೀಮೆಲೆಕನ ಆಜ್ಞೆ ಪಾಲಿಸುವುದು ಬೇಡ. ನಾವು ನಮ್ಮ ಜನರಾದ ಹಮೋರನ ಸಂತತಿಯವರ ಆಜ್ಞೆಯನ್ನೇ ಪಾಲಿಸೋಣ. (ಹಮೋರನು ಶೆಕೆಮನ ತಂದೆ.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ28 ಆಗ ಏಬೆದನ ಮಗನಾದ ಗಾಳನು, “ನಾವು ಅವನನ್ನು ಸೇವಿಸುವ ಹಾಗೆ ಅಬೀಮೆಲೆಕನು ಯಾರು? ಶೆಕೆಮನು ಯಾರು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪ್ರಧಾನನು ಜೆಬೂಲನಲ್ಲವೋ? ಶೆಕೆಮಿನ ತಂದೆಯಾದ ಹಮೋರನ ಮನುಷ್ಯರನ್ನೇ ಸೇವಿಸಿರಿ. ಇವನನ್ನು ನಾವು ಏಕೆ ಸೇವಿಸಬೇಕು? ಅಧ್ಯಾಯವನ್ನು ನೋಡಿ |