Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 16:20 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆಗ ಅವಳು, “ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಲು ಅವನು ಎಚ್ಚೆತ್ತು, ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅವನ ಶಕ್ತಿ ಇಂಗಿಹೋಯಿತು. ಆಗ ಅವಳು, “ಸಂಸೋನರೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತು, “ಮುಂಚಿನಂತೆಯೇ ಈಗಲೂ ಕೊಸರಿಕೊಂಡು ಹೋಗುವೆನು,” ಎಂದುಕೊಂಡನು. ಆದರೆ ಸರ್ವೇಶ್ವರ ತನ್ನನ್ನು ಬಿಟ್ಟುಹೋಗಿ ಇದ್ದಾರೆಂಬುದು ಅವನಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆಗ ಅವಳು - ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನು ಎಚ್ಚತ್ತು - ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆಮೇಲೆ ದೆಲೀಲಳು ಅವನನ್ನು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತನು. “ಮುಂಚಿನಂತೆಯೇ ನಾನು ತಪ್ಪಿಸಿಕೊಳ್ಳುವೆನು” ಎಂದು ಅವನು ತಿಳಿದಿದ್ದನು. ಆದರೆ ಯೆಹೋವನು ಅವನನ್ನು ಬಿಟ್ಟುಹೋಗಿದ್ದಾನೆಂಬುದು ಅವನಿಗೆ ಗೊತ್ತಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವಳು, “ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬಂದಿದ್ದಾರೆ,” ಎಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು, “ಮೊದಲಿನಂತೆಯೇ ನಾನು ಹೊರಗೆ ಹೋಗಿ ಬಿಡುಗಡೆಯಾಗುವೆನು,” ಎಂದುಕೊಂಡನು. ಆದರೆ ಯೆಹೋವ ದೇವರು ತನ್ನನ್ನು ಬಿಟ್ಟು ಹೋಗಿದ್ದಾರೆಂದು ಅವನು ಅರಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 16:20
21 ತಿಳಿವುಗಳ ಹೋಲಿಕೆ  

ಯೆಹೋವನ ಆತ್ಮವು ಸೌಲನನ್ನು ಬಿಟ್ಟು ಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದರಿಂದ


ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು,


ಆದುದರಿಂದ ಇಸ್ರಾಯೇಲ್ಯರು ಶತ್ರುಗಳ ಮುಂದೆ ನಿಲ್ಲಲಾರದೆ ಅವರಿಗೆ ಬೆನ್ನು ತೋರಿಸಿದ್ದಾರೆ. ಅವರು ಶಾಪಗ್ರಸ್ತರೇ ಸರಿ. ಶಾಪಕ್ಕೆ ಕಾರಣವಾದವರನ್ನು ನಿಮ್ಮ ಮಧ್ಯದಿಂದ ತೆಗೆದುಹಾಕುವ ತನಕ ನಾನು ನಿಮ್ಮ ಸಂಗಡ ಬರುವುದಿಲ್ಲ.


ಅವನು ಆಸನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರೇ, ಕಿವಿಗೊಡಿರಿ, ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.


ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವುದಕ್ಕೆ ನಮಗೆ ನಾವೇ ಯೋಗ್ಯರಲ್ಲ ನಮಗಿರುವ ಯೋಗ್ಯತೆಯೂ ದೇವರಿಂದಲೇ ಬಂದದ್ದು.


ಅನ್ಯರು ಅದರ ಶಕ್ತಿಯನ್ನು ಹೀರಿಬಿಟ್ಟಿದ್ದರೂ ಅದಕ್ಕೆ ತಿಳಿಯದು; ಅದರ ತಲೆಯ ಮೇಲೆ ಅಲ್ಲಲ್ಲಿ ನೆರೆಯು ಕಾಣಿಸಿದರೂ ಅದಕ್ಕೆ ಗೊತ್ತಿಲ್ಲ.


ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾರ ವಿರುದ್ಧವಾಗಿ ನಾವು ದ್ರೋಹಮಾಡಿದೆವೋ ಆ ಯೆಹೋವನಲ್ಲವೆ. ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ಉಪದೇಶವನ್ನು ಕೇಳಲಿಲ್ಲ


ಅವಳು ಅವನ ತಲೆಕೂದಲಿನ ಏಳು ಜಡೆಗಳನ್ನು ಗೂಟಕ್ಕೆ ಭದ್ರಮಾಡಿ, “ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ” ಎಂದು ಕೂಗಿದಳು. ಅವನು ನಿದ್ರೆಯಿಂದ ಎಚ್ಚೆತ್ತು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು.


ಆತನು ಅವರಿಗೆ, “ನಿಮ್ಮ ಅಪನಂಬಿಕೆಯಿಂದಲೇ ಆಗಲಿಲ್ಲ. ಸಾಸಿವೇ ಕಾಳಿನಷ್ಟು ನಂಬಿಕೆ ನಿಮಗೆ ಇರುವುದಾದರೆ,


ಅವನನ್ನು ನಿನ್ನ ಶಿಷ್ಯರ ಬಳಿಗೆ ಕರತಂದಿದ್ದೆನು. ಆದರೆ ಗುಣಪಡಿಸುವುದಕ್ಕೆ ಅವರಿಂದ ಆಗಲಿಲ್ಲ” ಅಂದನು.


ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿಟ್ಟು ಅವುಗಳಿಂದ ಅವನನ್ನು ಕಟ್ಟಿ, “ಸಂಸೋನನೇ, ನಿನ್ನ ಮೇಲೆ ಫಿಲಿಷ್ಟಿಯರು ಬಂದರು” ಎಂದು ಕೂಗಿದಳು. ಅವನು ಬೆಂಕಿತಗುಲಿದ ಸೆಣಬಿನ ದಾರವನ್ನೋ ಎಂಬಂತೇ ಆ ಎಳೆಗಳನ್ನು ಹರಿದುಬಿಟ್ಟನು; ಹೀಗೆ ಅವನ ಶಕ್ತಿಯ ರಹಸ್ಯವು ತಿಳಿಯದೆ ಹೋಯಿತು.


ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರು ಬಾಗಿಲಿನ ಕದಗಳನ್ನೂ, ಅದರ ಎರಡು ನಿಲುವುಪಟ್ಟಿಗಳನ್ನೂ, ಅಗುಳಿಗಳನ್ನೂ ಕಿತ್ತು, ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತ ಶಿಖರದ ಮೇಲೆ ಇಟ್ಟನು.


ಅವರ ಆಶ್ರಯದುರ್ಗವಾದ ಯೆಹೋವನು ಅವರನ್ನು ಶತ್ರಗಳಿಗೆ ಒಪ್ಪಿಸಿಕೊಡದಿದ್ದರೆ ಒಬ್ಬನಿಂದ ಸಾವಿರ ಜನರು ಹೇಗೆ ಸೋತುಹೋಗುತ್ತಿದ್ದರು? ಯೆಹೋವನು ಅವರನ್ನು ಕೈಬಿಡದಿದ್ದರೆ ಇಬ್ಬರಿಗೆ ಹೆದರಿ ಹತ್ತು ಸಾವಿರ ಜನರು ಹೇಗೆ ಓಡಿಹೋಗುತ್ತಿದ್ದರು?


ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಇದಲ್ಲದೆ ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ಸುಲಭವಾಗಿ ಜಯಿಸಿಬಿಡುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ, ಯೆಹೋವನು ನಮ್ಮ ಸಂಗಡ ಇದ್ದಾನೆ. ಅವರಿಗೆ ಭಯಪಡಬೇಡಿರಿ” ಎಂದರು.


ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ, ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಅವನನ್ನು ಬಿಟ್ಟು ಹೋಯಿತು,


ಫಿಲಿಷ್ಟಿಯರು ಅವನನ್ನು ಹಿಡಿದು, ಕಣ್ಣುಗಳನ್ನು ಕಿತ್ತು, ಗಾಜಕ್ಕೆ ಒಯ್ದು, ಕಬ್ಬಿಣದ ಬೇಡಿಗಳನ್ನು ಹಾಕಿ, ಸೆರೆಮನೆಯಲ್ಲಿ ಹಿಟ್ಟನ್ನು ಬೀಸುವುದಕ್ಕೆ ಇರಿಸಿದರು.


ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು