Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 1:15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಕೆಯು, “ನನಗೊಂದು ದಾನಕೊಡಬೇಕು; ನೀನು ನನ್ನನ್ನು ದಕ್ಷಿಣ ಪ್ರಾಂತ್ಯಕ್ಕೆ ಕೊಟ್ಟುಬಿಟ್ಟಿಯಲ್ಲಾ, ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಅಂದಳು. ಆಗ ಅವನು ಆಕೆಗೆ ಮೇಲಣ ಬುಗ್ಗೆ ಮತ್ತು ಕೆಳಗಣ ಪ್ರದೇಶದ ಬುಗ್ಗೆಗಳನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಬುಗ್ಗೆಗಳಿರುವ ಭೂಮಿಯನ್ನು ದಾನವಾಗಿ ಕೊಡಿ,” ಎಂದಳು. ಕಾಲೇಬನು ಆಕೆಗೆ ಮೇಲಿನ ಹಾಗು ಕೆಳಗಿನ ಬುಗ್ಗೆಗಳನ್ನು ದಾನ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಕೆಯು - ನನಗೊಂದು ದಾನಕೊಡಬೇಕು; ನನ್ನನ್ನು ಬೆಗ್ಗಾಡಿಗೆ ಕೊಟ್ಟುಬಿಟ್ಟಿಯಲ್ಲಾ, ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು ಅಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅದಕ್ಕೆ ಅವಳು, “ನನಗೊಂದು ದಾನ ಕೊಡಬೇಕು. ನೀನು ನನಗೆ ನೆಗೆವಿನಲ್ಲಿ ನೀರಿಲ್ಲದ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನನಗೆ ಸ್ವಲ್ಪ ನೀರಿನ ಬುಗ್ಗೆಗಳಿರುವ ಭೂಮಿಯನ್ನು ಕೊಡು” ಎಂದಳು. ಅವಳು ಕೇಳಿಕೊಂಡಂತೆಯೇ ಕಾಲೇಬನು ಅವಳಿಗೆ ಮೇಲಿನ ಮತ್ತು ಕೆಳಗಿನ ಬುಗ್ಗೆಗಳನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ನೀನು ನನಗೆ ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 1:15
9 ತಿಳಿವುಗಳ ಹೋಲಿಕೆ  

ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.


ಭೂಮಿಯು ತನ್ನ ಮೇಲೆ ಅನೇಕಾವರ್ತಿ ಸುರಿಯುವ ಮಳೆಯನ್ನು ಹೀರಿಕೊಂಡು, ಅದು ಯಾರ ನಿಮಿತ್ತವಾಗಿ ವ್ಯವಸಾಯ ಮಾಡಲ್ಪಡುತ್ತದೋ, ಅವರಿಗೆ ಅನುಕೂಲವಾದ ಬೆಳೆಯನ್ನು ಕೊಡುತ್ತದೆ, ಅದು ದೇವರ ಆಶೀರ್ವಾದವನ್ನು ಹೊಂದುತ್ತದೆ.


ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ.


ನಿನ್ನ ದಾಸಿಯು ತಂದ ಈ ಕಾಣಿಕೆಯನ್ನು ಸ್ವಾಮಿಯು ತಮ್ಮ ಸೇವಕರಿಗೆ ಸಲ್ಲಿಸಲಿ.


ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿ, ಎರಡು ಬುದ್ದಲಿ ದ್ರಾಕ್ಷಾರಸ, ಸಿದ್ಧಮಾಡಿದ ಐದು ಕುರಿಗಳ ಮಾಂಸ, ಐವತ್ತು ಸೇರು ಹುರಿಗಾಳು, ಒಣಗಿದ ನೂರು ದ್ರಾಕ್ಷಿ ಗೊಂಚಲುಗಳು, ಅಂಜೂರ ಹಣ್ಣುಗಳು, ಇನ್ನೂರು ಉಂಡೆಗಳು ಇವುಗಳನ್ನು ಕತ್ತೆಗಳ ಮೇಲೆ ಹೇರಿಸಿ,


ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು.


ಆಕೆಯು “ನನಗೊಂದು ಕೊಡುಗೆ ಬೇಕು. ನನ್ನನ್ನು ದಕ್ಷಿಣ ದೇಶದ ಬೆಂಗಾಡಿಗೆ (ಬರಡು ಭೂಮಿ) ಕೊಟ್ಟುಬಿಟ್ಟೆಯಲ್ಲಾ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಎಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.


ಆಕೆಯು ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಹೊಲವನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯಿಂದ ಇಳಿದಳು. ಕಾಲೇಬನು, “ನಿನಗೇನು ಬೇಕು?” ಎಂದು ಆಕೆಯನ್ನು ಕೇಳಲು


ಮೋಶೆಯ ಮಾವನಾದ ಕೇನ್ಯನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ್ಯರ ಜೊತೆಯಲ್ಲಿ ಅರಾದಿನ ದಕ್ಷಿಣದಲ್ಲಿರುವ ಯೆಹೂದ ಅಡವಿಗೆ ಬಂದು ಅಲ್ಲಿನ ಜನರ ಸಂಗಡ ವಾಸಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು