Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 14:17 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಕೆಯು ಔತಣದ ಏಳು ದಿನಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನದಲ್ಲಿ ಆಕೆಯು ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳಿಬಿಟ್ಟನು. ಆಕೆಯು ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆಕೆ ಔತಣದ ಏಳು ದಿನಗಳಲ್ಲೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನ ಆಕೆ ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳೇಬಿಟ್ಟನು. ಆಕೆ ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆಕೆಯು ಔತಣದ ಏಳು ದಿನಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನದಲ್ಲಿ ಆಕೆಯು ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳಿಬಿಟ್ಟನು. ಆಕೆಯು ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಂಸೋನನ ಹೆಂಡತಿಯು ಔತಣದ ಏಳು ದಿನಗಳೆಲ್ಲಾ ಅಳುತ್ತಿದ್ದಳು. ಆದ್ದರಿಂದ ಏಳನೆಯ ದಿನ ಅವನು ಒಗಟಿನ ಅರ್ಥವನ್ನು ಅವಳಿಗೆ ಹೇಳಿದನು. ಅವಳು ಪೀಡಿಸಿದ್ದರಿಂದ ಅವನು ಹೇಳಿದನು. ಆಗ ಅವಳು ತನ್ನ ಜನರಲ್ಲಿಗೆ ಹೋಗಿ ಆ ಒಗಟಿನ ಅರ್ಥವನ್ನು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅವಳು ಔತಣದ ಏಳು ದಿವಸಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಆದರೆ ಏಳನೆಯ ದಿವಸದಲ್ಲಿ ಅವಳು, ಅವನನ್ನು ಬಹಳವಾಗಿ ಪೀಡಿಸಿದ್ದರಿಂದ ಒಗಟಿನ ಅರ್ಥವನ್ನು ತಿಳಿಸಿದನು. ಆಗ ಆಕೆ ತನ್ನ ಜನರಿಗೆ ಆ ಒಗಟನ್ನು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 14:17
13 ತಿಳಿವುಗಳ ಹೋಲಿಕೆ  

ಇದಲ್ಲದೆ ಅವಳು ಅವನನ್ನು ದಿನದಿನವೂ ಮಾತಿನಿಂದ ಪೀಡಿಸಿದ್ದರಿಂದ ಅವನಿಗೆ ಸಾಯುವುದು ಒಳ್ಳೆಯದು ಎನ್ನುವಷ್ಟು ಬೇಸರವಾಯಿತು.


ಆದರೂ, ಸ್ನೇಹದ ನಿಮಿತ್ತವಾಗಿ ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟು ರೊಟ್ಟಿಗಳನ್ನು ಕೊಡುತಾನೆಂಬುದು ನಿಜ.


ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ.


ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು.


ಆಗ ದೆಲೀಲಳು ಸಂಸೋನನಿಗೆ “ನೀನು ತಿರುಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವುದರಿಂದ ಕಟ್ಟಬಹುದೆಂದು ತಿಳಿಸು” ಅನ್ನಲು ಅವನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು” ಎಂದು ಹೇಳಿದನು.


ದೆಲೀಲಳು ಸಂಸೋನನಿಗೆ, “ನಿನಗೆ ಇಂಥ ಮಹಾ ಶಕ್ತಿ ಹೇಗೆ ಬಂದಿತು? ನಿನ್ನನ್ನು ಬಲವನ್ನು ಕುಂದಿಸುವುದು ಹೇಗೆ ಎಂಬುದನ್ನು ದಯವಿಟ್ಟು ನನಗೆ ತಿಳಿಸು” ಅಂದಳು.


ಆಗ ಸ್ತ್ರೀಯು ಆ ಮರದ ಹಣ್ಣು ತಿನ್ನುವುದಕ್ಕೆ ಉತ್ತಮವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು ಮತ್ತು ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು.


ಆಕೆಯು ಸಂಸೋನನ ಮುಂದೆ ಅಳುತ್ತಾ, “ನೀನು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ತೊಂದರೆಪಡಿಸಿದಳು. ಅವನು ಆಕೆಗೆ, “ಅದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರ ಕೊಟ್ಟನು.


ಅವರು ಏಳನೆಯ ದಿನ ಸೂರ್ಯ ಮುಳುಗುವುದಕ್ಕಿಂತ ಮೊದಲು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು? ಸಿಂಹಕ್ಕಿಂತ ಬಲಿಷ್ಠವಾದದ್ದು ಯಾವುದು?” ಎಂದು ಹೇಳಲು ಅವನು, “ನೀವು ನನ್ನ ಕಡಸಿನಿಂದ ಉಳದೇ ಹೋಗಿದ್ದರೆ ಒಗಟನ್ನು ಬಿಚ್ಚುವುದು ನಿಮ್ಮಿಂದಾಗುತ್ತಿರಲಿಲ್ಲ” ಅಂದನು.


ಸುಳ್ಳಾಡುವುದಕ್ಕೆ ತಮ್ಮ ನಾಲಿಗೆಯನ್ನು ಬಿಲ್ಲಿನಂತೆ ಬಗ್ಗಿಸುತ್ತಾರೆ; ಸತ್ಯಕ್ಕೆ ಪ್ರತಿಕೂಲವಾಗಿ ದೇಶದಲ್ಲಿ ಪ್ರಬಲಿಸಿದ್ದಾರೆ. ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನು ಅರಿಯರು ಎಂದು ಯೆಹೋವನು ನುಡಿಯುತ್ತಾನೆ.


ಮಿತ್ರನನ್ನು ನಂಬಬೇಡ, ಆಪ್ತನಲ್ಲಿ ಭರವಸವಿಡಬೇಡ. ನಿನ್ನ ಎದೆಯ ಮೇಲೆ ಒರಗುವವಳಿಗೆ ನಿನ್ನ ರಹಸ್ಯ ತಿಳಿಸಬೇಡ ಭದ್ರವಾಗಿಟ್ಟುಕೋ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು