ನ್ಯಾಯಸ್ಥಾಪಕರು 15:19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಆತನು ಲೇಹಿಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಅದನ್ನು ಕುಡಿದು ಪುನಃ ಚೈತನ್ಯಹೊಂದಿದನು. ಆದ್ದರಿಂದ ಅದಕ್ಕೆ ಏನ್ ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನ ವರೆಗೂ ಲೆಹೀಯಲ್ಲಿರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)19 ದೇವರು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದರು. ಅವನು ಕುಡಿದು ಪುನಃ ಚೇತನಗೊಂಡನು. ಆದುದರಿಂದ ಅದಕ್ಕೆ ‘ಏನ್ ಹಕ್ಕೋರೇ’ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಆತನು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಕುಡಿದು ಪುನಃ ಚೈತನ್ಯ ಹೊಂದಿದನು. ಆದದರಿಂದ ಅದಕ್ಕೆ ಏನ್‍ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿರುತ್ತದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಲೆಹೀಯ ನೆಲದಲ್ಲಿ ಒಂದು ಸುರಂಗವಿದೆ. ದೇವರು ಆ ಸುರಂಗವನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದನು. ಸಂಸೋನನು ನೀರು ಕುಡಿದು ಪುನಃ ಚೈತನ್ಯ ಪಡೆದನು. ಆದ್ದರಿಂದ ಅವನು ಆ ನೀರಿನ ಬುಗ್ಗೆಗೆ ಏನ್ ಹಕ್ಕೋರೇ ಎಂದು ಕರೆದನು. ಅದು ಇಂದಿಗೂ ಲೆಹೀ ನಗರದಲ್ಲಿ ಇದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಆಗ ದೇವರು ಲೇಹಿಯಲ್ಲಿ ಟೊಳ್ಳಾದ ಸ್ಥಳವನ್ನು ಸೀಳಿಬಿಟ್ಟರು. ಅದರೊಳಗಿಂದ ನೀರು ಹೊರಟು ಬಂತು. ಸಂಸೋನನು ಆ ನೀರನ್ನು ಕುಡಿದದ್ದರಿಂದ ಅವನ ಬಲ ತಿರುಗಿಬಂದು, ಅವನು ಚೇತರಿಸಿಕೊಂಡನು. ಆದ್ದರಿಂದ ಏನ್ ಹಕ್ಕೋರೇ ಎಂದು ಅದಕ್ಕೆ ಹೆಸರಾಯಿತು. ಈ ದಿವಸದವರೆಗೂ ಅದು ಲೇಹಿಯಲ್ಲಿ ಇದೆ. ಅಧ್ಯಾಯವನ್ನು ನೋಡಿ |