ನ್ಯಾಯಸ್ಥಾಪಕರು 16:15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಆಕೆಯು ತಿರುಗಿ ಅವನಿಗೆ, “ನನ್ನನ್ನು ಪ್ರೀತಿಸುತ್ತೇನೆಂದು ನೀನು ನನಗೆ ಹೇಗೆ ಹೇಳುವೇ? ನಿನ್ನ ಮನಸ್ಸು ನನ್ನ ಮೇಲೆ ಇಲ್ಲವಲ್ಲಾ; ಮೂರು ಸಾರಿ ನನ್ನನ್ನು ವಂಚಿಸಿದಿ. ನಿನಗೆ ಇಂಥ ಮಹಾ ಶಕ್ತಿ ಯಾವುದರಿಂದ ಬಂದಿತೆಂಬುದನ್ನು ನನಗೆ ತಿಳಿಸಲಿಲ್ಲ” ಅಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)15 ಆಕೆ ಇನ್ನೊಮ್ಮೆ ಅವನಿಗೆ, “ನಿನ್ನನ್ನು ಪ್ರೀತಿಸುತ್ತೇನೆ” ಎಂದು ನೀವು ನನಗೆ ಹೇಗೆ ಹೇಳಬಹುದು? ನಿಮ್ಮ ಮನಸ್ಸು ನನ್ನ ಮೇಲೆ ಇಲ್ಲವೇ ಇಲ್ಲ; ಮೂರು ಸಾರಿ ವಂಚಿಸಿದಿರಿ. ನಿಮಗೆ ಇಂಥ ಮಹಾಶಕ್ತಿ ಯಾವುದರಿಂದ ಬಂದಿತೆಂಬುದನ್ನು ನನಗೆ ತಿಳಿಸಲಿಲ್ಲ,” ಎಂದಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಆಕೆಯು ತಿರಿಗಿ ಅವನಿಗೆ - ನಿನ್ನನ್ನು ಪ್ರೀತಿಸುತ್ತೇನೆಂದು ನೀನು ನನಗೆ ಹೇಗೆ ಹೇಳಬಹುದು? ನಿನ್ನ ಮನಸ್ಸು ನನ್ನ ಮೇಲೆ ಇಲ್ಲವಲ್ಲಾ; ಮೂರುಸಾರಿ ನನ್ನನ್ನು ವಂಚಿಸಿದಿ. ನಿನಗೆ ಇಂಥ ಮಹಾಶಕ್ತಿ ಯಾವದರಿಂದ ಬಂದಿತೆಂಬದನ್ನು ನನಗೆ ತಿಳಿಸಲಿಲ್ಲ ಅಂದಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಆಗ ದೆಲೀಲಳು ಸಂಸೋನನಿಗೆ, “‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀನು ಹೇಗೆ ಹೇಳಲು ಸಾಧ್ಯ? ನನ್ನನ್ನು ನೀನು ನಂಬುವುದೇ ಇಲ್ಲ. ನೀನು ನನಗೆ ನಿನ್ನ ರಹಸ್ಯವನ್ನು ತಿಳಿಸುವುದಿಲ್ಲ. ಮೂರನೆಯ ಸಲ ನೀನು ನನ್ನನ್ನು ವಂಚಿಸಿದೆ. ನೀನು ನನಗೆ ನಿನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ” ಎಂದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಅವಳು ಅವನಿಗೆ, “ನಿನ್ನ ಹೃದಯವು ನನ್ನ ಸಂಗಡ ಇಲ್ಲದೆ ಇರುವಾಗ, ನಿನ್ನನ್ನು ಪ್ರೀತಿಮಾಡುತ್ತೇನೆ ಎಂದು ನೀನು ಹೇಗೆ ಹೇಳುತ್ತೀ? ನೀನು ಈ ಮೂರು ಸಾರಿ ನನಗೆ ವಂಚನೆ ಮಾಡಿದೆ; ನಿನ್ನ ದೊಡ್ಡ ಶಕ್ತಿಯ ರಹಸ್ಯ ಯಾವುದರಲ್ಲಿ ಉಂಟೋ ನನಗೆ ತಿಳಿಸಲಿಲ್ಲ,” ಎಂದಳು. ಅಧ್ಯಾಯವನ್ನು ನೋಡಿ |