ನ್ಯಾಯಸ್ಥಾಪಕರು 18:25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ದಾನ್ಯರು ಅವನಿಗೆ, “ನಮ್ಮಲ್ಲಿ ಕೆಲವರು ತುಂಬಾ ಕೋಪಿಸಿಕೊಳ್ಳುವವರಿದ್ದಾರೆ; ಅವರು ನಿಮ್ಮ ಮೇಲೆ ಬಿದ್ದರೆ ನೀನೂ, ನಿನ್ನ ಮನೆಯವರೂ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಾಯಿಮುಚ್ಚಿಕೊಂಡು ಹೋಗು” ಎಂದು ಹೇಳಿ ಮುಂದೆ ನಡೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ದಾನ್ಯರು ಅವನಿಗೆ, “ನಮ್ಮಲ್ಲಿ ಕೆಲವರು ಸಿಟ್ಟಿನವರು. ಅವರು ನಿಮ್ಮ ಮೇಲೆ ಬಿದ್ದರೆ ನೀನೂ ನಿನ್ನ ಮನೆಯವರೂ ಪ್ರಾಣನಷ್ಟಪಡುವಿರಿ. ಆದುದರಿಂದ ಬಾಯಿಮುಚ್ಚಿಕೊಂಡು ಹೋಗಿ,” ಎಂದು ಹೇಳಿ ಮುಂದೆ ನಡೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ದಾನ್ಯರು ಅವನಿಗೆ - ನಮ್ಮಲ್ಲಿ ಕೆಲವರು ಸಿಟ್ಟಿನವರಿದ್ದಾರೆ; ಅವರು ನಿಮ್ಮ ಮೇಲೆ ಬಿದ್ದರೆ ನೀನೂ ನಿನ್ನ ಮನೆಯವರೂ ಪ್ರಾಣನಷ್ಟಪಟ್ಟೀರಿ; ಆದದರಿಂದ ಬಾಯಿಮುಚ್ಚಿಕೊಂಡು ಹೋಗು ಎಂದು ಹೇಳಿ ಮುಂದೆ ನಡೆದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಅದಕ್ಕೆ ದಾನ್ಯರು, “ನೀನು ನಮ್ಮ ಜೊತೆ ವಾದವಿವಾದ ಮಾಡದಿರುವುದೇ ಒಳ್ಳೆಯದು. ನಮ್ಮಲ್ಲಿ ಬಹಳ ಸಿಟ್ಟಿನ ಕೆಲವರಿದ್ದಾರೆ. ನೀನು ಹೀಗೆ ಕೂಗಾಡಿದರೆ ಅವರು ನಿಮ್ಮ ಮೇಲೆ ಧಾಳಿ ಮಾಡಬಹುದು. ಆಗ ನೀನು ಮತ್ತು ನಿನ್ನ ಕುಟುಂಬದವರು ಸತ್ತು ಹೋಗುವಿರಿ” ಎಂದು ಪ್ರತ್ಯುತ್ತರ ಕೊಟ್ಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಆದರೆ ದಾನನ ಮಕ್ಕಳು ಅವನಿಗೆ, “ಕೋಪಿಷ್ಟರು ನಿನ್ನ ಮೇಲೆ ಬೀಳದ ಹಾಗೆ ನೀನು ನಿನ್ನ ಪ್ರಾಣವನ್ನೂ, ನಿನ್ನ ಮನೆಯವರ ಪ್ರಾಣವನ್ನೂ ಕಳೆದುಕೊಳ್ಳದ ಹಾಗೆ ನಿನ್ನ ಶಬ್ದ ನಮಗೆ ಕೇಳಿಸದೆ ಇರಲಿ,” ಎಂದರು. ಅಧ್ಯಾಯವನ್ನು ನೋಡಿ |