Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 19:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆಗ ದಣಿಯು, “ನಾವು ಇಸ್ರಾಯೇಲ್ಯರಿಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯಬಾರದು; ಗಿಬೆಯಕ್ಕೆ ಹೋಗೋಣ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆಗ ಆ ದಣಿ, “ನಾವು ಇಸ್ರಯೇಲರಲ್ಲದ ಅನ್ಯರ ಪಟ್ಟಣದಲ್ಲಿ ತಂಗಬಾರದು; ಗಿಬೆಯಕ್ಕೆ ಹೋಗೋಣ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆಗ ದಣಿಯು - ನಾವು ಇಸ್ರಾಯೇಲ್ಯರಿಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯಬಾರದು; ಗಿಬೆಯಕ್ಕೆ ಹೋಗೋಣ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆದರೆ ಆ ಲೇವಿಯು, “ಬೇಡ, ನಾವು ಪರಿಚಯವಿಲ್ಲದವರ ನಗರದಲ್ಲಿ ಇರುವುದು ಬೇಡ. ಆ ಜನರು ಇಸ್ರೇಲರಲ್ಲ. ನಾವು ಗಿಬೆಯ ನಗರಕ್ಕೆ ಹೋಗೋಣ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆದರೆ ಅವನ ಯಜಮಾನನು ಅವನಿಗೆ, “ನಾವು ಇಲ್ಲಿ ಇಸ್ರಾಯೇಲರಲ್ಲದವರ ಪಟ್ಟಣದಲ್ಲಿ ತಂಗಬಾರದು; ಗಿಬೆಯ ಪಟ್ಟಣಕ್ಕೆ ಹೋಗೋಣ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 19:12
9 ತಿಳಿವುಗಳ ಹೋಲಿಕೆ  

ಅವರು ಯೆಬೂಸಿಯರ ಊರಾದ ಯೆರೂಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತುಮುಳುಗುವ ಸಮಯವಾಗಿದ್ದರಿಂದ ಸೇವಕನು ದಣಿಗೆ, “ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ, ಅಲ್ಲಿ ರಾತ್ರಿಯನ್ನು ಕಳೆಯೋಣ” ಅಂದನು.


ಅವನು ತಿರುಗಿ ತನ್ನ ಆಳಿಗೆ, “ನಾವು ಬೇಗನೆ ಹೋಗಿ ಮುಂದಿರುವ ಗಿಬೆಯದಲ್ಲಾಗಲಿ, ರಾಮದಲ್ಲಾಗಲಿ ಇಳಿದುಕೊಳ್ಳೋಣ ಬಾ” ಅಂದನು.


ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ. ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆ ಮಾಡುವನು.


ಗಿಬ್ಯೋನ್, ರಾಮಾ, ಬೇರೋತ್,


ಚೇಲ, ಎಲೆಫ್, ಯೆಬೂಸಿಯರು ಇದ್ದಂಥ ಯೆರೂಸಲೇಮ್, ಗಿಬೆಯತ್, ಕಿರ್ಯತ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು ಇವೇ. ಬೆನ್ಯಾಮೀನ ಗೋತ್ರಗಳಿಗೆ ದೊರಕಿದ ಸ್ವತ್ತು ಇವೇ.


ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು.


ಅವನು ಇಸ್ರಾಯೇಲರಿಂದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡನು, ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯೂ, ಬೇತೇಲಿನ ಗುಡ್ಡದಲ್ಲಿಯೂ ಇದ್ದರು. ಒಂದು ಸಾವಿರ ಜನರನ್ನು ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಉಳಿದ ಇಸ್ರಾಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು.


ಕಣಿವೆಯನ್ನು ದಾಟಿದ್ದಾರೆ, ಗೆಬದಲ್ಲಿ ದಂಡಿಳಿಸುವ ಅನ್ನುತ್ತಾರೆ. ರಾಮಾ ನಡುಗುತ್ತದೆ, ಸೌಲನ ಗಿಬೆಯು ಓಡಿಹೋಯಿತು.


ಗಿಬ್ಯದಲ್ಲಿ ತುತ್ತೂರಿಯನ್ನು ಊದಿರಿ, ರಾಮದಲ್ಲಿ ಕೊಂಬು ಕೂಗಲಿ, ಬೇತ್ ಅವೆನಿನಲ್ಲಿ ಆರ್ಭಟಿಸಿರಿ, ಬೆನ್ಯಾಮೀನೇ, ಹಿಂದೆ ನೋಡು!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು