ನ್ಯಾಯಸ್ಥಾಪಕರು 19:4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಮೂರು ದಿನ ಅಲ್ಲೇ ಉಳಿಸಿಕೊಂಡನು; ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಆ ಸ್ತ್ರೀ ಹಾಗು ಅವನ ಮಾವ ಅವನನ್ನು ಮೂರು ದಿವಸ ಅಲ್ಲೇ ನಿಲ್ಲಿಸಿಕೊಂಡರು. ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಮೂರು ದಿವಸ ಅಲ್ಲೇ ನಿಲ್ಲಿಸಿಕೊಂಡನು; ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಅವಳ ತಂದೆಯು ಆ ಲೇವಿಯನನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ, ಅಲ್ಲೇ ಇರುವಂತೆ ಕೇಳಿಕೊಂಡನು. ಆದ್ದರಿಂದ ಆ ಲೇವಿಯು ಅಲ್ಲಿ ಮೂರು ದಿನ ಇದ್ದನು. ಅವನು ಅನ್ನಪಾನಮಾಡಿ ಮಾವನ ಮನೆಯಲ್ಲಿ ಮಲಗುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅವನ ಮಾವನು ಅಂದರೆ ಆ ಸ್ತ್ರೀಯ ತಂದೆಯು ಅವನನ್ನು ಅಲ್ಲಿರುವಂತೆ ಒತ್ತಾಯ ಮಾಡಿದನು. ಆದ್ದರಿಂದ ಅವನು ಅಲ್ಲಿ ಊಟಮಾಡುತ್ತಾ, ಕುಡಿಯುತ್ತಾ, ಮಲಗುತ್ತಾ ಮೂರು ದಿನಗಳನ್ನು ಕಳೆದನು. ಅಧ್ಯಾಯವನ್ನು ನೋಡಿ |