ನ್ಯಾಯಸ್ಥಾಪಕರು 14:16 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಆಕೆಯು ಸಂಸೋನನ ಮುಂದೆ ಅಳುತ್ತಾ, “ನೀನು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ತೊಂದರೆಪಡಿಸಿದಳು. ಅವನು ಆಕೆಗೆ, “ಅದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಆಕೆ ಸಂಸೋನನ ಮುಂದೆ ಅಳುತ್ತಾ, “ನೀವು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀರಷ್ಟೇ; ನನ್ನ ಜನರಿಗೆ ಒಗಟನ್ನು ಹೇಳಿದ್ದೀರಿ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ಪೀಡಿಸಿದಳು. ಅವನು ಆಕೆಗೆ, “ಇದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಆಕೆಯು ಸಂಸೋನನ ಮುಂದೆ ಅಳುತ್ತಾ - ನೀನು ನನ್ನನ್ನು ಪ್ರೀತಿಸುವದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ ಎಂದು ತೊಂದರೆಪಡಿಸಿದಳು. ಅವನು ಆಕೆಗೆ - ಅದನ್ನು ನನ್ನ ತಂದೆತಾಯಿಗಳಿಗೇ ಹೇಳಲಿಲ್ಲ; ನಿನಗೆ ಹೇಳುವೆನೋ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಸಂಸೋನನ ಹೆಂಡತಿಯು ಅವನ ಹತ್ತಿರ ಹೋಗಿ ಅಳುವುದಕ್ಕೆ ಪ್ರಾರಂಭಿಸಿದಳು. ಅವಳು, “ನೀನು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ, ನನ್ನನ್ನು ದ್ವೇಷಿಸುತ್ತಿ; ನೀನು ನಮ್ಮ ಜನರಿಗೆ ಒಗಟನ್ನು ಹೇಳಿರುವೆ; ಆದರೆ ಅದರ ಅರ್ಥವನ್ನು ನನಗೆ ಹೇಳಿಲ್ಲ” ಎಂದು ಗೋಳಾಡತೊಡಗಿದಳು. ಅದಕ್ಕೆ ಸಂಸೋನನು, “ನಾನು ನನ್ನ ತಂದೆತಾಯಿಯರಿಗೆ ಅದನ್ನು ತಿಳಿಸಲಿಲ್ಲ, ನಿನಗೆ ತಿಳಿಸುವೆನೋ?” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಆಗ ಸಂಸೋನನ ಹೆಂಡತಿ ಅವನ ಮುಂದೆ ಅತ್ತು, “ನನ್ನನ್ನು ಹಗೆ ಮಾಡುತ್ತಿರುವೆ. ನೀನು ನನ್ನನ್ನು ನಿಜವಾಗಿ ಪ್ರೀತಿ ಮಾಡುವುದಿಲ್ಲ, ಏಕೆಂದರೆ ನೀನು ನನ್ನ ಜನರಿಗೆ ಒಂದು ಒಗಟನ್ನು ಹೇಳಿ ನನಗೆ ತಿಳಿಸದೆ ಹೋದೆ,” ಎಂದಳು. ಅವನು ಅವಳಿಗೆ, “ಇಗೋ, ನಾನು ನನ್ನ ತಂದೆತಾಯಿಗೆ ಅದನ್ನು ತಿಳಿಸಲಿಲ್ಲ. ನಿನಗೆ ತಿಳಿಸುವೆನೋ?” ಎಂದನು. ಅಧ್ಯಾಯವನ್ನು ನೋಡಿ |