Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 17:12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕ ಸೇವೆಗಾಗಿ ಪ್ರತಿಷ್ಠಿಸಿ ತನ್ನ ಮನೆಯಲ್ಲೇ ಇಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಮೀಕನು ಅವನನ್ನು ತಮಗೆ ಯಾಜಕನಾಗಬೇಕೆಂದು ಕೇಳಿಕೊಂಡನು. ಆದ್ದರಿಂದ ಆ ತರುಣನು ಯಾಜಕನಾಗಿ ಮೀಕನ ಮನೆಯಲ್ಲಿಯೇ ವಾಸಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಮೀಕನು ಲೇವಿಯನನ್ನು ಪ್ರತಿಷ್ಠೆ ಮಾಡಿದನು. ಆ ಯೌವನಸ್ಥನು ಅವನಿಗೆ ಯಾಜಕನಾದನು. ಅವನು ಮೀಕನ ಮನೆಯಲ್ಲಿ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 17:12
9 ತಿಳಿವುಗಳ ಹೋಲಿಕೆ  

ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಾಯೇಲರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆದ ಯೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು.


ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.


ಮೋಶೆಯು ಕೋರಹನಿಗೂ ಮತ್ತು ಅವನ ಎಲ್ಲಾ ಸಮೂಹದವರಿಗೂ, “ತನ್ನವರು ಯಾರು ಎಂಬುದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ, ಯಾರನ್ನು ಆದುಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.


ಆಗ ಯೆಹೋವನು ಆರೋನನಿಗೆ, “ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರೂ, ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ, ನಿನ್ನ ಸಂತತಿಯವರು ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.


ಆ ಲೇವಿಯನು ಒಪ್ಪಿಕೊಂಡು ಅಲ್ಲೇ ವಾಸಮಾಡಿದನು; ಹೀಗೆ ಆ ಯೌವನಸ್ಥನು ಅವನ ಮಕ್ಕಳಲ್ಲೊಬ್ಬನಂತಾದನು.


“ಒಬ್ಬ ಲೇವಿಯು ನನ್ನ ಮನೆಯಲ್ಲಿ ಯಾಜಕನಾಗಿರುವುದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು” ಅಂದುಕೊಂಡನು.


ಮೀಕನು ತನಗೆ ಇಂಥಿಂಥವುಗಳನ್ನು ಸಂಬಳವಾಗಿ ಕೊಡುತ್ತಾನೆಂದೂ, ತಾನು ಅವನ ಯಾಜಕನಾಗಿದ್ದೇನೆಂದೂ ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು