ನ್ಯಾಯಸ್ಥಾಪಕರು 19:11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201911 ಅವರು ಯೆಬೂಸಿಯರ ಊರಾದ ಯೆರೂಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತುಮುಳುಗುವ ಸಮಯವಾಗಿದ್ದರಿಂದ ಸೇವಕನು ದಣಿಗೆ, “ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ, ಅಲ್ಲಿ ರಾತ್ರಿಯನ್ನು ಕಳೆಯೋಣ” ಅಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)11 ಅವರು ಯೆಬೂಸಿಯರ ಊರಾದ ಜೆರುಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತು ಮುಳುಗುವ ಕಾಲವಾದುದರಿಂದ ಸೇವಕನು ದಣಿಗೆ, “ದಯವಿಟ್ಟು ಬನ್ನಿ, ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ ಅಲ್ಲಿ ರಾತ್ರಿಯನ್ನು ಕಳೆಯೋಣ,” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)11 ಅವರು ಯೆಬೂಸಿಯರ ಊರಾದ ಯೆರೂಸಲೇವಿುನ ಸಮೀಪಕ್ಕೆ ಬಂದಾಗ ಹೊತ್ತು ಮುಣುಗುವ ಕಾಲವಾದದರಿಂದ ಸೇವಕನು ದಣಿಗೆ - ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ ಅಲ್ಲಿ ರಾತ್ರಿಯನ್ನು ಕಳೆಯೋಣ ಅಂದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್11 ಹೊತ್ತು ಮುಳುಗುವುದರಲ್ಲಿತ್ತು. ಅವರು ಯೆಬೂಸ್ ನಗರದ ಹತ್ತಿರ ಬಂದಿದ್ದರು. ಆಗ ಅವನ ಸೇವಕನು ತನ್ನ ಒಡೆಯನಾದ ಆ ಲೇವಿಯನಿಗೆ, “ಈ ಯೆಬೂಸಿಯರ ನಗರದಲ್ಲಿ ಇದ್ದು ಬಿಡೋಣ, ಈ ರಾತ್ರಿ ಇಲ್ಲಿಯೇ ಕಳೆಯೋಣ” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ11 ಅವರು ಯೆಬೂಸಿಗೆ ಸಮೀಪಿಸಿದಾಗ, ಹೊತ್ತು ಬಹಳ ಹೋಗಿತ್ತು. ಆಗ ಸೇವಕನು ತನ್ನ ಯಜಮಾನನಿಗೆ, “ನೀನು ದಯಮಾಡಿ ಬಾ; ಈ ಯೆಬೂಸಿಯರ ಪಟ್ಟಣಕ್ಕೆ ತಿರುಗಿಕೊಂಡು, ಅಲ್ಲಿ ರಾತ್ರಿಯಲ್ಲಿ ಇಳಿದುಕೊಳ್ಳೋಣ,” ಎಂದನು. ಅಧ್ಯಾಯವನ್ನು ನೋಡಿ |